ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇರಿ

Last Updated 21 ಡಿಸೆಂಬರ್ 2019, 18:30 IST
ಅಕ್ಷರ ಗಾತ್ರ

ಅವಳು ಹಡೆದ ಆ ರಾತ್ರಿ ಕೊರೆಯೋ ಚಳಿಯಿತ್ತು. ಆಮೇಲೆ

ವರ್ಷಾವರ್ಷಾ ಉರುಳ್ತಾಹೋದಂಗೆ, ಆ ಮಣ್ಕುಜಂತೆಮೇಲೆ

ಹೆಪ್ಪುಗಟ್ಟಿದ್ದ ಜವುಗು, ಹೊಗೆಬಿಡ್ತಿದ್ದ ಒಲೆ- ಎಲ್ಲಾ ಮರೆತ್ಳು

ಅವಳು; ಹಡೆದ್ಮೇಲೂ, ಬೆಳಗಾಗೋತನ್ಕ, ಬಸಿರು ಚೀಲ ಸೆಳಕು

ಸೆಳಕಾಡ್ತಿತ್ತು ಅನ್ನೋದನ್ನೂ. ಎಲ್ಲಕ್ಕಿಂತ, ಬಡವರ ಹಟ್ಟಿವಳ್ಗೆ

ಬಾಗಿಲ್ಗಳಿರೋಲ್ಲ, ಒಳಕೋಣೆ ಇರೋಲ್ಲ, ಹಂಗಾಗಿ ತನ್ದೆಲ್ಲಾ

ಖುಲ್ಲಾ ಬಯಲಲ್ಲೇ ಆಗ್ಹೋಯ್ತು ಅನ್ನೋ ಸಂಕ್‌ಟವನ್ನೂ.

ಅದ್ಕೇ ನೋಡಿ, ಆಮೇಲಾಮೇಲೆ, ಆ ದಿವಸ ಇದೆಯಲ್ಲಾ,

ಅದು ಹಬ್ಬದ್ದಿನಾ ಆಯ್ತು, ರಜಾ ದಿವ್ಸಾ ಆಯ್ತು ಎಲ್ಲಾರಿಗೂ,

ಎಲ್ಲಾರಿಗೂ ಪಾಲಿರಲಿ ಅದರಲ್ಲಿ ಅಂತ. ಆವತ್ತು ಅಲ್ಲಿದ್ದ

ಆ ಕುರುಬರೂವೆ ಕಾಡುಹರಟೆ ಬಿಟ್ಟು ಗಪ್ಪಾದರು ನೋಡಿ.

ಅವರೇ ತಾನೆ ಆಮೇಲೆ ಕತೆಯೊಳಗಿನ ಮಾರಾಜಾರಾದುದ್ದು?

ಆ ಗಾಳಿ, ಚಂಡಿ, ಅದೇ ತಾನೆ ಆಮೇಲೆ ದೇವ್ತೆಗಳ ಒಸ್ಗೆ ಪದ

ಅನ್ನಿಸ್ಕೊಂಡುದ್ದು? ಮತ್ತೆ, ಒಳಕ್ಕೆ ಆ ಥಂಡಿ ಜವುಗು ಒಸರ್ತಾ

ಚಾವ್ಣೀಲಿದ್ದ ಆ ತೂತು ಮರೆತ್ಹೋಗ್ಬಿಡ್ತು, ಅದರೊಳಗಿಂದ

ಇಣುಕುಹಾಕ್ತಿದ್ದ ಚುಕ್ಕೀ ಮನ್ಸಲ್ಲಿ ಉಳಕೊಂಡುಬಿಡ್ತು ಅಲ್ವೇ?

ಹಿಂಗೆಲ್ಲಾ ಆದುದ್ದು ಅವಳ ಆ ಮಗನ ಬದ್ಕು, ದರ್‌ಶ್ನದಿಂದ:

ಸೀದಾಸಾದಾ ಇದ್ದ ಅವನು, ತಿಳ್ನೀರ‍್ನಂಗೆ; ಹಾಡ್ಹಾಡ್ತಾಯಿರ್ತಿದ್ದ.

ಬಡಬಗ್ಗರನ್ನೆ ಇಟ್ಟುಕೊಳ್ತಿದ್ದ ತನ್ನ ಸುತ್ತಾ, ರಾಜಾ-ಮಾರಾಜು

ರ್ಜೊತೇನೂ ಸಲೀsಸಿರೋದು ರೂಢಿಮಾಡ್ಕೊಂಡಿದ್ದ. ಅಲ್ದೆ,

ರಾತ್ರೀಹೊತ್ತು, ತನ್ ತಲೇಮೇಲೆ, ಒಂದ್ಚುಕ್ಕೀ ಕಾಣ್ತಾ ಇದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT