ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು: ಬಸವರಾಜ ಸಬರದ ಅವರ ಪುಸ್ತಕ ‘ಸಬರದ ಬೀದಿ ನಾಟಕಗಳು’

Last Updated 16 ಅಕ್ಟೋಬರ್ 2022, 0:00 IST
ಅಕ್ಷರ ಗಾತ್ರ

ಸಮುದಾಯ ಸಂಘಟನೆಯ ಜಾಥಾಗಳ ಸಂದರ್ಭದಲ್ಲಿ, ಜನ ಜಾಗೃತಿ ಕಾರ್ಯಕ್ರಮಗಳಲ್ಲಿ ಪ್ರದರ್ಶಿಸಲೆಂದೇ ಬರೆದ ನಾಟಕಗಳ ಗುಚ್ಛ ಈ ಕೃತಿಯಲ್ಲಿದೆ. ಕೆಲವು ನಾಟಕಗಳು ಚಳವಳಿಯ ಭಾಗವಾಗಿದ್ದವು. ಇನ್ನೂ ಕೆಲವು ಹಲವು ವೇದಿಕೆಗಳಲ್ಲಿ ಪ್ರದರ್ಶನಗೊಂಡಿವೆ. ದೂರದರ್ಶನದಲ್ಲಿ ಪ್ರಸಾರಗೊಂಡಿವೆ.

ರೈತರ ಆತ್ಮಹತ್ಯೆಯ ವಸ್ತುವನ್ನಾಧರಿಸಿದ ಸಾಲದ ಹೆಣ, ಹಿಂದುಳಿದ ವರ್ಗಗಳ ಮಹಿಳೆಯರಿಗೆ ರಾಜಕೀಯ ಅಧಿಕಾರ ಬಂದಾಗ ಸಮಾಜ ಅವರನ್ನು ನೋಡುವ ಪರಿ ವಿವರಿಸುವ ‘ಹನುಮಾಯಣ’, ‘ರಂಪಾಯಣ’, ‘ಹನುಮನಾಯಕ’... ಇಂಥ ನಾಟಕಗಳು ವಿಮರ್ಶಕರು ಮತ್ತು ಪ್ರೇಕ್ಷಕರ ಮೆಚ್ಚುಗೆಗೂ ಪಾತ್ರವಾಗಿವೆ.

12 ನಾಟಕಗಳು ಈ ಕೃತಿಯಲ್ಲಿವೆ. ಕನಿಷ್ಠ ಸಂಖ್ಯೆಯ ಪಾತ್ರಗಳು, ಸರಳ ಸಂಭಾಷಣೆಗಳು ಒಂದೊಂದು ನಾಟಕವನ್ನು ಸುಲಭವಾಗಿ ಪ್ರಯೋಗಕ್ಕಿಳಿಸುವಂತೆ ಮಾಡುತ್ತವೆ. ದೇಸಿ ಸೊಗಡಿನ ಹಾಡುಗಳು ಇವೆ. ರಂಜನೆ, ಅಲ್ಲಲ್ಲಿ ಆಕ್ರೋಶ, ಸಂದೇಶ ಎಲ್ಲವನ್ನೂ ಮಿಳಿತಗೊಳಿಸಿ ಹೊಸೆದ ನಾಟಕಗಳಿವು. ಬೀದಿ ನಾಟಕ ಆಸಕ್ತರಿಗೆ, ರಂಗಕರ್ಮಿಗಳಿಗೆ, ವಿದ್ಯಾರ್ಥಿಗಳಿಗೆ ಉಪಯೋಗವಾಗಬಲ್ಲ ಕೃತಿ.

ಕೃತಿ: ಸಬರದ ಬೀದಿ ನಾಟಕಗಳು

ಲೇ: ಡಾ.ಬಸವರಾಜ ಸಬರದ

ಪ್ರ: ಚಾರುಮತಿ ಪ್ರಕಾಶನ

ಸಂ: 9886619220

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT