ಮೂರ್ಖನ ಮಾತುಗಳು!...
ದೇವ ದೇಶ ದೇಹ, ಲೇ: ಅಹೋರಾತ್ರ, ಪ್ರ: ಸಾವಣ್ಣ ಎಂಟರ್‌ಪ್ರೈಸಸ್, ನಂ. 57, 1ನೇ ಮಹಡಿ, ಪುಟ್ಟಣ್ಣರಸ್ತೆ, ಬಸವನಗುಡಿ, ಬೆಂಗಳೂರು–04

ಅಹೋರಾತ್ರ ಅವರ ಈ ಪುಸ್ತಕದ ಹೆಸರು ‘ಮೂರ್ಖನ ಮಾತುಗಳು!...’ ಇದು ಓದುಗರನ್ನು ಸೆಳೆಯಲು ಇಟ್ಟ ಹೆಸರಾಗಿರಬಹುದಾದರೂ ವ್ಯಕ್ತಿಯೊಬ್ಬ ಕಂಡ ಬದುಕಿನ ಹಲ ಬಗೆಯ ನೋಟಗಳನ್ನು ಈ ಬರವಣಿಗೆ ಒಳಗೊಂಡಿದೆ. ಅದು ದೇವರು, ದೇಹ, ದೇಶದ ಬಗ್ಗೆ ಮುಖ್ಯವಾಗಿ ಮಾತನಾಡುತ್ತದೆ. ವ್ಯಕ್ತಿತ್ವ ವಿಕಸನ ಬರಹಗಳ ಸರಣಿಯಲ್ಲಿ ಈ ಪುಸ್ತಕ ಬೇರೊಂದು ರೀತಿಯ ಪ್ರಯತ್ನವಾಗಿದೆ. ವ್ಯಕ್ತಿತ್ವ ವಿಕಸನ ಪುಸ್ತಕಗಳು ಒಳಗೊಳ್ಳುವ ದೃಷ್ಟಾಂತ, ಕತೆ, ಉದಾಹರಣೆಗಳ ಮೂಲಕವೇ ಇದೂ ಮನುಷ್ಯ ಸ್ವಭಾವ, ಬದುಕಿನ ಬಗ್ಗೆ ಮಾತನಾಡಲು ಹೊರಡುತ್ತದೆ. ಅದರ ಹಿನ್ನೆಲೆಯಲ್ಲಿರು

ವುದು ಅಧ್ಯಾತ್ಮ, ವಿಜ್ಞಾನ, ಪುರಾಣ, ಇತಿಹಾಸದಂತಹ ವಿಷಯಗಳು. ನಮ್ಮ ವ್ಯಕ್ತಿತ್ವದಲ್ಲಿ ಇಲ್ಲದ್ದನ್ನು ಅಳವಡಿಸಿಕೊಂಡು ಅದನ್ನು ಬೆಳಸಿಕೊಳ್ಳುವ ದಿಸೆಯಲ್ಲಿ ಇದು ಧರ್ಮಗುರುಗಳ ಪ್ರವಚನದ ರೀತಿಯಲ್ಲಿ ಪ್ರವಹಿಸುತ್ತದೆ. ಈ ರೀತಿಯ ಪುಸ್ತಕಗಳ ಹಿಂದಿನ ಸೂತ್ರ ಏನೆಂದರೆ, ಅವುಗಳಲ್ಲಿ ಹೇಳಿದ್ದು ವ್ಯಕ್ತಿಗತವಾದರೆ ಬದುಕಿನಲ್ಲಿ ಯಶಸ್ವಿಯಾಗುತ್ತೀರಿ, ಇಲ್ಲದಿದ್ದರೆ ಮನೆಯಲ್ಲಿಯೇ ಉಳಿಯುತ್ತೀರಿ ಎಂಬುದಾಗಿದೆ.

ಇಲ್ಲೊಂದು ಉದಾಹರಣೆ ಇದೆ. ಅದನ್ನು ನೋಡಿದರೆ ಈ ಪುಸ್ತಕದ ಮಿತಿ ಗೊತ್ತಾಗಬಹುದು. ‘ಮನುಕುಲದ ಮೊದಲದೊರೆ ಸೂರ್ಯಪುತ್ರ ಮನು. ಮನುಸ್ಮೃತಿ ಈತನ ಕೃತಿ. ಅದು ಹುಟ್ಟಿದಂದು ದೋಷರಹಿತವಾಗಿತ್ತು. ಕುಲಾತೀತವೂ ಆಗಿತ್ತು’ ಎನ್ನುವ ಲೇಖಕರು ಮನುಸ್ಮೃತಿ ಕುಲಕಂಟಕರಿಂದ, ಶೋಷಕರಿಂದ ಅತ್ಯಾಚಾರಕ್ಕೊಳಗಾಯಿತು, ಶೋಷಕರ ದಲ್ಲಾಳಿಯಾಯಿತು ಎನ್ನುತ್ತಾರೆ.

ಮುಂದಕ್ಕೆ, ‘ಮನುಸ್ಮೃತಿಯ ಅಳಿಯದಿರಿ ಮನುಜರೇ, ಅದು ನಮ್ಮೆಲ್ಲರ ತಾತನ ಕಗ್ಗ, ಯಾರ ಅಪ್ಪನ ಸ್ವತ್ತೂ ಅಲ್ಲ. ಅದರ ಮಾಲಿನ್ಯ ತೊಳೆಯೋಣ’ ಎನ್ನುತ್ತಾರೆ (ಪು. 75). ಆಧುನಿಕ ಭಾಷೆ, ವರಸೆ, ಶೈಲಿಯಲ್ಲಿ ಮಾತನಾಡುವ ಇದು ಅದೇ ಹಳೆಯ ವಿರೋಧಾಭಾಸಗಳಿಂದ ಕೂಡಿದ ವಿಚಾರಗಳ ಸರಣಿಯನ್ನೇ ಮುಂದಿಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.