ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಕಸುವು ತುಂಬುವ ಕಾವ್ಯ

Last Updated 25 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಅಂತರಂಗದ ಭಾವನೆಗಳಿಗೆ ಒದಗಿಬರುವ ಗೀತೆ, ಸಮುದಾಯದ ಸಮೂಹಗಾನವೂ ಆಗಬಲ್ಲದು ಎನ್ನುವುದನ್ನು ಮನದಟ್ಟು ಮಾಡಿಸುವಂತಹ ನಲವತ್ತೆರಡು ಹಾಡುಗಳ ಕಟ್ಟು ಬರಗೂರು ರಾಮಚಂದ್ರಪ್ಪ ಅವರ – ‘ಚಳವಳಿಯ ಹಾಡುಗಳು.’

ಚಳವಳಿಯ ಬಿತ್ತದಲ್ಲಿರುವುದು ಸಮಾನತೆ‌ ಹಾಗೂ ನ್ಯಾಯದ ಅಪೇಕ್ಷೆ. ಆ ಹಂಬಲವೇ ಇಲ್ಲಿನ ರಚನೆಗಳ ಹೂರಣವೂ ಆಗಿದೆ‌. ಆಕ್ರೋಶ ಮತ್ತು ಭಾವುಕತೆ ಚಳವಳಿಯ ಹಾಡುಗಳಲ್ಲಿನ ಸಾಮಾನ್ಯ ಅಂಶಗಳು. ಬರಗೂರರ ಗೀತೆಗಳಲ್ಲೂ ಭಾವುಕತೆ ಇದೆ, ಭಾವಾವೇಶವಿಲ್ಲ. ಆಕ್ರೋಶದ ಬದಲು ಸತ್ಯಾಗ್ರಹಿಯ ಸಂಯಮವಿದೆ. ಈ ಸಾವಧಾನವೇ ಇಲ್ಲಿನ ರಚನೆಗಳನ್ನು‌ ಚಳವಳಿಯ ಹಾಡುಗಳ ಪರಂಪರೆಯಲ್ಲಿ ಭಿನ್ನವಾಗಿ ನೋಡಲು ಒತ್ತಾಯಿಸುತ್ತವೆ. ನಲವತ್ತೆರಡು ಗೀತೆಗಳು ಈ ಸಂಕಲನದಲ್ಲಿವೆ. ಈ ಗೀತೆಗಳ ಮೂಲಕ ಬರಗೂರರ ವೈಚಾರಿಕತೆಯ ಪಾರ್ಶ್ವನೋಟ ಸಾಧ್ಯ. ಬರಗೂರರ ವಿಚಾರ ಸಾಹಿತ್ಯದಲ್ಲಿ ಮತ್ತೆ ಮತ್ತೆ ಕಾಣುವ ಬೆವರು, ಬೆವರಿನ ಇಂಡಿಯಾ, ಜಾಲೀಮರ, ಶ್ರಮಜೀವಿ, ಕರುಳು, ಸೂರ್ಯ, ಮುಂತಾದ ಪ್ರತಿಮೆಗಳು ಇಲ್ಲಿನ ಹಾಡುಗಳಲ್ಲೂ ಇವೆ.

‘ಚಳವಳಿ ಮತ್ತು ಸಾಹಿತ್ಯ’ ಶೀರ್ಷಿಕೆಯ ದೀರ್ಘ ಪ್ರಸ್ತಾವನೆ ಸಂಕಲನದ ವಿಶೇಷಗಳಲ್ಲೊಂದು. ಚಳವಳಿಯಿಂದ ಸೃಜನಶೀಲ ಸಾಹಿತ್ಯ ರಚನೆಗೆ ಹಿನ್ನಡೆಯಾಗುತ್ತದೆ ಎನ್ನುವ ನಂಬಿಕೆಯ ಪೊಳ್ಳುತನವನ್ನು ಉದಾಹರಣೆಗಳ ಸಮೇತ ನಿರಾಕರಿಸುವ ಈ ಬರಹ ಸಾಹಿತ್ಯ ವಿದ್ಯಾರ್ಥಿಗಳು ಗಮನಿಸಬೇಕಾದುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT