ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ | ಜಾನಪದ ಜಗತ್ತಿನ ಸಿರಿವಂತ ನೋಟ

Last Updated 7 ಜನವರಿ 2023, 19:30 IST
ಅಕ್ಷರ ಗಾತ್ರ

ಕೃತಿ: ಹೊನ್ನ ರಾಗೋಲ
ಲೇ: ಡಾ.ಶ್ರೀಶೈಲ ನಾಗರಾಳ
ಪ್ರ: ಸಪ್ನ ಬುಕ್‌ಹೌಸ್‌ ಬೆಂಗಳೂರು
ಸಂ: 080 40114455

***

ಜಾನಪದದಲ್ಲಿ ಏನಿದೆ? ಕಲೆ, ಸಾಹಿತ್ಯ, ನುಡಿ... ಇಷ್ಟೇತಾನೆ ಎಂದು ಯೋಚಿಸುವವರಿಗೆ ಉತ್ತರ ರೂಪದಲ್ಲಿದೆ ‘ಹೊನ್ನ ರಾಗೋಲ’. ಇದರಲ್ಲಿ ವಿಶ್ವ ವ್ಯಾಪಕವಾದ ಜ್ಞಾನ ಸಂಪತ್ತು ಇದೆ ಎಂಬುದನ್ನು ಮೊದಲ ಲೇಖನದಲ್ಲೇ ಲೇಖಕರು ಹೇಳಿದ್ದಾರೆ. ಉಳಿದ ಲೇಖನಗಳಲ್ಲಿ ಅದನ್ನು ಸಾಕ್ಷೀಕರಿಸಿ ನಿರೂಪಿಸಿದ್ದಾರೆ. ಲೋಕದೃಷ್ಟಿಯ ಬಗೆಗಿನ ಚರ್ಚೆಯಲ್ಲಿ ಭೂಮಿಯ ಸೃಷ್ಟಿ, ಜೀವಸಂಕುಲದ ಸೃಷ್ಟಿ, ಸಂಸ್ಕೃತಿ, ವಿಜ್ಞಾನ, ವಿಕಾಸ ಎಲ್ಲವನ್ನೂ ಕಥೆ, ಹಾಡು, ನುಡಿಗಟ್ಟುಗಳ ಮೂಲಕ ಕಟ್ಟಿಕೊಟ್ಟವರೇ ಜನಪದರು. ಹಾಗಾಗಿ ಇಲ್ಲಿನ ಕಲಾತ್ಮಕ ಅಭಿವ್ಯಕ್ತಿಗಳು ಲೋಕದೃಷ್ಟಿಯ ವಾಹಕಗಳು ಎಂದು ಅಭಿಪ್ರಾಯಪಟ್ಟಿದ್ದಾರೆ ಲೇಖಕರು.

‘ಸಂಸ್ಕೃತಿ’ಯ ವ್ಯಾಖ್ಯಾನವನ್ನು ಜಾನಪದದ ಚೌಕಟ್ಟಿಗೆ ತರುವಾಗ ವಿಸ್ತಾರವಾದ ವಿವರಣೆಯನ್ನೇ ಕೊಟ್ಟಿದ್ದಾರೆ. ಕೊನೆಯಲ್ಲಿ ಜನಪದರದ್ದು ಜೀವಪೋಷಕವಾದ ಶ್ರಮಸಂಸ್ಕೃತಿಯೇ ಪ್ರಧಾನವಾದದ್ದು ಎಂಬುದನ್ನು ಎತ್ತಿ ತೋರಿದ್ದಾರೆ. ಜನಪದರಲ್ಲೂ ಇದ್ದ ತಂತ್ರಜ್ಞಾನವನ್ನು ಆಧುನಿಕ ಯಂತ್ರಗಳು ಹೇಗೆ ನಿಧಾನಕ್ಕೆ ಮೂಲೆಗುಂಪಾಗಿಸಿವೆ ಎಂಬುದರ ಚರ್ಚೆ ಇದೆ. ಭೂತೇರು, ಶಕ್ತಿದೇವತೆಗಳ ಆರಾಧನೆ, ಜನಪದ ಶರಣರು ಇತ್ಯಾದಿ ಹೊಸ ನೋಟಗಳನ್ನು ಈ ಕೃತಿಯಲ್ಲಿ ಕಾಣಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT