ಗುರುವಾರ , ಜೂನ್ 30, 2022
27 °C

ಪುಸ್ತಕ ವಿಮರ್ಶೆ | ಧ್ವನಿ ಮಾಲಿಕೆಯ ಅಕ್ಷರ ರೂಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಚನ ಸಾಹಿತ್ಯದ ಬಗ್ಗೆ ಕೃತಿಗಳು ಹೊಸದೇನಲ್ಲ. ಆದರೆ, ವಚನಗಳು ಹಾಗೂ ಅವುಗಳ ಸಾರವನ್ನು ವರ್ಷಪೂರ್ತಿ ಕೇಳಿಸಿ, ಅದ್ಭುತ ಪ್ರತಿಸ್ಪಂದನದ ಬಳಿಕ ಅವೆಲ್ಲವುಗಳ ಸಾರಸಂಗ್ರಹಿಸಿದ ಕೃತಿಯಿದು. 

ಅಂದಹಾಗೆ ಇವು ಲೇಖಕರು ಪ್ರಜಾವಾಣಿಯ ‘ಕನ್ನಡ ಧ್ವನಿ’ ಪಾಡ್‌ಕಾಸ್ಟ್‌ನಲ್ಲಿ ಒಂದು ವರ್ಷ ನಿರಂತರವಾಗಿ ನಡೆಸಿಕೊಟ್ಟ ‘ವಚನವಾಣಿ’ ಧ್ವನಿಮಾಲಿಕೆಯ ಅಕ್ಷರರೂಪ. ಸರಿಸುಮಾರು ಎಲ್ಲ ಶರಣರ ಆಯ್ದ ವಚನಗಳನ್ನು ಈ ಕೃತಿ ಒಳಗೊಂಡಿದೆ. ಇಷ್ಟು ಶರಣರ ವಚನಗಳನ್ನು ಸಂಗ್ರಹಿಸಿ, ಅಧ್ಯಯನ ಮಾಡಿ, ಧ್ವನಿ ಮತ್ತು ಅಕ್ಷರ ರೂಪಕ್ಕಿಳಿಸುವುದು ಸವಾಲಿನ ಸಂಗತಿಯೇ ಸರಿ. 

ಬಹುಪಾಲು ಜನರಿಗೆ ಅಷ್ಟೊಂದು ಪರಿಚಿತವಲ್ಲದ ಅಪರೂಪದ ಶರಣರ ವಚನಗಳು ಕೃತಿಯಲ್ಲಿವೆ. ಸುಂಕದ ಬಂಕಣ್ಣ, ಹೊಡೆಹುಲ್ಲ ಬಂಕಣ್ಣ, ಸೊಡ್ಡಳ ಬಾಚರಸ.... ಹೀಗೆ ಅತ್ಯಪರೂಪದ ವಚನಕಾರರು ಈ ಕೃತಿಯಲ್ಲಿ ಬೆಳಕು ಕಂಡಿದ್ದಾರೆ. ಅವರ ಕಾವ್ಯನಾಮವೂ ಅಷ್ಟೇ ಭಿನ್ನ. 

ಎಲ್ಲ ವಚನಗಳಿಗೆ ಕೊಟ್ಟ ಐದು ಸಾಲುಗಳ ವಿವರಣೆಯು ಅಪ್ಪಟ ಮಾತಿನ ಶೈಲಿಯಲ್ಲಿ ಇದೆ. ತ್ವರಿತವಾಗಿ ಓದಿಸಿಕೊಂಡು ಹೋಗುತ್ತವೆ. ಸರಳವಾಗಿ ವಚನಗಳನ್ನು ಅರಿಯಲು ಬಯಸುವವರಿಗೆ ಬೇಕಾದ ಕೃತಿ. ಅಂದಹಾಗೆ ತಾಳೆಗರಿಯ ಕಟ್ಟುಗಳನ್ನೇ ಜೋಡಿಸಿಟ್ಟಂತೆ ಮಾಡಿರುವ ಕೃತಿಯ ಆಕಾರ, ವಿನ್ಯಾಸ ತುಂಬಾ ಆಕರ್ಷಕವಾಗಿವೆ. ವಚನಾಸಕ್ತರಿಗೆ ಸಂಗ್ರಹಯೋಗ್ಯ ಕೃತಿ.

ಕೃತಿ: ವಚನ ವರ್ಷಾರ್ಥ

ಲೇ: ಡಾ.ಬಸವರಾಜ ಸಾದರ

ಪ್ರ: ಬಸವಧರ್ಮ ಪ್ರಸಾರ ಸಂಸ್ಥೆ ಹಿರೇಮಠ ಸಂಸ್ಥಾನ ಭಾಲ್ಕಿ, ಬೀದರ್‌ ಜಿಲ್ಲೆ

ಪುಟಗಳು: 414

ಬೆಲೆ: 300

ಸಂಪರ್ಕ: 9448947571,  9241978575

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು