ಹೆಣ್ಣು ಹೆತ್ತವರಿಗೆ, ಹೆಣ್ಣು ಹೆರದವರಿಗೆ ಎಂಬ ಅಡಿ ಸಾಲಿನೊಂದಿಗಿರುವ ಈ ಪುಸ್ತಕ ಮಕ್ಕಳನ್ನ ಬೆಳೆಸುವುದು, ತಾವು ಬೆಳೆಸಿದ್ದು ಎರಡನ್ನೂ ದಾಖಲಿಸುತ್ತಾರೆ. ಮಗು ಹುಟ್ಟಿದೆಯೆಂಬ ಸಂಭ್ರಮದಲ್ಲಿ ಅಪ್ಪನೂ, ಅಮ್ಮನೂ ಹುಟ್ಟುವುದು ಸಹಜ. ಹಾಗೆ ಪಾಲಕರಾಗಿ ಬೆಳೆಯುವುದು, ಆ ಆತಂಕ, ಆನಂದ ಎರಡನ್ನೂ ಬರೆಯುತ್ತ ನಾಗತಿಹಳ್ಳಿ ಹೋಗಿದ್ದಾರೆ.

ತಮ್ಮ ಬೆಳವಣಿಗೆಯೊಂದಿಗೆ ತಮ್ಮ ಮಗಳು ‘ಕನಸು’ ಬೆಳೆಯುತ್ತ, ಬದುಕು ಸಾಕಾರಗೊಂಡಿದ್ದನ್ನು ಬರೆಯುತ್ತ ಹೋಗಿದ್ದಾರೆ. ಇದು ಅವರ ಆಂತರ್ಯದ ಪಯಣವೂ ಹೌದು. ಅಪ್ಪನಾದ ನಂತರದ ಯಾನವನ್ನೂ ಪ್ರವಾಸ ಕಥನದಂತೆಯೇ ಹೇಳುತ್ತ ಹೋಗುವ ಲೇಖಕರು, ಮೊದಲ ಹೆಣ್ಣುಮಗು, ಎರಡನೆಯ ಮಗುವಿಗೆ ಪುಟ್ತಾಯಿ ಆಗುವ ಸೌಂದರ್ಯವನ್ನೂ ಚಿತ್ರಿಸಿದ್ದಾರೆ.

ಸಿಹಿ ಮತ್ತು ಕನಸು ಎಂಬ ಇಬ್ಬರು ಮಕ್ಕಳ ಬಾಲ್ಯದಲ್ಲಿ ನಾವು ನಮ್ಮ ಮಕ್ಕಳೊಡನೆ ಕಳೆಯಬಹುದಾದ ರಸಮಯ ಕ್ಷಣಗಳನ್ನೂ, ಕಥಾ ಸಮಯವನ್ನೂ, ದೂರು ದುಮ್ಮಾನಗಳನ್ನು ಎದುರಿಸುವುದನ್ನೂ, ಬೆಳೆದ ಮಕ್ಕಳೊಂದಿಗೆ ಬರುವ ಭಿನ್ನಾಭಿಪ್ರಾಯಗಳನ್ನು ಒಪ್ಪುವ ಬಗೆ ಎಲ್ಲವೂ ಹೆಣ್ಣು ಹೆತ್ತವರಿಗೆ, ಹೆರದವರಿಗೆ ಮಾತ್ರವಲ್ಲ, ಮಕ್ಕಳಾದವರಿಗೆ, ಮಕ್ಕಳಾಗುವವರಿಗೂ ಸಹಾಯಕ ಎನ್ನುವಂತಿವೆ. ಕನ್ನಡದಲ್ಲಿ ‘ಪೇರೇಂಟಿಂಗ್’ ಕುರಿತ ಈ ಕೃತಿ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಎಲ್ಲರಿಗೂ ತಮ್ಮ ಬಾಲ್ಯ ಮತ್ತು ತಮ್ಮ ತಾಯ್ತನದ ಸಮಯವನ್ನು ನೆನಪಿಸುತ್ತದೆ. ತಾಯ್ತನವಿಲ್ಲಿ ಮಹಿಳೆಯರಿಗೆ ಮಾತ್ರ ಸಂಬಂಧಿತವಲ್ಲ ಎಂಬುದು ಸ್ಪಷ್ಟವಾಗಿ ನಿರೂಪಿತವಾಗಿದೆ.

ಪುಟ್ಟಿಗೊಂದು ಪುಟ್ಟಿ

ಲೇ: ನಾಗತಿಹಳ್ಳಿ ಚಂದ್ರಶೇಖರ

ಪ್ರ: ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ

ಸಂ: 99005 55255

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.