ಗುರುವಾರ , ಅಕ್ಟೋಬರ್ 21, 2021
29 °C

ಪುಸ್ತಕ ವಿಮರ್ಶೆ: ಕಾಡುವ ಗ್ರಾಮಭಾರತದ ಸಂಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಕಾಲ
ಲೇ: ಪ್ರೇಮಕುಮಾರ್‌ ಹರಿಯಬ್ಬೆ
ಪ್ರ: ಕವಿತಾ ಪ್ರಕಾಶನ
ಸಂ: 9880105526

**

ಗ್ರಾಮಭಾರತ ಇಂದು ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು, ಅಲ್ಲಿನ ವಿಕೃತಿಗಳೊಂದಿಗೆ ಸಮಾಜದ ಮುಖಕ್ಕೆ ರಾಚುವಂತೆ ಹಿಡಿದು ತೋರಿಸುವ ಕಥೆಗಳ ಗುಚ್ಛ ‘ಅಕಾಲ’. ಪತ್ರಕರ್ತರಾಗಿ ಪ್ರೇಮಕುಮಾರ್‌ ಹರಿಯಬ್ಬೆಯವರು ಗ್ರಾಮೀಣ ಭಾಗದಲ್ಲಿ ಕಂಡುಂಡ ಅನುಭವಗಳಿಗೆ ಕಲ್ಪನೆಯ ಮೆರುಗು ತುಂಬಿರುವ ಅವರೊಳಗಿನ ಕಥೆಗಾರ ಮಾಡಿದ ರಸಪಾಕ ಇದಾಗಿದೆ. ಹರಿಯಬ್ಬೆಯವರ ಮೊದಲ ಸಂಕಲನ ಪ್ರಕಟವಾಗಿ ನಾಲ್ಕು ದಶಕಗಳ ಬಳಿಕ ಬಂದಿರುವ ಸಂಕಲನ ಇದಾಗಿದ್ದು, ಕಥೆ ಹೇಳಲು ಅವರು ತೋರುವ ಸಾವಧಾನದ ನಡೆಗೆ ದ್ಯೋತಕವಾಗಿದೆ. ಗ್ರಾಮೀಣ ಭಾಗದ ಸಂಕಟಗಳು ಅವರೊಳಗಿನ ಕಥೆಗಾರನನ್ನು ಬಹುವಾಗಿ ಬಾಧಿಸಿದಂತಿದೆ. ಇಲ್ಲಿನ ಕಥೆಗಳಲ್ಲಿ ಹೆಣಗಳು ಮತ್ತೆ ಮತ್ತೆ ಬರುತ್ತವೆ. ಅದು ‘ದೇವರ ಕೆರೆ’ ಕಥೆ ಆಗಿರಬಹುದು, ‘ಗಾಂಧಿ ಮೇಷ್ಟ್ರು’ ಕಥೆ ಆಗಿರಬಹುದು, ‘ಬಾಬಣ್ಣನೆಂಬ ಅಮಾಯಕ’ ಕಥೆ ಆಗಿರಬಹುದು, ಅಷ್ಟೇ ಏಕೆ, ಸಂಕಲನದ ಶೀರ್ಷಿಕೆಯಾದ ‘ಅಕಾಲ’ ಕಥೆಯೇ ಆಗಿರಬಹುದು, ಹೆಣದ ಸಮ್ಮುಖದಲ್ಲಿಯೇ ಸಾಮಾಜಿಕ ಸಂದರ್ಭದ ವಿಶ್ಲೇಷಣೆ ನಡೆಯುತ್ತದೆ. ಸ್ವಾತಂತ್ರ್ಯಾನಂತರದ ಕಾಲಘಟ್ಟದ ಭಾರತದ ವ್ಯಥೆಯ ಪ್ರತಿಬಿಂಬದಂತೆ ಇಲ್ಲಿನ ಕಥೆಗಳು ಗೋಚರಿಸುತ್ತವೆ. ಗ್ರಾಮಭಾರತದ ಅಸಹಾಯಕ ಬದುಕು ಮನಸ್ಸಿನಲ್ಲಿ ಗಾಢವಾಗಿ ಉಳಿಯುವಷ್ಟು ಅಲ್ಲಿನ ಸಂಕಟಗಳು ಈ ಕಥೆಗಳಲ್ಲಿ ಹರಳುಗಟ್ಟಿವೆ. ತನ್ನ ಸುತ್ತ ಸಮಾಜ ಸೃಷ್ಟಿಸಿಕೊಂಡ ಅಧ್ವಾನಗಳನ್ನು ಎತ್ತಿ ತೋರಿಸಿ, ತಿವಿಯುವುದರಿಂದ ‘ಅಕಾಲ’ದ ಈ ಕಥೆಗಳನ್ನು ಸಕಾಲದ ಕಥೆಗಳು ಎನ್ನಬಹುದೇನೋ. v

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು