ಪ್ರೇಮಪತ್ರ

ವೈಕಂ ಮುಹಮ್ಮದ್ ಬಷೀರ್ ಕತೆಗಳು

ಅನುವಾದ: ಮೋಹನ ಕುಂಟಾರ್

ಪ್ರ: ಯಾಜಿ ಪ್ರಕಾಶನ

ಸಂ: 9448722800

ವೈಕಂ ಮುಹಮ್ಮದ್ ಬಷೀರ್ ಅವರ ಇಪ್ಪತ್ತಮೂರು ಮಲಯಾಳಂ ಕಥೆಗಳ ಅನುವಾದ ಕೃತಿ ‘ಪ್ರೇಮಪತ್ರ’. ಈ ಮೂಲಕ ಮೋಹನ ಕುಂಟಾರ್ ಎರಡನೇ ಬಾರಿಗೆ ಬಷೀರ್ ಅವರ ಕಥೆಗಳ ಅನುವಾದ ಸಂಕಲನವನ್ನು ಕನ್ನಡಕ್ಕೆ ತಂದಿದ್ದಾರೆ. ಕರ್ನಾಟಕ–ಕೇರಳ ಗಡಿಯಾದ ಕಾಸರಗೋಡಿನ ಮೋಹನ ಅವರು, ಕನ್ನಡಿಗರಿಗೆ ಮಲಯಾಳಂ ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಪರಿಚಯಿಸುತ್ತಾ ಬಂದಿದ್ದಾರೆ. ಈ ಹಿಂದೆ 1999ರಲ್ಲಿ ‘ಬಶೀರ್ ಕತೆಗಳು’ ಎಂಬ ಶೀರ್ಷಿಕೆಯಲ್ಲಿ ಮೋಹನ ಅವರು ಬಷೀರ್ ಅವರ ಹತ್ತು ಕಥೆಗಳನ್ನು ಅನುವಾದ ಮಾಡಿದ್ದರು. ಇದೀಗ ಈ ಅನುವಾದಗಳನ್ನು ಪರಿಷ್ಕರಿಸಿ, ಹೊಸದಾಗಿ 13 ಕಥೆಗಳನ್ನು ಅನುವಾದಿಸಿ ‘ಪ್ರೇಮಪತ್ರ’ ಎಂಬ ಹೊಸ ಸಂಕಲನಕ್ಕೆ ಸೇರಿಸಿದ್ದಾರೆ.

ಇಲ್ಲಿ ಬದುಕಿನ ಹೋರಾಟ, ಸಾಮಾಜಿಕ ಸಮಸ್ಯೆ, ಲೌಕಿಕ ಬದುಕಿನ ಸಂಬಂಧ ಕಟ್ಟಿಕೊಡುವ ಕಥೆಗಳಿವೆ, ಹೀಗೆನ್ನುವುದಕ್ಕಿಂತ ಕಥೆ ಇರುವುದೇ ಜನ ಸಾಮಾನ್ಯರದ್ದು ಎನ್ನಬಹುದು. ಪ್ರೀತಿ, ಪ್ರೇಮಕ್ಕೆ ಹಲವು ಆಯಾಮಗಳು ಹಲವು ಕಥೆಗಳಲ್ಲಿ ಕಾಣಸಿಗುತ್ತವೆ. ಕೆಲವೆಡೆ ಮೊನಚಾದ ವಿನೋದದ ಧಾಟಿಯೂ ಇದೆ. ತಮ್ಮದೇ ನೋವು ನಲಿವುಗಳಿಗೂ ಅಕ್ಷರರೂಪ ನೀಡಿ ತಮ್ಮ ಬದುಕನ್ನೂಬಷೀರ್ ಇಲ್ಲಿ ದಾಖಲಿಸಿದ್ದಾರೆ. ಮೂಲಲೇಖಕರ ಭಾಷೆ, ಶೈಲಿಯನ್ನು ಉಳಿಸಿಕೊಳ್ಳುವ ಮೂಲಕ ಆ ಕಥೆಗಳಲ್ಲಿ ಹೆಚ್ಚಾಗಿರುವ ಸಂಸ್ಕೃತ, ಆಂಗ್ಲಮಿಶ್ರಿತ ಮಲಯಾಳಂ ಹಾಗೂ ಸಾಂಸ್ಕೃತಿಕವಾಗಿ ವಿಶಿಷ್ಟ ಅರ್ಥ ಹೊಂದಿರುವ ಪದಗಳ ಸೊಗಡನ್ನು ಮೋಹನ್ ಅವರು ಉಳಿಸಿಕೊಂಡಿದ್ದಾರೆ. ಹೀಗಾಗಿ ಅನುವಾದವು ಮಲಯಾಳಂ ಕಥೆಗೆ ಬಹಳ ಹತ್ತಿರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.