ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಪ್ರಜಾವಾಣಿ’ ವರ್ಷದ ಸಾಧಕ ಸುಧೀರ್: 'ಪರಿಸರ ಸುಸ್ಥಿರತೆ ರಕ್ಷಣೆಗೆ ಒತ್ತು'

Last Updated 1 ಜನವರಿ 2022, 6:04 IST
ಅಕ್ಷರ ಗಾತ್ರ

ಎಚ್‌.ಎಸ್‌.ಸುಧೀರ್ ಅವರು ಗುಬ್ಬಿ ಲ್ಯಾಬ್ಸ್‌ ಸಂಸ್ಥಾಪಕ. ಪಶ್ಚಿಮಘಟ್ಟಗಳ ಕಪ್ಪೆಗಳ ಬಗೆಗಿನ ಮೊದಲ ಪುಸ್ತಕದ ಪ್ರಕಾಶಕ. ಅಲ್ಲದೆ ಅಪರೂಪದ ಒಂದು ಕಪ್ಪೆಯನ್ನು ಹೊರ ಜಗತ್ತಿಗೆ ಪರಿಚಯಿಸಿದ ತಂಡದಲ್ಲಿ ಇವರೂ ಭಾಗಿ. ಬೆಂಗಳೂರಿನಲ್ಲಿ ಮರಗಳು, ಪಕ್ಷಿಗಳ ವೈವಿಧ್ಯತೆ ಲೆಕ್ಕಹಾಕುವುದು.

ನಗರಗಳ ಕ್ರಮಬದ್ಧ ಬೆಳವಣಿಗೆ, ಅಭಿವೃದ್ಧಿಯಲ್ಲಿ ಸುಸ್ಥಿರತೆ,ಭೂಬಳಕೆ, ಭೂ ಪ್ರದೇಶದಲ್ಲಿ ಆದ ಬದಲಾವಣೆಗಳಿಂದ ಪರಿಸರದ ಸುಸ್ಥಿರತೆಯ ಮೇಲಾಗುತ್ತಿರುವ ಪರಿಣಾಮಗಳು ಹಾಗೂ ನೈಸರ್ಗಿಕ ಸಂಪನ್ಮೂಲನದ ಬಳಕೆಯಿಂದ ಮಾನವ ಮತ್ತು ಪರಿಸರದ ಅಂತರ್ ಸಂಬಂಧವನ್ನು ಅರ್ಥೈಸುವಿಕೆಯ ಸಂಶೋಧನೆಗಳನ್ನು ನಿರಂತರವಾಗಿ ನಡೆಸಿದ್ದಾರೆ.

ವಾಹನಗಳಿಂದ ಆಗುವ ಮಾಲಿನ್ಯವನ್ನು ತಗ್ಗಿಸಲು ಐಐಎಸ್‌ಸಿ ಕ್ಯಾಂಪಸ್‌ನಲ್ಲಿ ‘ನಮ್ಮ ಸೈಕಲ್‌’ ಪಬ್ಲಿಕ್‌ ಬೈಸಿಕಲ್‌ ಶೇರಿಂಗ್‌ ವ್ಯವಸ್ಥೆ. ಜಯನಗರದಲ್ಲಿಸೈಕಲ್‌ ಸ್ನೇಹಿ ಪಥ ನಿರ್ಮಾಣದ ಯೋಜನೆ ರೂಪಿಸಿದರು. ಬಿಬಿಎಂಪಿ ಅದನ್ನು ಅನುಷ್ಠಾನಗೊಳಿಸಿತು. ಅಲ್ಲದೆ,ರಾಜ್ಯದಲ್ಲಿ 9 ಎರಡನೇ ಸ್ತರದ ನಗರಗಳಿಗೆ (ಟು ಟೈರ್‌ ಸಿಟೀಸ್‌) ವಾಹನಗಳ ಪಾರ್ಕಿಂಗ್‌ ನೀತಿ ರೂಪಿಸಿದರು.

ನಗರಗಳು ಮತ್ತು ಹವಾಮಾನ ವ್ಯವಸ್ಥೆಯ ನಕಾಶೆ ರೂಪಿಸುವ ಮತ್ತು ಅದಕ್ಕೆ ಬಳಸುವ ಟೂಲ್‌ಗಳ ಉಚಿತ ವ್ಯವಸ್ಥೆ ಅಭಿವೃದ್ಧಿಪಡಿಸಿದ್ದಾರೆ. ‘ಇಂಡಿಯನ್ ಇನ್ಸ್‌ಸ್ಟಿಟ್ಯೂಟ್‌ ಫಾರ್‌ ಹ್ಯೂಮನ್‌ ಸೆಟಲ್‌ಮೆಂಟ್‌’ನ ಫ್ಯಾಕಲ್ಟಿ ಆಗಿದ್ದಾಗ ಭಾರತದ 231 ನಗರಗಳು ಮತ್ತು ಆ ನಗರಗಳಲ್ಲಿ ಆದ ಬದಲಾವಣೆಯ ನಕಾಶೆ ರೂಪಿಸುವ ತಂಡವನ್ನು ಮುನ್ನಡೆಸಿದ್ದರು.

ಸಾರ್ವಜನಿಕರು ವಿಜ್ಞಾನದಲ್ಲಿ ಹೇಗೆ ಭಾಗವಹಿಸಬಹುದು ಎಂಬುದಕ್ಕೆ ‘ಸಿಟಿಜನ್‌ ಸೈನ್ಸ್‌’ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಇದಕ್ಕೆ ಪ್ರಾಜೆಕ್ಟ್‌ ಅಶೋಕಎಂದು ಕರೆಯಲಾಗಿದೆ. ಇದರಡಿ ಪರಿಸರ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ಶಿಬಿರಗಳನ್ನು ನಡೆಸಲಾಗಿದೆ. ಇದರಲ್ಲಿ ಕ್ರೋಡೀಕರಿಸಿದ ಮಾಹಿತಿ (ಡೇಟಾ) ಮುಕ್ತವಾಗಿ ಹಂಚಲಾಗಿದೆ.

ಹೆಸರು: ಎಚ್‌.ಎಸ್‌.ಸುಧೀರ್‌
ವೃತ್ತಿ: ಗುಬ್ಬಿ ಲ್ಯಾಬ್ಸ್‌ ಸಂಸ್ಥಾಪಕ
ಸಾಧನೆ: ನಗರಗಳಿಗೆ ಪಾರ್ಕಿಂಗ್‌ ನೀತಿ, ಸೈಕಲ್‌ಸ್ನೇಹಿ ಪಥ ನಿರ್ಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT