ಭಾನುವಾರ, ಸೆಪ್ಟೆಂಬರ್ 20, 2020
24 °C

ತೊಟ್ಟಿಲ ಲೋಕದಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡವರೆಲ್ಲರ ಹೃದಯದಿ ಕಟ್ಟಿದ

ತೊಟ್ಟಿಲ ಲೋಕದಲಿ

ನಿತ್ಯ ಕಿಶೋರತೆ ನಿದ್ರಿಸುತಿರುವುದು

ವಿಸ್ಮೃತ ನಾಕದಲಿ

ಮಕ್ಕಳ ಸಂಗದೊಳೆಚ್ಚರಗೊಳ್ಳಲಿ

ಆನಂದದ ಆ ದಿವ್ಯ ಶಿಶು

ಹಾಡಲಿ ಕುಣಿಯಲಿ ಹಾರಲಿ ಏರಲಿ

ದಿವಿಜತ್ವಕೆ ಈ ಮನುಜ ಪಶು

–ಕುವೆಂಪು

****

ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ. ಜೀವನ ಸ್ವಪ್ರೇಮದ ಪುತ್ರಪುತ್ರಿಯರು ಅವರು. ಅವರು ನಿಮ್ಮ ಜತೆಗೆ ಇರುವುದಾದರೂ ಅವರು ನಿಮಗೆ ಸೇರಿದವರಲ್ಲ.

ನಿಮ್ಮ ಪ್ರೀತಿಯನ್ನು ಅವರಿಗೆ ನೀಡಬಹುದು. ಆದರೆ, ಆಲೋಚನೆಗಳನ್ನಲ್ಲ. ಅವರಂತಿರಲು ನೀವು ಪ್ರಯತ್ನಿಸಬಹುದು; ಆದರೆ, ಅವರನ್ನು ನಿಮ್ಮಂತೆ ಮಾಡದಿರಿ. ಜೀವನ ಹಿಮ್ಮುಖವಾಗಿ ಹರಿಯದಿರಲಿ

–ಖಲೀಲ್ ಗಿಬ್ರಾನ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.