ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಕರಾವಳಿ ಕಲಾವಿದರ ಸೃಜನಶೀಲತೆಯ ಕೈಗನ್ನಡಿ

Published 26 ಆಗಸ್ಟ್ 2023, 23:28 IST
Last Updated 26 ಆಗಸ್ಟ್ 2023, 23:28 IST
ಅಕ್ಷರ ಗಾತ್ರ

ಕಲೆ ಎಂಬುವುದಕ್ಕೆ ನಿಶ್ಚಿತ ಅವಧಿಯಿಲ್ಲ. ಅದು ಅಮರ. ಅದನ್ನು ರಚಿಸಿದ ಕಲಾವಿದ ಕ್ಷಣಿಕನಾದರೂ ಆ ಕಲೆಯ ಮೂಲಕ ಅವನೂ ಅಮರ. ಇಂತಹ ಕರಾವಳಿಯ ಕಲಾವಿದರನ್ನು ನೆನಪಿಸುವ ಹೊತ್ತಿಗೆ ಈ ಕೃತಿ. ಅವರ ಇತಿಹಾಸವನ್ನು ಅಕ್ಷರ ರೂಪದಲ್ಲಿ ಜಲವರ್ಣಕ್ಕಿಳಿಸಿದ ಕೃತಿ ಇದು.

ತುಳು ಭಾಷೆಯಲ್ಲಿ ‘ಮೊಡೆಪು’ ಎಂದರೆ ಕಲಾತ್ಮಕವಾಗಿ ಹೆಣೆಯುವುದು ಎಂದರ್ಥ. ಇದು ಅಲ್ಲಿನ ದೈನಂದಿನ ಬಳಕೆಯ ಪದ. ಈ ಕೃತಿ ಆ ಮಣ್ಣಿನ ಕಲಾ ಇತಿಹಾಸವನ್ನು ಹೆಣೆಯುವ ಪ್ರಯತ್ನವಾಗಿದೆ. ಇಲ್ಲಿ ದಕ್ಷಿಣ ಕನ್ನಡ, ಉಡುಪಿ, ಕೇರಳದ ಕಾಸರಗೋಡು, ಕೊಡಗು ಜಿಲ್ಲೆಯ ಕಲಾವಿದರ ನೋಟವಿದೆ. 34 ಕಲಾವಿದರ ಚಿತ್ರಕಲೆಗಳ ಸಹಿತ ಅವರ ಜೀವನದ ಸಂಕ್ಷಿಪ್ತ ದಾಖಲೆಗಳಿವೆ. ‘ನಾನು ಚಿತ್ರಕಲಾವಿದನೆಂಬುದು ನನಗೇ ಗೊತ್ತಿಲ್ಲ’ ಎಂದು ಉಲ್ಲೇಖಿಸುವ ಕಾರಂತರ ಹತ್ತು ಹಲವು ಕ್ಷೇತ್ರಗಳ ಪರಿಚಯ ಹಾಗೂ ಅವರು ರಚಿಸಿದ ಚಿತ್ರಕಲೆಗಳ ಸಂಗ್ರಹವೂ ಇಲ್ಲಿ ದಾಖಲಾಗಿದೆ. ಒಟ್ಟಿನಲ್ಲಿ ಇದೊಂದು ಕರಾವಳಿ ಕರ್ನಾಟಕದ ಕಲಾ ಇತಿಹಾಸವನ್ನು ಅಂಗೈಯಲ್ಲಿಡುವ ಹೊತ್ತಿಗೆ. 

ಮೊಡೆಪು

ಲೇ: ಜನಾರ್ದನ ಹಾವಂಜೆ 

ಸಂ: ನೇಮಿರಾಜ ಶೆಟ್ಟಿ ಹಾಗೂ ರಾಜೇಂದ್ರ ಕೇದಿಗೆ

ಪ್ರ: ಆರ್ಟ್‌ ಕೆನರಾ ಟ್ರಸ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT