ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ಕಥೆ: ವಿದ್ಯುತ್‌ ಬಲ್ಪ್ ಮತ್ತು ಸಾವಿನ ಅಂತರ

Published 2 ಮಾರ್ಚ್ 2024, 23:53 IST
Last Updated 2 ಮಾರ್ಚ್ 2024, 23:53 IST
ಅಕ್ಷರ ಗಾತ್ರ

-ಮೂಲ: ಉದಯ ಪ್ರಕಾಶ್ -ಕನ್ನಡಕ್ಕೆ: ಡಿ.ಎನ್.ಶ್ರೀನಾಥ್

ಡಬ್ಬಿ ಇನ್ನೂ ನನ್ನ ಬಳಿ ಇದೆ. ಅನೇಕ ವರ್ಷಗಳಿಂದ ಇದೆ. ನಾನು ಅದನ್ನು ಎಂದೂ ತೆರೆದು ಸಹ ನೋಡಲಿಲ್ಲ. ಆದರೆ ಅದನ್ನು ತೆರೆಯುವ ತೀರ್ಮಾನ ಪೂರ್ಣವಾಗಿ ನನ್ನನ್ನು ಅವಲಂಬಿಸಿದೆ. ನಾನು ಅದರ ಮುಚ್ಚಳವನ್ನು ತೆರೆದರೆ ನನ್ನ ಮಾತುಗಳ ಬಗ್ಗೆ ನಂಬಿಕೆ ಉAಟಾಗುವುದು ಎಂಬ ಕಾರಣಕ್ಕೆ ಸಮಾಜ ಅಥವಾ ಬೇರೆಯವರು ಅಥವಾ ಸ್ನೇಹಿತ ಸಹ ನನ್ನ ಮೇಲೆ ಒತ್ತಡ ಹೇರಲಾರ. ಇಲ್ಲದಿದ್ದಲ್ಲಿ ನಾನೆಂದೂ, ಜೀವಮಾನವಿಡೀ ವಿಶ್ವಾಸವನ್ನು ಗಳಿಸಲಾರೆ. ಅಂದರೆ, ಒಂದು ವೇಳೆ ನಾನು ನನ್ನ ಅನುಭವದ ಸತ್ಯಾಂಶವನ್ನು ಸಾಬೀತು ಮಾಡಬೇಕೆಂದಿದ್ದರೆ, ನಾನು ಅವರೆದುರು ನನ್ನ ಆ ಡಬ್ಬಿಯ ಮುಚ್ಚಳವನ್ನು ತೆರೆಯ ಬೇಕು, ಇಲ್ಲದಿದ್ದಲ್ಲಿ ಅಂಥವರು ನನ್ನನ್ನು ನಂಬುವುದಿಲ್ಲ. ನನ್ನ ಅನುಭವಗಳು ಅಂಥವರ ನಂಬಿಕೆಗೆ ಪಾತ್ರವಾಗಿಲ್ಲ ಎಂದು ಅನ್ನಿಸುತ್ತದೆ.

ಆದರೆ ಅಂಥವರ ವಿಶ್ವಾಸವನ್ನು ಗಳಿಸುವುದು, ನನಗೆ ಈ ಡಬ್ಬಿಯ ಮುಚ್ಚಳವನ್ನು ತೆರೆಯುವ ಅಪಾಯ ಮತ್ತು ಪಣಕ್ಕಿಂತ ಹೆಚ್ಚು ಬೆಲೆಯುಳ್ಳದ್ದು ಎಂಬುದು ಹೇಗೆ ಗೊತ್ತಾಗುತ್ತದೆ?- ಇದೂ ಒಂದು ಸಮಸ್ಯೆ. ಅವರಿಗೆಲ್ಲಾ ನನ್ನ ವಿಷಯ ಪ್ರಾಮಾಣಿಕವಾಗಿದೆ ಎಂದು ಸಾಬೀತಾದ ನಂತರ, ನನ್ನ ಅನುಭವದ ಬಗ್ಗೆ ನಂಬಿಕೆ ಬಂದರೆ ಹಾಗೂ ಉಳಿದ ಅನುಭವಗಳನ್ನು ಅವರು ಅವಿಶ್ವಸನೀಯವೆಂದು ತಿಳಿಯುತ್ತಿದ್ ದರೆ?- ಇದೂ ಸಾಧ್ಯ. ಹೀಗಾದರೆ ನನ್ನ ವಿಷಯಗಳನ್ನು ಆ ಎಲ್ಲಾ ಜನರೆದುರು
ಪ್ರಮಾಣೀಕರಿಸುತ್ತಾ ನಾನು ವೃದ್ಧನಾಗುತ್ತೇನೆ. ಸತ್ತೂ ಹೋಗುತ್ತೇನೆ. ಆಗಲೂ ಸಹ ನನ್ನ ಬಹಳಷ್ಟು ಅನುಭವಗಳು ಅಪ್ರಾಮಾಣಿಕವಾಗಿಯೇ ಉಳಿಯುತ್ತವೆ. ಅಂದರೆ ಕೊನೆಗೆ ನಾನು ಅವರಿಗೆ ಅವಿಶ್ಚಸನೀಯ ವ್ಯಕ್ತಿಯಾಗಿಯೇ ಇರುವೆ.

ಒಂದು ದೊಡ್ಡ ಸಮಸ್ಯೆ ಎಂದರೆ, ನನ್ನ ಇನ್ನಿತರ ಅನುಭವಗಳ ಸಾಕ್ಷಿಯನ್ನು ಕೊಡಲು ನನ್ನ ಬಳಿ ಬೇರೆ ಡಬ್ಬಿಗಳಿಲ್ಲ. ನಾನು ಹೇಗೆ ನನ್ನ ಜೀವನದ ಸತ್ಯವನ್ನು ಇಷ್ಟು ಜನರೆದುರು ಸಾಬೀತು ಪಡಿಸುತ್ತಿರಲಿ? ಇದೇ ಕಾರಣಕ್ಕಾಗಿಯೇ ನಾನು ಆ ಡಬ್ಬಿಯ ಮುಚ್ಚಳವನ್ನು ತೆರೆಯುವುದಿಲ್ಲ. ಒಂಟಿಯಾಗಿರುವಾಗಲೂ ತೆರೆಯುವುದಿಲ್ಲ, ಇನ್ನೊಬ್ಬರೆದುರೂ ತೆರೆಯುವುದಿಲ್ಲ. ಕಾರಣವೇನೆಂದರೆ, ನನಗೆ ಆಗಾಗ ನನ್ನ ಮೇಲೆಯೂ ಸಂದೇಹವುAಟಾಗುತ್ತದೆ. ಇಷ್ಟು ವರ್ಷಗಳ ಬಂತರ ನಾನೂ ಸಹ ಆ ಅನುಭವಕ್ಕಾಗಿ, ಬೇರೊಬ್ಬ ವ್ಯಕ್ತಿಯಾಗಿದ್ದೇನೆ. ಆ ಡಬ್ಬಿ ಬಾಲ್ಯದಿಂದಲೂ ನನ್ನ ಬಳಿ ಇದೆ. ಅದರ ಕಥೆ ತುಂಬಾ ಸAಕ್ಷಿಪ್ತವಾಗಿದೆ. ಅದರಲ್ಲಿ ರುಚಿ ಇಲ್ಲ ಎಂದೇನಿಲ್ಲ.

ಅದೇನಾಗಿತ್ತೆAದರೆ, ಆಗ ನಾನು ಎಂಟು ವರ್ಷದವನಾಗಿರಬೇಕು. ಏಳನೆಯ ವರ್ಷದಿಂದ ಹಾಲು ಹಲ್ಲುಗಳು ಬಿದ್ದು ಹೋಗಲು ಆರಂಭಗೊಳ್ಳುತ್ತವೆ. ಆದರೆ ಆಗಲೂ ತಿಳಿವಳಿಕೆ ಬರುವ ಹಲ್ಲುಗಳು ದವಡೆಯಲ್ಲಿ ಹುಟ್ಟುವುದಿಲ್ಲ. ನಮ್ಮ ಮನೆ ಹಳ್ಳಿಯಲ್ಲಿದೆ. ಅದು ಈ ಮೊದಲು ಮಣ್ಣಿನ ಮನೆಯಾಗಿತ್ತು. ಆಗ ಮನೆಗಳು ಹೆಂಚುಗಳ ಮನೆಯಾಗಿರುತ್ತಿದ್ದವು. ಈಗಲೂ ಹೆಂಚುಗಳ ಮನೆಗಳಿರುತ್ತವೆ. ಹಳ್ಳಿಗೆ ಅಂಟಿಕೊAಡAತೆ ಕಾಡಿತ್ತು. ಕಾಡಿನಲ್ಲಿ ಕರಿ ಕೋತಿಗಳು ತುಂಬಾ ಸAಖ್ಯೆಯಲ್ಲಿರುತ್ತಿದ್ದವು. ನಾನು ‘ಕರಿ ಕೋತಿ’ ಶಬ್ದವನ್ನು ಸಾಕಷ್ಟು ಸಮಯದ ನಂತರ ಪುಸ್ತಕಗಳಿಂದ ಕಲಿತೆ. ನಾವು ಅವುಗಳನ್ನು ಕಪ್ಪು ಮೂತಿಯ ಮಂಗಗಳು ಎನ್ನುತ್ತಿದ್ದೆವು. ಕಾಗೆಗಳ ಸಂಖ್ಯೆಯೂ ಹೆಚ್ಚಿತ್ತು. ನಮ್ಮ ಅಜ್ಜಿ ಊಟದ ನಂತರ ಮಧ್ಯಾಹ್ನದ ವೇಳೆಯಲ್ಲಿ ಅಂಗಳಕ್ಕೆ ಬಂದು ಅನ್ನ ಹಾಕಲು ಕಾಗೆಗಳನ್ನು ಕರೆಯುತ್ತಿದ್ದರು, ಅವು ಇಡೀ ಅಂಗಳದಲ್ಲಿ
ಕಲೆಯುತ್ತಿದ್ದವು.

ಕರಿ ಕೋತಿಗಳು ಮತ್ತು ಕಾಗೆಗಳು ನಮ್ಮ ಮನೆಯ ಛಾವಣಿಯ ಶತ್ರುಗಳಾಗಿದ್ದವು. ಕರಿ ಕೋತಿಗಳು ಛಾವಣಿಯಲ್ಲಿ ಓಡಿದರೆ ಹೆಂಚುಗಳು ಒಡೆದು ಹೋಗುತ್ತಿದ್ದವು. ಕಾಗೆಗಳೂ ಅಲ್ಲಲ್ಲಿ ಹೆಂಚುಗಳನ್ನು ಸರಿಸುತ್ತಿದ್ದವು. ಹೆಂಚುಗಳು ಒಡೆದ ಜಾಗದಿಂದ ಮಳೆ ನೀರು ಮನೆಯೊಳಗೆ ಹನಿಯುತ್ತಿತ್ತು. ಅಲ್ಲಿ ನಾವು ಖಾಲಿ ಬಕೀಟುಗಳನ್ನಿಡುತ್ತಿದ್ದೆವು. ಆದರೆ ಮಳೆ ಬರದಿದ್ದಾಗ ಆ ರಂಧ್ರಗಳಿAದ ಬಿಸಿಲು ಕೋಣೆಯ ಒಳಗಿನ ನೆಲದ ಮೇಲೆ ಬೀಳುತ್ತಿತ್ತು. ನೆಲದ ಮೇಲೆ ಬಿದ್ದ ಬಿಸಿಲಿನ ಆ ಗೋಳಾಕಾರದ ತುಂಡುಗಳು ತುಂಬಾ ರಹಸ್ಯಮಯವಾಗಿ, ಆಕರ್ಷಕವಾಗಿ ಮತ್ತು ಅಲ್ಪ-ಸ್ವಲ್ಪ ಜೀವಂತವಾಗಿರುವAತೆ ತೋರುತ್ತಿದ್ದವು. ಆ ಬಿಸಿಲಿನ ತುಂಡುಗಳು ಸೂರ್ಯನೊಂದಿಗೆ ಸರಿಯುತ್ತಾ, ಅವುಗಳ ಆಕಾರವೂ ಬದಲಾಗುತ್ತಿತ್ತು. ಬೆಳಿಗ್ಗೆ ನೋಡಿದ ಮೀನಿನಾಕಾರದ ಬಿಸಿಲಿನ ತುಂಡು, ಮಧ್ಯಾಹ್ನದ ವೇಳೆಗೆ ಆನೆಯ
ರೂಪವನ್ನು ತಾಳುತ್ತಿತ್ತು ಅಥವಾ ಬಾಯಿ ಸೀಳಿದ ರಾಕ್ಷಸನಂತೆ ತೋರುತ್ತಿತ್ತು. ಒಮ್ಮೊಮ್ಮೆ ಕಿರಣಗಳ ಕೋನ ಅಥವಾ ಸೂರ್ಯನ ಸ್ಥಿತಿ ಬದಲಾದಾಗ ತುಂಡೊAದು ಅದೃಶ್ಯವಾಗುತ್ತಲೂ ಇತ್ತು. ಅದು ನೋಡು-ನೋಡುತ್ತಿರುವಂತೆಯೇ ಚಿಕ್ಕದಾಗುತ್ತಾ, ಕಡೆಗೆ ಅಂತರ್ಧಾನಗೊಳ್ಳುತ್ತಿತ್ತು- ಮರುದಿನ ಸರಿಯಾಗಿ ಅದೇ
ವೇಳೆಗೆ ಪ್ರಕಟಗೊಳ್ಳಲು! ಒಮ್ಮೊಮ್ಮೆ ಕೋಣೆಯಲ್ಲಿ ಇಂಥ ಅನೇಕ ತುಂಡುಗಳನ್ನು ಕಾಣಬಹುದಿತ್ತು. ನಂತರ ಕ್ರಮೇಣ ಚಿಕ್ಕ ತುಂಡುಗಳು ಕಣ್ಮರೆಯಾಗುತ್ತಿದ್ದವು; ಅತಿ ದೊಡ್ಡ ತುಂಡು, ತುAಬಾ ಹೊತ್ತು ಸ್ಥಿರವಾಗಿರುತ್ತಿತ್ತು.

ಈ ತುಂಡುಗಳೊAದಿಗೆ ಇನ್ನೊಂದು ಸಂಗತಿಯೂ ಇತ್ತು. ಕೋಣೆಯ ಅಂಧಕಾರದಲ್ಲಿ, ಅವು ಬಿದ್ದ ಜಾಗದಲ್ಲಿ ತಮ್ಮ ಕಂಗೊಳಿಸುವ ಅಸ್ತಿತ್ವದ ಸುತ್ತಮುತ್ತ, ವೃತ್ತಾಕಾರ ಬೆಳಕಿನ ಒಂದು ಮಂದ ವೃತ್ತವನ್ನು ಸೃಷ್ಟಿಸುತ್ತಿದ್ದವು. ಆ ವೃತ್ತದಲ್ಲಿ ಆಗಸದ ಮಂದ ಪ್ರತಿಬಿಂಬವಿರುತ್ತಿತ್ತು. ಅದಕ್ಕೆ ಪ್ರತಿಯಾಗಿ ಆಗಸ ಮತ್ತೂ ತೆಳು ನೀಲಿ ಬಣ್ಣದ ಪ್ರತಿಬಿಂಬವಿರುತ್ತಿತ್ತು. ಪಕ್ಷಿಗಳು ಒಂದು ವೇಳೆ ಮೇಲೆ ಹಾರಿ ಹೋದರೆ, ಕೋಣೆಯೊಳಗೆ ಅವುಗಳ ಹಾರುವ ನೆರಳು ಹಾದು ಹೋಗುತ್ತಿದ್ದವು. ತೆವಳುವ ಮೋಡಗಳು
ಕಾಣಿಸುತ್ತಿದ್ದವು. ಆಗಾಗ ಈ ಮೋಡಗಳು ಆ ತುಂಡುಗಳನ್ನೇ ಮುಚ್ಚುತ್ತಿದ್ದವು. ಆಗೇನೂ ಉಳಿಯುತ್ತಿರಲಿಲ್ಲ- ಪ್ರತಿಬಿಂಬವೂ ಇಲ್ಲ, ತುಂಡೂ ಇಲ್ಲ.

ನನಗೆ ಆ ತುಂಡುಗಳು ಜೀವಂತವಾಗಿ ಮತ್ತು ಮಾಂತ್ರಿಕವಾಗಿ ತೋರುತ್ತಿದ್ದವು. ನಾನು ಅವುಗಳನ್ನು ನನ್ನೊಂದಿಗೆ ಅಲ್ಲಿಂದ ಬೇರೆ ಸ್ಥಳಕ್ಕೆ ಕರೆದೊಯ್ಯುವ ಬಗ್ಗೆ ಯೋಚಿಸುತ್ತಿದ್ದೆ. ಅವುಗಳಲ್ಲಿ ಜೀವನವಿತ್ತು, ಅವುಗಳೊಂದಿಗೆ ನಾನು ಕೇವಲ ಇನ್ನಿತರ ಪ್ರೇಕ್ಷಕರಂತೆ ಸಂಪರ್ಕವಿಟ್ಟುಕೊಳ್ಳಲು ಬಯಸುತ್ತಿರಲಿಲ್ಲ. ನಾನು
ಅವರೊಂದಿಗೆ ಈ ಪೂರ್ಣ ಹಗಲಿಡಿಯ ಆಟದಲ್ಲಿ ಸೇರಿಕೊಳ್ಳಲು ಬಯಸುತ್ತಿದ್ದೆ.

ನಾನು ತುಂಬಾ ಪ್ರಯತ್ನಿಸಿದರೂ ಆ ತುಂಡುಗಳು ತಮ್ಮ ಜಾಗದಿಂದ ಕದಲುತ್ತಿರಲಿಲ್ಲ. ಯಾವ ವಸ್ತುಗಳನ್ನು ಅವುಗಳ ಕೆಳಗಿಟ್ಟರೂ, ಅವು ಆ ವಸ್ತುಗಳ ಮೇಲ್ಭಾಗಕ್ಕೆ ಬರುತ್ತಿದ್ದವು, ಅದನ್ನೆಳೆದಾU À ಅವು ಅಂಗೈಯಲ್ಲಿರುತ್ತಿದ್ದವು, ಆದರೆ ಮುಷ್ಟಿಗಳನ್ನು ಮಡಚುತ್ತಲೇ ಅವು ಬೆರಳುಗಳ ಮೇಲೆ ಬರುತ್ತಿದ್ದವು, ನನ್ನ ಕೈ ಖಾಲಿಯಾಗಿಯೇ ಮರಳಿ ಬರುತ್ತಿತ್ತು. ಎಷ್ಟೋ ಬಾರಿ ಸೋತು, ರೇಗಿ ಅವುಗಳಿಗೆ ಹೊಡೆಯುತ್ತಿದ್ದೆ.
ಒದೆಯುತ್ತಿದ್ದೆ. ಕಬ್ಬಿಣದಿಂದ ನೆಲವನ್ನು ಅಗೆಯುತ್ತಿದ್ದೆ. ಅದರೆ ಅವುಗಳ ಮೇಲೆ ಯಾವದೇ ಪ್ರಭಾವ ಬೀಳುತ್ತಿರಲಿಲ್ಲ. ನನ್ನ ಬಗ್ಗೆ ಅವುಗಳಿಗಿದ್ದ ತಟಸ್ಥತೆ ಭಾವನೆಯನ್ನು ನನ್ನಿಂದ ಸಹಿಸಲು ಸಾಧ್ಯವಾಗುತ್ತಿರಲಿಲ್ಲ. ಒಂ ದು ದಿನ ಏನಾಯಿತೆಂದರೆ, ನಾನು ಒಂಟಿಯಾಗಿದ್ದೆ. ಅಡುಗೆ ಮನೆಯಲ್ಲಿ ಒಂದು ದೊಡ್ಡ, ಸುಂದರ ತುಂಡು ಅಲ್ಲಿಯೇ ಬಿದ್ದು ಆಟವಾಡುತ್ತಿತ್ತು. ಅಮ್ಮ ಅಡುಗೆ ಮಾಡಿ ಎಲ್ಲಿಗೋ ಹೊರಟು ಹೋಗಿದ್ದರು. ನಾನು ಆ ತುಂಡನ್ನು ತುಂಬಾ ಪ್ರೀತಿಸಲು ಪ್ರಯತ್ನಿಸಿದೆ. ಅದನ್ನು ಚುಂಬಿಸಿದೆ, ನಂತರ ಅದಕ್ಕೆ ಅನ್ನ ಮತ್ತು ಬೇಳೆಯನ್ನು ತೆಗೆದು ಕೊಟ್ಟೆ. ಅಡುಗೆ ಮನೆಯಲ್ಲಿ ಬೀಸಣಿಗೆಯನ್ನಿಡಲಾಗಿತ್ತು. ಒಲೆಯ ಬೆಂಕಿಗೆ ಗಾಳಿ ಹಾಕಲು ಅದನ್ನೇ ಉಪಯೋಗಿಸಲಾಗುತ್ತಿತ್ತು. ನಾನು ಅದನ್ನು ಬೀಸಣಿಗೆ ಮೇಲಿಟ್ಟು, ಅದನ್ನು ಎಳೆದೆ.

ಅದು ಬೀಸಣಿಗೆಯೊಂದಿಗೆ ಸರಿಯುತ್ತಿರುವುದನ್ನು ನಾನು ನೋಡಿದೆ. ಅದು ಬರುತ್ತಿತ್ತು. ಇದು ನನ್ನ ಜೀವನದ ಅತ್ಯಂತ ಯಶಸ್ಸಾಗಿತ್ತು. ಅದೀಗ ಛಾವಣಿಯಿಂದ ಮುಕ್ತವಾಗಿತ್ತು. ಸೂರ್ಯನಿಂದಲೂ ಮುಕ್ತವಾಗಿತ್ತು. ನನ್ನೊಂದಿಗೆ ಅದರ ಸಂಪರ್ಕವೇರ್ಪಟ್ಟಿತ್ತು. ಅದು ತನ್ನ ಉಳಿದ ಸಂಪರ್ಕವನ್ನು ಕಡಿದುಕೊಂಡಿತ್ತು. ಅದು ಕೇವಲ ನನ್ನದಾಗಿತ್ತು. ನಾನದನ್ನು ಅಡುಗೆ ಮನೆಯ ಇನ್ನೊಂದು ಮೂಲೆಯವರೆಗೆ ತೆಗೆದುಕೊಂಡು ಹೋದೆ. ನಂತರ ಅದಕ್ಕೆ ಪ್ರೀತಿಯಿಂದ ಹೇಳಿದೆ-“ನನ್ನನ್ನು ನಿರೀಕ್ಷಿಸು. ನಾನೀಗಲೇ ಬಂದೆ.” ನಂತರ ನಾನು ಓಡಿದೆ. ಟಿನ್ ಡಬ್ಬಿಯಲ್ಲಿ ಈ ಮೊದಲು ಅಮ್ಮನ ಕಾಡಿಗೆಯಿತ್ತು, ಅದನ್ನು ತೆಗೆದುಕೊಂಡು ಮರಳಿ ಬಂದೆ. ಅದು ನನ್ನನ್ನು ಬೇಸಣಿಗೆಯ ಮೇಲಿನಿಂದ ನಿರೀಕ್ಷಿಸುತ್ತಿತ್ತು, ಅದು ಮೆಲ್ಲ-ಮೆಲ್ಲನೆ ಕಂಪಿಸುತ್ತಿತ್ತು.

ನಾನು ಆಗಿನಿಂದಲೇ ಅದನ್ನು ಈ ಡಬ್ಬಿಯಲ್ಲಿ ಬಂದಿಸಿದ್ದೇನೆ. ನಾನು ಅದರೊಂದಿಗೆ ಎಲ್ಲೇ ಬೇಕಾದರೂ ಹೋಗಬಲ್ಲೆ. ಅದು ಅಲ್ಲಿಯೇ ಇದೆ, ಸದಾ ಅಲ್ಲಿಯೇ ಇರುವುದು ಎಂಬುದು ನನಗೆ ತಿಳಿದಿದೆ. ಈ ಸಂಗತಿ ನಿಜವೂ ಹೌದು. ಈ ಡಬ್ಬಿಯ ಮುಚ್ಚಳವನ್ನು ತೆರೆದು ಅದನ್ನು ಕಳೆದು ಕೊಳ್ಳುವ ಅಪಾಯವನ್ನು, ‘ಆ ಜನರಿಗೆ ನನ್ನ ಈ ಅನುಭವದ ಮೇಲೆ ವಿಶ್ವಾಸ ಮೂಡುತ್ತದೆ, ಇಲ್ಲದಿದ್ದಲ್ಲಿ ನಾನೆಂದೂ ಅವರ ವಿಶ್ವಾಸವನ್ನು ಗಳಿಸಲಾರೆ’ ಎಂಬುವುದಕ್ಕಾಗಿಯೇ ಹೊತ್ತುಕೊಳ್ಳಲೇ? ಆದರೆ ಯಾವುದು ಇಲ್ಲವೋ, ಅದಕ್ಕಾಗಿ ಇರುವುದನ್ನು ಪಣಕ್ಕೊಡುವುದು ಬುದ್ಧಿವಂತಿಕೆಯೇ!?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT