ಬುಧವಾರ, ನವೆಂಬರ್ 25, 2020
21 °C

ಖ್ಯಾತ ವಯಲಿನ್‌ ವಾದಕ ಟಿ.ಎನ್. ಕೃಷ್ಣನ್ ಇನ್ನಿಲ್ಲ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ತಿರುವನಂತಪುರ: ಪ್ರಸಿದ್ಧ ವಯಲಿನ್‌ ವಾದಕ ಟಿ.ಎನ್. ಕೃಷ್ಣನ್ (ತ್ರಿಪ್ಪುಣಿತ್ತುರ ನಾರಾಯಣಯ್ಯರ್ ಕೃಷ್ಣನ್)  (92) ಸೋಮವಾರ ನಿಧನರಾದರು.

ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಪದ್ಮಭೂಷಣ ಪುರಸ್ಕೃತ ಕೃಷ್ಣನ್ ಅವರು ಚೆನ್ನೈ ಹಾಗೂ ದೆಹಲಿಯ ಸಂಗೀತ ಕಾಲೇಜುಗಳಲ್ಲಿ ಸಂಗೀತ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು.

ಇವರು ಪ್ರಸಿದ್ಧ ವಯಲಿನ್‌ ವಾದಕಿ ಎನ್‌.ರಾಜಂ ಅವರ ಸಹೋದರರಾಗಿದ್ದಾರೆ.

ಪ್ರೊ. ಟಿ.ಎನ್. ಕೃಷ್ಣನ್ ಅವರು ತಂದೆ ಎ. ನಾರಾಯಣ ಅಯ್ಯರ್ ಅವರಲ್ಲಿ ಎಳೆಯ ವಯಸ್ಸಿನಿಂದಲೇ ಸಂಗೀತ ಕಲಿಯಲಾರಂಭಿಸಿ, ಮುಂದೆ ಸಂಗೀತ ದಿಗ್ಗಜ ಶೆಮ್ಮಂಗುಡಿ ಶ್ರೀನಿವಾಸಯ್ಯರ್ ಅವರಲ್ಲಿ ಪಾಠ ಪಡೆದರು.

ದೀರ್ಘ ಕಾಲದ ಶಿಸ್ತಿನ ಶಿಕ್ಷಣ, ಕೃಷ್ಣನ್ ಅವರನ್ನು ಒಬ್ಬ ಶ್ರೇಷ್ಠ ಪಿಟೀಲು ವಾದಕರಾಗಿ ರೂಪಿಸಿತು. ಜೊತೆಗೆ ಆ ಕಾಲದ ಹಿರಿಯ ವಿದ್ವಾಂಸರುಗಳಿಗೆ ಅನೇಕ ದಶಕಗಳ ಕಾಲ ಪಕ್ಕವಾದ್ಯ ನುಡಿಸುತ್ತಾ-ನುಡಿಸುತ್ತಾ ಕೃಷ್ಣನ್ ಒಬ್ಬ ದಕ್ಷ ಪಕ್ಕವಾದ್ಯಗಾರರಾಗಿ ಬೆಳಗತೊಡಗಿದರು. ಪ್ರಧಾನ ಕಲಾವಿದರನ್ನು ನೆರಳಿನಂತೆ ಅನುಸರಿಸುತ್ತಾ, ಗಾಯನದ ಸ್ವಾದ ಹೆಚ್ಚಿಸುತ್ತಾ, ಹಿತ-ಮಿತವಾಗಿ ಪಸರಿಸುತ್ತಾ ವಾದ್ಯ ಧರ್ಮವನ್ನು ಎತ್ತಿ ಹಿಡಿಯುತ್ತಾ ಅವರು ನುಡಿಸುವರು.

ತಮ್ಮ ಎಂಟನೇ ವಯಸ್ಸಿನಿಂದಲೇ ಕಛೇರಿ ಮಾಡತೊಡಗಿದ ಕೃಷ್ಣನ್ ಅವರು ಅರಿಯಾಕುಡಿ ರಾಮಾನುಜ ಅಯ್ಯಂಗಾರ್, ಮುಸುರಿ ಸುಬ್ರಹ್ಮಣ್ಯ ಅಯ್ಯರ್, ಆಲತ್ತೂರು ಸಹೋದರರು, ಚೆಂಬೈ ವೈದ್ಯನಾಥ ಭಾಗವತರ್, ಮಹಾರಾಜಪುರಂ ವಿಶ್ವನಾಥ ಅಯ್ಯರ್ ಮುಂತಾದ ಹಿರಿಯರಿಗೆಲ್ಲಾ ಪಿಟೀಲು ಪಕ್ಕವಾದ್ಯ ನುಡಿಸಿ ಜನಪ್ರಿಯರಾದರು.

ಮೇರು ಪಿಟೀಲು ವಾದಕರಷ್ಟೇ ಅಲ್ಲ, ಟಿ.ಎನ್.ಕೃಷ್ಣನ್ ಅವರು ದಕ್ಷ ಬೋಧಕರಾಗಿಯೂ ಗೌರವಾನ್ವಿತರು. ಮಗಳು ವಿಜಿ ಕೃಷ್ಣನ್, ಶ್ರೀರಾಮ ಕೃಷ್ಣನ್, ಚಾರುಮತಿ ರಘುರಾಮನ್ ಅವರ ಶಿಷ್ಯರಲ್ಲಿ ಕೆಲವರು. ಜೊತೆಗೆ ದೆಹಲಿ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ಡೀನ್ ಆಗಿ ನೂರಾರು ಜನಕ್ಕೆ ಸಂಗೀತ ಶಿಕ್ಷಣ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು