ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ | ಸಾತ್ವಿಕ ಆಕ್ರೋಶ, ಸಾಮರಸ್ಯದ ಆಶಯ

Last Updated 8 ಅಕ್ಟೋಬರ್ 2022, 19:31 IST
ಅಕ್ಷರ ಗಾತ್ರ

ವಿದ್ಯಾರ್ಥಿ ಜೀವನದಿಂದ ಇಂದಿನವರೆಗೆ ಕಂಡ ಕಾಲದ ತಲ್ಲಣಗಳು, ಬದಲಾವಣೆಗಳನ್ನು ಕಾವ್ಯರೂಪದಲ್ಲಿ ಬ್ಯಾಳಿ ಅವರು ದಾಖಲಿಸಿದ್ದಾರೆ. ಪುಟ್ಟ ಪುಟ್ಟ ಸಾಲುಗಳು ಕೆಲವೇ ನಿಮಿಷಗಳಲ್ಲಿ ಓದಿಸಿಕೊಂಡು ಹೋಗುತ್ತವೆ. ಒಂದಿಷ್ಟು ಚಿಂತನೆಯ ಹುಳವನ್ನೂ ಬಿಡುತ್ತವೆ. ಸಾತ್ವಿಕ ಆಕ್ರೋಶವನ್ನು ಹೊರಹಾಕುವ ಕಾವ್ಯದ ಸಾಲುಗಳು, ಸಾಮರಸ್ಯದ ಹಂಬಲವನ್ನೂ ಪ್ರಕಟಿಸುತ್ತವೆ.

ಮಂದಿರ ಮಸೀದಿ, ಚರ್ಚುಗಳ ಮೇಲೊಂದು/ ಆಶ್ಚರ್ಯದ ಆನಂದಾಶ್ರಮ ನಿರ್ಮಿಸೋಣ/ ಸರ್ವಧರ್ಮದಾಶ್ರಮಧಾಮವದು... ಎಂಬಲ್ಲಿಗೆ ಇಡೀ ಸಂಕಲನದ ಆಶಯ ವ್ಯಕ್ತವಾಗುತ್ತದೆ. ಸೌಹಾರ್ದ, ಸಾಮರಸ್ಯ ಮತ್ತು ಸಮಬಾಳು ಕವನದ ಸಾಲುಗಳಲ್ಲಿನ ಸಂದೇಶ. ಹಣ–ಹೆಣಗಳ ರಾಶಿಗೆ ಹಣದ ಪೂಜೆ... (ಕವನ: ಎಂದು ಮುಕ್ತಿ ಭಾರತಕ್ಕೆ) ಎನ್ನುವಲ್ಲಿ ವಿಷಾದ, ಸಾತ್ವಿಕ ಆಕ್ರೋಶವಿದೆ. ಇಂಥದ್ದೇ ಇನ್ನೊಂದು ಸಾಲಿನಲ್ಲಿ ‘ನರಭಕ್ಷಕ, ಗಿರಿ ಭಕ್ಷಕ, ಗಿಡ ಭಕ್ಷಕ... ಯಾರಿಲ್ಲ ಇಲ್ಲಿ’ ಎನ್ನುವ ಮೂಲಕ ರಾಜಕಾರಣಿಗಳನ್ನು ಚುಚ್ಚಿದ್ದಾರೆ.

ಕವಿಯೇ ಹೇಳಿರುವಂತೆ, ‘ಇದು ನವೋದಯ, ನವ್ಯ, ನವೋದಯ, ನವ್ಯೋತ್ತರ ಚುಟುಕು ಕಾವ್ಯಗಳನ್ನು ಒಳಗೊಂಡಿದೆ. ಕೆಲವು ಈಗಾಗಲೇ ಪ್ರಕಟಗೊಂಡಿವೆ. ಆದರೆ, ಹಿಂದಿನ ಚಿತ್ರೀಕರಣಕ್ಕೆ ಇದು ಸಹಕಾರಿ ಎಂಬ ಕಾರಣಕ್ಕೆ ಇಲ್ಲಿ ಸೇರಿಸಿದ್ದೇನೆ’ ಎಂದು ಹೇಳಿದ್ದಾರೆ. ಹೈದರಾಬಾದ್‌ ಕರ್ನಾಟಕ ಭಾಗದ ಜನ ಮನದ ಮಿಡಿತಗಳ ಕಾವ್ಯ ದಾಖಲೆಯಾಗಿಯೂ ಈ ಕೃತಿಯನ್ನು ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT