ಶನಿವಾರ, ಸೆಪ್ಟೆಂಬರ್ 25, 2021
26 °C

ಸವಿಯಾದ ‘ಚುರು’ ಕತೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪುಟಪಾಕ ಚಿಂತನೆಗೊಡ್ಡುವ ‘ಚುರು’ ಕತೆಗಳು
ಲೇ: ಸ
ತ್ಯೇಶ್‌ ಎನ್‌. ಬೆಳ್ಳೂರ್‌
ಪ್ರ: ಯಾಜಿ ಪ್ರಕಾಶನ, ಹೊಸಪೇಟೆ
ಮೊ: 94810 42400

ನಗರ ಮಾನವನ ದೈನಂದಿನ ನಡವಳಿಕೆಗಳು, ಕಾಲದ ಸ್ಥಿತ್ಯಂತರಗಳಿಗೆ ಆತನ ಸ್ಪಂದನೆ, ಆಲೋಚನಾ ಕ್ರಮದ ಬಗೆಗೆ ಇಲ್ಲಿನ ಕತೆಗಳು ಹೇಳುತ್ತವೆ.

ಪುಸ್ತಕದ ಹೆಸರೇ ಹೇಳುವಂತೆ ಇವು ‘ಚುರು’ ಕತೆಗಳು. ದೈನಂದಿನ ಸಣ್ಣ ಸಣ್ಣ ಘಟನೆಗಳು, ಅಲ್ಲಿ ಮನುಷ್ಯನ ಸಂಭಾಷಣೆಗಳು ಕತೆಯ ರೂಪ ಪಡೆದಂತೆ ನಮ್ಮ ಮುಂದೆ ನಿಲ್ಲುತ್ತವೆ. ಕತೆಯ ನಿರೂಪಣೆಯು ಗಂಭೀರವಾಗಿರದೆ ಬಹಳ ಸರಳವಾಗಿವೆ. ವಿಡಂಬನೆ ಹಾಗೂ ಹಾಸ್ಯಭರಿತವಾಗಿವೆ.

85 ಕತೆಗಳು ಈ ಸಂಕಲನದಲ್ಲಿ ಇವೆ. ಇರದಲ್ಲಿ ‘ವೆಲ್‌ ಆರ್ಗನೈಸ್ಡ್‌’ ಕತೆ ಮಾರ್ಮಿಕವಾಗಿದೆ. ಬೆಂಗಳೂರಿನಂಥ ಮಹಾನಗರದಲ್ಲಿ ಎಲ್ಲವೂ ವೆಲ್‌ ಆರ್ಗನೈಸ್ಡ್‌. ಈ ಶಿಸ್ತೇ ಅರ್ಧ ನಮ್ಮನ್ನು ಮಂಗನನ್ನಾ‌ಗಿಸಿ ಬಿಡುತ್ತದೆ. ತಂದೆಯ ಶ್ರಾದ್ಧವನ್ನು ಬಹಳ ಕಡಿಮೆ ಖರ್ಚಿನಲ್ಲಿ ಮಾಡಿಕೊಡಲಾಗುವುದು ಎಂದು ಹೇಳಿ, ಕೊನೆಯಲ್ಲಿ ನಮ್ಮ ಸಂಘಕ್ಕೆ ದೇಣಿಗೆ ನೀಡಲೇಬೇಕು ಎಂದು ಒತ್ತಾಯಿಸುವ ತಂತ್ರ ದಂಗು ಬಡಿಸುತ್ತದೆ. ಇದನ್ನು ಬಹಳ ವಿಡಂಬನಾತ್ಮಕವಾಗಿ ಲೇಖಕರು ನಿರೂಪಿಸುತ್ತಾರೆ.

ಸತ್ಯೇಶ್‌ ಎನ್‌. ಬೆಳ್ಳೂರ್‌ ಅಂತರರಾಷ್ಟ್ರೀಯ ಕಂಪನಿ ಒಂದರಲ್ಲಿ ಸೀನಿಯರ್‌ ವೈಸ್‌ ಪ್ರೆಸಿಡೆಂಟ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಹಣ ಹೆರುವ ವೃತ್ತಿಯಾದರೂ ಸೃಜನಶೀಲತೆ ಉಳಿಸಿಕೊಂಡಿರುವ ಇವರ ಕಾಳಜಿ ಅಭಿನಂದನಾರ್ಹ. ಕತೆಗಳು ಕೊನೆಯಲ್ಲಿ ನೀತಿ ಬೋಧನೆ ಎನಿಸಿದರೂ, ಹೀಗಾಗಬಾರದು ಎನ್ನುವ ಅವರ ಕಾಳಜಿ ನಮ್ಮನ್ನು ಕತೆ ಓದುವಂತೆ ಪ್ರೇರೇಪಿಸುತ್ತದೆ.

‘ಇಂದು ನಾವು ಮಾಹಿತಿ ಹಾಗೂ ಸಂವಹನ ಯುಗದಲ್ಲಿ ಬದುಕುತ್ತಿದ್ದೇವೆ. ಹೆಚ್ಚು ಜನರಿಗೆ ತಲುಪಲು ಸಾಹಿತ್ಯವೂ ಸಂವಹನ ತಂತ್ರಗಳನ್ನು ಬಳಸಿಕೊಳ್ಳ ಬಯಸುತ್ತದೆ. ಹೆಚ್ಚು ಜನರಿಗೆ ಪರಿಣಾಮಕಾರಿಯಾಗಿ ತಿಳಿಸಲು ಕಿರುಕತೆಗಳ ಸಂವಹನಕ್ರಮ ಉಪಯೋಗವಾದೀತು ಎಂಬ ನಂಬಿಕೆಯಿಂದ ಸತ್ಯೇಶ್‌ ಈ ಸವಿಯಾದ ಚುರುಕತೆಗಳನ್ನು ಬರೆದಿದ್ದಾರೆ’ ಎಂದು ವಿಮರ್ಶಕ ಎಸ್‌.ಆರ್‌. ವಿಜಯಶಂಕರ್‌ ಮುನ್ನುಡಿಯಲ್ಲಿ ಕತೆಗಳ ಕುರಿತು ಮೆಚ್ಚುಗೆಯ ಮಾತಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು