ಭಾನುವಾರ, ಮಾರ್ಚ್ 29, 2020
19 °C

ಹದಿನಾರು ಪೆಪ್ಪರ್‌ಮೆಂಟುಗಳು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರಪ್ರಿಯರಿಗೆ, ಸಿನಿಮಾ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಸಾಹಿತ್ಯದ ಆಸ್ವಾದಕರ ಪಾಲಿಗೂ ‘ಬೆಳ್ಳಿತೊರೆ’ ಸಿನಿಮಾ ಪ್ರಬಂಧಗಳ ಪುಸ್ತಕ, ಮತ್ತೆ ಮತ್ತೆ ಸವಿಯಬೇಕೆನಿಸುವ ಹದಿನಾರು ಪೆಪ್ಪರ್‌ಮೆಂಟುಗಳಿರುವ ಪೊಟ್ಟಣ. ಈ ಪೊಟ್ಟಣಕ್ಕೆ ಬರಗೂರು ರಾಮಚಂದ್ರಪ್ಪ ಅವರ ಮುನ್ನುಡಿಯೆಂಬ ಆಕರ್ಷಕ ರ‍್ಯಾಪರ್ ಕೂಡ ಇದೆ.

ಕನ್ನಡ ಚಿತ್ರರಂಗದ ಕುರಿತು ಬಂದಿರುವ ಸಾಹಿತ್ಯವೇ ಕಮ್ಮಿ. ಅವುಗಳಲ್ಲಿಯೂ ಇತಿಹಾಸ, ವ್ಯಕ್ತಿಚಿತ್ರಗಳ ಕುರಿತ ಕೃತಿಗಳೇ ಬಹುಪಾಲು. ಸಿನಿಮಾ ಚಿಂತನೆಯನ್ನು, ಅಭಿರುಚಿಯನ್ನು ಉದ್ದೀಪಿಸುವ ಕೃತಿಗಳು ವಿರಳ. ‘ಬೆಳ್ಳಿತೊರೆ’ ಸಾಹಿತ್ಯದ ದೋಣಿಯಲ್ಲಿ ಕುಳಿತು ಸಿನಿಮಾ ಎಂಬ ನದಿಯಲ್ಲಿ ವಿಹಾರ ಮಾಡುತ್ತದೆ. ಸಾಹಿತ್ಯ ಮತ್ತು ಸಿನಿಮಾ ಧಾರೆಗಳ ಸಂಗಮಸ್ಥಳದಲ್ಲಿ ಈ ಬರಹಗಳು ಹುಟ್ಟಿಕೊಂಡಿವೆ.

‘ಕನ್ನಡ ಸಾಂಸ್ಕೃತಿಕ ಮನಸ್ಸ’ನ್ನು ರೂಪಿಸುವಲ್ಲಿ ಕನ್ನಡ ಸಿನಿಮಾಗಳು ಹೇಗೆ ಕೆಲಸ ಮಾಡಿವೆ ಎಂಬುದರ ಶೋಧನೆಯೇ ಈ ಎಲ್ಲ ಪ್ರಬಂಧಗಳ ಹಿಂದಿರುವ ಆಶಯ. ಇಲ್ಲಿನ ಎಲ್ಲ ಪ್ರಬಂಧಗಳು ಇತಿಹಾಸದ ತುದಿಯಿಂದ ವರ್ತಮಾನದ ಬದಿಯವರೆಗೆ ನಿರರ್ಗಳವಾಗಿ ಓಡಾಡುತ್ತವೆ. ಇಲ್ಲಿ ಬೀಸು ಹೇಳಿಕೆಗಳಾಗಲಿ, ಓಲೈಕೆಯ ಮಾತುಗಳಾಗಲಿ ಸಿಗುವುದಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)