ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದಲ್ಲಿ ಕಾಳಿದಾಸನ ‘ಅಗ್ನಿಮಿತ್ರ’

Last Updated 8 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಕಾಳಿದಾಸನ ಮಾಲವಿಕಾಗ್ನಿಮಿತ್ರ
ಕನ್ನಡಕ್ಕೆ: ವಿದ್ವಾನ್‌ ಅಮ್ಮೆಂಬಳ ಶಂಕರನಾರಾಯಣ ನಾವಡ
ಪ್ರ: ಅಮ್ಮೆಂಬಳ ಶಂಕರನಾರಾಯಣ ನಾವಡ ಚಾರಿಟೇಬಲ್‌ ಟ್ರಸ್ಟ್‌, ಮಂಗಳೂರು
ಬೆಲೆ: ₹ 120, ಪುಟಗಳು: 88

ಕಾಳಿದಾಸ ಮಹಾಕವಿ ಎಂದೊಡನೆ ಎಲ್ಲರಿಗೂ ತಟ್ಟನೆ ನೆನಪಾಗುವುದು ‘ಅಭಿಜ್ಞಾನಶಾಕುಂತಲಮ್‌’ ನಾಟಕ. ಆದರೆ, ಇದಲ್ಲದೆ ಈ ಕವಿ ಇನ್ನೂ ಎರಡು ಮಹತ್ವದ ನಾಟಕ ಕೃತಿಗಳನ್ನು ರಚಿಸಿದ್ದಾನೆ. ಅವುಗಳೇ ‘ವಿಕ್ರಮೋರ್ವಶೀಯಮ್‌’ ಹಾಗೂ ‘ಮಾಲವಿಕಾಗ್ನಿಮಿತ್ರಮ್‌’ ಕೃತಿಗಳು. ಸಂಸ್ಕೃತದ ‘ಮಾಲವಿಕಾಗ್ನಿಮಿತ್ರಮ್‌’ ನಾಟಕವನ್ನು ಅಮ್ಮೆಂಬಳ ಶಂಕರನಾರಾಯಣ ನಾವಡರು ಹೆಚ್ಚು–ಕಡಿಮೆ 80 ವರ್ಷಗಳಷ್ಟು ಹಿಂದೆಯೇ ಕನ್ನಡಕ್ಕೆ ಅನುವಾದಿಸಿದ್ದು, ಅದು ಇತ್ತೀಚೆಗಷ್ಟೆ ಪ್ರಕಾಶನದ ಭಾಗ್ಯವನ್ನು ಕಂಡಿದೆ.

ಕಾಳಿದಾಸನ ಇತರ ಎರಡು ನಾಟಕಗಳಿಗೆ ಹೋಲಿಸಿದರೆ ‘ಮಾಲವಿಕಾಗ್ನಿಮಿತ್ರಮ್‌’, ಅವುಗಳಷ್ಟು ಗಹನವಾದ ವ್ಯಾಪ್ತಿಯುಳ್ಳ ನಾಟಕವೇನಲ್ಲ. ಅಗ್ನಿಮಿತ್ರ ಮತ್ತು ಮಾಲವಿಕೆಯ ಪ್ರೇಮಕಥೆಯೇ ಇಲ್ಲಿನ ವಸ್ತುವಾದರೂ ರಂಗತಂತ್ರ ಭಿನ್ನವಾಗಿದೆ. ಆಗಿನ ನಗರಜೀವನ ಹಾಗೂ ಅರಮನೆ ಸುತ್ತಲಿನ ಘಟನೆಗಳು ಆಧರಿಸಿಕೊಂಡು ರಚನೆಯಾದ ಕೃತಿಯಿದು. ಅದನ್ನು ಅಷ್ಟೇ ಸರಳವಾಗಿ ಕನ್ನಡಕ್ಕೆ ತಂದಿದ್ದಾರೆ ನಾವಡರು. ದಶಕಗಳ ಹಿಂದಿನ ಭಾಷೆಯ ಸ್ಪರ್ಶ ಇಲ್ಲಿನ ಸಂಭಾಷಣೆಗಳಿಗಿದೆ. ಇಂದಿನ ಸಂದರ್ಭದಲ್ಲಿ ಈ ನಾಟಕವನ್ನು ರಂಗಕ್ಕೆ ತರುವುದಾದರೆ ತುಂಬಾ ಬದಲಾವಣೆ ಮಾಡಿಕೊಳ್ಳುವುದು ಅಗತ್ಯ. ಕಾಳಿದಾಸನ ಸಾಹಿತ್ಯದ ಆಸಕ್ತರಿಗೆ ಈ ನಾಟಕ ಕೃತಿಯು ಓದಿನ ಖುಷಿ ಕೊಡಬಲ್ಲುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT