ಗುರುವಾರ , ಅಕ್ಟೋಬರ್ 21, 2021
29 °C

ಪುಸ್ತಕ ವಿಮರ್ಶೆ: ಒಳಗಣ್ಣಿನ ಭಾವ ಸರೋವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಟಾಬಯಲು
ಲೇ:
ಮುದಿಗೆರೆ ರಮೇಶ್‌ಕುಮಾರ್‌
ಪ್ರ: ಕರ್ನಾಟಕ ಅಂಧರ ವಿಮೋಚನಾ ವೇದಿಕೆ
ಸಂ: 9844769007

**
ಮುದಿಗೆರೆ ರಮೇಶ್‌ಕುಮಾರ್‌ ಅವರು ಅಂಧರಾದರೂ ಅವರೊಳಗಿನ ಕವಿಯು ಜಗತ್ತನ್ನು ಎಷ್ಟು ತೀಕ್ಷ್ಣ ದೃಷ್ಟಿಯಿಂದ ನೋಡಬಲ್ಲ ಎನ್ನುವುದಕ್ಕೆ ಸಾಕ್ಷಿ ಅವರ ಇತ್ತೀಚಿನ ಕಾವ್ಯ ಸಂಕಲನ ಬಟಾಬಯಲು. ಅಂಧರು ಎಂಬ ರಿಯಾಯಿತಿ ತೋರಿಸದೆ ನೋಡಿದಾಗಲೂ ಗಮನ ಸೆಳೆಯುವಂತಹ ಹಲವಾರು ಕವನಗಳು ಈ ಸಂಕಲನದಲ್ಲಿವೆ.

‘ಲೆಕ್ಕ ಇಟ್ಟವರಿಲ್ಲ ಕಲ್ಲುಗಳ ಹೊತ್ತವರ/ ಲೆಕ್ಕ ಇಟ್ಟವರಿಲ್ಲ ಗುಡಿ ಕಟ್ಟಿ ಮಣಿದವರ/ ಲೆಕ್ಕಕ್ಕೆ ನನದೊಂದು ನಿನದೊಂದು ಕಲ್ಲು’ ಎಂದು ಕಳವಳಿಸುವ ಕವಿಯ ಮನಸ್ಸು, ಮರೆಯಾಗುತ್ತಿರುವ ಮನುಷ್ಯತ್ವದ ಬಗ್ಗೆಯೂ ಮಾತನಾಡುತ್ತದೆ. ಉದಾಹರಣೆ ಬೇಕೇ? ‘ಬಿದ್ದುದಷ್ಟೇ ನಾವು ಕೆಳಗೆ/ಬಿದ್ದವರೆಷ್ಟೋ ಒಳಗೊಳಗೆ.’ ಕಣ್ಣು ಕಾಣದ ತಮ್ಮಂಥವರು ಬಾಹ್ಯವಾಗಿ ಬಿದ್ದರೂ ಅದರಿಂದ ಯಾವ ಅಪಾಯವೂ ಇಲ್ಲ. ಅದೇ ಕಣ್ಣಿದ್ದೂ ಅಂತಃಸಾಕ್ಷಿಯ ಮುಂದೆ ಬಿದ್ದವರು ತಂದೊಡ್ಡುವ ಅಪಾಯ ದೊಡ್ಡದು ಎಂಬುದನ್ನು ಈ ಕವನ ಸೂಚ್ಯವಾಗಿ ಹೇಳುತ್ತದೆ.

ಹಕ್ಕಿಗಳ ಚಿಲಿಪಿಲಿ ನಾದದ ಜತೆಗೆ ದುಃಖಿತರ ಆರ್ತನಾದವೂ ಕವಿಗೆ ಕೇಳಿಸುತ್ತದೆ. ದೇವರು, ಧರ್ಮ, ನಾಡು, ನುಡಿ, ನಿಸರ್ಗ ಹೀಗೆ ಇಲ್ಲಿನ ಕಾವ್ಯಗಳಲ್ಲಿ ಒಳಗಣ್ಣಿನ ದೃಷ್ಟಿ ವ್ಯಾಪಕವಾಗಿ ಹರಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು