ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.4ರಿಂದ ಪ್ರಜಾವಾಣಿ ಫೇಸ್‌ಬುಕ್ ಪುಟದಲ್ಲಿ 'ರಾಷ್ಟ್ರೀಯ ನಾಟಕೋತ್ಸವ 2020'

ನಾಟಕ ವಿಮರ್ಶೆ ಸ್ಫರ್ಧೆಯಲ್ಲಿ ಭಾಗವಹಿಸಿ, ಬಹುಮಾನ ಗೆಲ್ಲಿ
Last Updated 2 ಡಿಸೆಂಬರ್ 2020, 7:49 IST
ಅಕ್ಷರ ಗಾತ್ರ

ರಂಗಭೂಮಿ, ಸಾಂಸ್ಕೃತಿಕ ಲೋಕಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಪ್ರಜಾವಾಣಿ, ಇದೀಗ ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರು ಕೇಂದ್ರದ ಸಹಯೋಗದಲ್ಲಿ ಡಿ.4 ಶುಕ್ರವಾರದಿಂದ ಡಿ.13ರವರೆಗೆ ಕನ್ನಡದ ಪ್ರಯೋಗಾತ್ಮಕ ನಾಟಕಗಳನ್ನು ಮೆಲುಕು ಹಾಕುವ 'ರಾಷ್ಟ್ರೀಯ ನಾಟಕೋತ್ಸವ 2020' ಆಯೋಜಿಸುತ್ತಿದೆ.

10 ದಿನಗಳ 'ಪ್ರಜಾವಾಣಿ ದಸರಾ ಸಂಗೀತೋತ್ಸವ', 15 ದಿನಗಳ 'ಆನ್‌ಲೈನ್ ಪ್ರಜಾವಾಣಿ ನುಡಿ ಹಬ್ಬ' ಲೈವ್ ಕಾರ್ಯಕ್ರಮಗಳ ಬಳಿಕ, ಕೋವಿಡ್ ದುರಿತದ ಕಾಲದಲ್ಲಿ ನೊಂದ ಮನಗಳಿಗೆ ಮನೋಲ್ಲಾಸ ನೀಡುವ ಕಾರ್ಯಕ್ರಮದ ಸರಣಿ ಮುಂದುವರಿದಿದೆ. ಪ್ರಜಾವಾಣಿ ಫೇಸ್‌ಬುಕ್ ಪುಟದಲ್ಲಿ ಡಿ.4ರಿಂದ ಪ್ರತಿ ದಿನ ಸಂಜೆ 6 ಗಂಟೆಯಿಂದ ನಾಟಕಗಳು ಪ್ರಸಾರವಾಗಲಿವೆ.

ರಂಗಕರ್ಮಿಗಳಾದ ಶ್ರೀನಿವಾಸ್ ಜಿ.ಕಪ್ಪಣ್ಣ ಮತ್ತು ಸಿ.ಬಸವಲಿಂಗಯ್ಯ ಅವರ ಪರಿಕಲ್ಪನೆ ಮತ್ತು ಆಯೋಜನೆಯಲ್ಲಿ ಶಶಿಧರ ಬಾರಿಘಾಟ್, ಸಿ.ಕೆ.ಗುಂಡಣ್ಣ ಸಂಚಾಲಕತ್ವದಲ್ಲಿ ಈ ಎಲ್ಲ ನಾಟಕಗಳು ಪ್ರದರ್ಶನಗೊಳ್ಳಲಿವೆ.

ನಾಟಕ ವಿಮರ್ಶಾ ಸ್ಫರ್ಧೆಯಲ್ಲಿ ಭಾಗವಹಿಸಿ, ಬಹುಮಾನ ಗೆಲ್ಲಿ
10 ದಿನಗಳ ನಾಟಕೋತ್ಸವದ ಎಲ್ಲ ಅಂಶಗಳ ಮೇಲೆ500ರಿಂದ ಗರಿಷ್ಠ 1000 ಪದಗಳ ಮಿತಿಯೊಳಗೆ ಬೆಳಕು ಚೆಲ್ಲುವ ಸಮಗ್ರ ವಿಮರ್ಶೆಯೊಂದನ್ನು ಓದುಗರಿಂದ ಆಹ್ವಾನಿಸಲಾಗುತ್ತದೆ.

ರಂಗಕರ್ಮಿಗಳೇ ಆಯ್ಕೆ ಮಾಡುವ ಉತ್ತಮವಾದ 3 ವಿಮರ್ಶೆಗಳು prajavani.net ನಲ್ಲಿ ಪ್ರಕಟವಾಗಲಿದ್ದು, ಅವುಗಳಿಗೆ ಖ್ಯಾತ ರಂಗ ನಿರ್ದೇಶಕ ಬಿ.ಸುರೇಶ್ ಅವರು ₹5000, ₹3000 ಹಾಗೂ ₹2000 ನಗದು ಪುರಸ್ಕಾರ ನೀಡಲಿದ್ದಾರೆ. ನಾಟಕ ವಿಮರ್ಶೆಯು ನಮಗೆ ತಲುಪಬೇಕಾದ ಅಂತಿಮ ದಿನಾಂಕ 20 ಡಿಸೆಂಬರ್ 2020. ಇಮೇಲ್ ಮೂಲಕ ವಿಮರ್ಶೆ ಕಳುಹಿಸಬೇಕಾದ ವಿಳಾಸ: prajavani9@gmail.com

ಕಾರ್ಯಕ್ರಮದ ವಿವರ:

ಡಿಸೆಂಬರ್ 4 ಶುಕ್ರವಾರ ಸಂಜೆ 6ಕ್ಕೆ
ಸಿರಿ (2 ಗಂಟೆ)
ಜಾನಪದ ಮೂಲ, ರಂಗರೂಪ: ಡಾ.ನಾ.ದಾಮೋದರ ಶೆಟ್ಟಿ
ನಿರ್ದೇಶನ: ಡಾ.ಬಿ.ಜಯಶ್ರೀ

ಡಿಸೆಂಬರ್ 5 ಶನಿವಾರ ಸಂಜೆ 6ಕ್ಕೆ
'ವೀರಗಾಸೆ - ನೀರಒಡಪು' (1 ಗಂ. 25 ನಿ.)
ದೊಂಬಿದಾಸರ ಜಾನಪದ ಕಥೆ ಆಧಾರಿತ
ನಿರ್ದೇಶನ: ಗೋಪಾಲಕೃಷ್ಣ ನಾಯರಿ
ಸಂಜೆ: 7.30ಕ್ಕೆ
ಯಕ್ಷಗಾನ ಆಧಾರಿತ 'ಊರು ಭಂಗ' (50 ನಿ.)
ನಿರ್ದೇಶನ: ಸಂಜೀವ ಸುವರ್ಣ

ಡಿಸೆಂಬರ್ 6 ಭಾನುವಾರ ಸಂಜೆ 6ಕ್ಕೆ
ಬೆರಳ್‌ಗೆ ಕೊರಳ್ (55 ನಿ.)
ರಚನೆ: ಕುವೆಂಪು
ನಿರ್ದೇಶನ: ಪ್ರಸನ್ನ ರಾಮಸ್ವಾಮಿ
ಸಂಜೆ 7ಕ್ಕೆ
'ಸೀತಾ ಸ್ವಯಂವರ' (1 ಗಂ. 10 ನಿ.)
ರಚನೆ: ಮಹಾಕವಿ ರಾಜಶೇಖರ/ಎಂ.ಎ.ಹೆಗಡೆ
ನಿರ್ದೇಶನ: ಚಿದಂಬರ ರಾವ್ ಜಂಬೆ

ಡಿಸೆಂಬರ್ 7 ಸೋಮವಾರ
ಮಾರೀಚನ ಬಂಧುಗಳು (1 ಗಂ. 50 ನಿ.)
ರಚನೆ: ಅರುಣ್ ಮುಖ್ಯೋಪಾಧ್ಯಾಯ, ಕನ್ನಡಕ್ಕೆ: ಬಿಂಡಿಗನವಿಲೆ ನಾರಾಯಣಸ್ವಾಮಿ
ನಿರ್ದೇಶನ: ವಾಲ್ಟರ್ ಡಿಸೋಜ

ಡಿಸೆಂಬರ್ 8 ಮಂಗಳವಾರ
ಗುಳ್ಳಕಾಯಜ್ಜಿ (50 ನಿ.)
ರಚನೆ: ಡಾ.ಚಂದ್ರಶೇಖರ ಕಂಬಾರ
ನಿರ್ದೇಶನ: ಮಾಲತೇಶ್ ಬಡಿಗೇರ

ಡಿಸೆಂಬರ್ 9 ಬುಧವಾರ
ಕರಿಯ ದೇವರ ಹುಡುಕಿ (1 ಗಂ.30 ನಿ.)
ರಚನೆ: ಪ್ರೊ.ಶಂಕರ ಪಿಳ್ಳೈ, ಡಾ.ನಾ.ದಾಮೋದರ ಶೆಟ್ಟಿ
ನಿರ್ದೇಶನ: ಚಂದ್ರದಾಸನ್

ಡಿಸೆಂಬರ್ 10 ಗುರುವಾರ
ಕುರ್ಚಿ ಮತ್ತು ಆ... ನಂತರ (50 ನಿ.)
ಕನ್ನಡ, ತಮಿಳು, ತೆಲುಗು, ಮಲಯಾಳಂ ಕಥಾರಂಗ
ನಿರ್ದೇಶನ: ದೇವೇಂದ್ರರಾಜ್ ಅಂಕುರ್

ಡಿಸೆಂಬರ್ 11 ಶುಕ್ರವಾರ
ಅನಿಮಲ್ ಫಾರ್ಮ್ (1 ಗಂ. 30 ನಿ.)
ರಚನೆ: ಜಾರ್ಜ್ ಆರ್ವೆಲ್. ರೂಪಾಂತರ: ಪ್ರೊ.ಸತ್ಯಬ್ರತ್ ರೌತ್, ಕನ್ನಡಕ್ಕೆ: ಸಿ.ಬಸವಲಿಂಗಯ್ಯ
ನಿರ್ದೇಶನ: ಪ್ರೊ.ಸತ್ಯಬ್ರತ್ ರೌತ್

ಡಿಸೆಂಬರ್ 12 ಶನಿವಾರ
ಗುಣಮುಖ (2 ಗಂಟೆ)
ರಚನೆ: ಪಿ.ಲಂಕೇಶ್
ನಿರ್ದೇಶನ: ಬಸವಲಿಂಗಯ್ಯ

ಡಿಸೆಂಬರ್ 13 ಭಾನುವಾರ (50 ನಿ.)
ಹಯವದನ, ನಾಗಮಂಡಲ, ಅಗ್ನಿ ಮತ್ತು ಮಳೆ
ರಚನೆ: ಗಿರೀಶ್ ಕಾರ್ನಾಡ್
ನಿರ್ದೇಶನ: ಸಿ.ಬಸವಲಿಂಗಯ್ಯ
ಸಂಜೆ 7ಕ್ಕೆ
ಕುಸುಮಬಾಲೆ (2 ಗಂ. 20 ನಿ.)
ರಚನೆ: ದೇವನೂರು ಮಹಾದೇವ
ನಿರ್ದೇಶನ: ಸಿ.ಬಸವಲಿಂಗಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT