ಶುಕ್ರವಾರ, ಜನವರಿ 28, 2022
26 °C

ಸಾಧನಾ ಸಂಗೀತ ಶಾಲೆಗೆ 30 ವರ್ಷ; ಮಕ್ಕಳ ಗೀತಗಾಯನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಖ್ಯಾತ ಹಿನ್ನೆಲೆ ಗಾಯಕಿ ಮಂಜುಳಾ ಗುರುರಾಜ್ ಅವರ ಸಾಧನಾ ಸಂಗೀತ ಶಾಲೆಗೆ 30 ವರ್ಷ ತುಂಬಿದ ಪ್ರಯುಕ್ತ ಇತ್ತೀಚೆಗೆ ಗಾಯನ ಕಾರ್ಯಕ್ರಮ ನಡೆಯಿತು. 

ಸಾಧನಾ ಸಂಗೀತ ಶಾಲೆಯ ಶುಕ್ರ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು. ನಾಡೋಜ ಪ್ರೊ.ಕಮಲಾ ಹಂಪನಾ ಹಾಗೂ ಹಂಪನಾಗರಾಜಯ್ಯ ದಂಪತಿ, ಲೇಖಕ ಎಂಕೆ ಮಂಜುನಾಥ್, ಪ್ರೊ.ಅರುಣಾ, ಗಾಯಕಿ ರೆಮೋ, ಮಂಗಳಾ ಅಂಜನ್, ಯುವ ಗಾಯಕ ಅನಿರುದ್ಧ ಶಾಸ್ತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಂಜೆ ವೇಳೆ 14 ಯುವ ಗಾಯಕರ ಗಾಯನ ನಡೆಯಿತು. ಖ್ಯಾತ ಸಂಗೀತ ನಿರ್ದೇಶಕ ಚರಣ್ ರಾಜ್, ನಿರ್ದೇಶಕ ಜೋಸೈಮನ್, ಮಾಲತಿ ಸರದೇಶಪಾಂಡೆ, ಜೊತೆ ಜೊತೆಯಲಿ ಖ್ಯಾತಿಯ ಅನಿರುದ್ಧ ಜಟ್ಕರ್ ದಂಪತಿಗಳು, ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಸುಧೀಂದ್ರ ವೆಂಕಟೇಶ್, ಪತ್ರಕರ್ತ ಬಿ.ಜಿ. ರವಿಕುಮಾರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು