ಬುಧವಾರ, ಜೂನ್ 16, 2021
21 °C

ಎಸ್‌.ಜಿ. ಸಿದ್ದರಾಮಯ್ಯ ಬರೆದ ಕವಿತೆ: ಗಂಗೆ ಅಳುತ್ತಿದ್ದಾಳೆ

ಎಸ್‌.ಜಿ. ಸಿದ್ದರಾಮಯ್ಯ Updated:

ಅಕ್ಷರ ಗಾತ್ರ : | |

Prajavani

ಗಂಗೆ ಅಳುತ್ತಿದ್ದಾಳೆ

ಇದುವರೆಗೆ ಬೆಂದಹೆಣಗಳ ಬೂದಿಹೊತ್ತು

ಸ್ವರ್ಗ ಕಾಣಿಸುವ ನಂಬಿಕೆಯಲ್ಲಿ ಹರಿಯುತ್ತಿದ್ದವಳು

ಆಗ ಸಾವಿಗೊಂದು ಘನತೆಯಿತ್ತು

ಅಳುವಿಗೊಂದು ಅರ್ಥವಿತ್ತು

 

ಗಂಗೆ ಅಳುತ್ತಿದ್ದಾಳೆ

ತನ್ನೆದೆಯಲ್ಲಿ ತಾನು ಹೊತ್ತು ಸಾಗುತ್ತಿರುವ

ದಿಕ್ಕಿದ್ದೂ ದಿಕ್ಕಿಲ್ಲದ ಹೆಣಗಳಿಗಾಗಿ

ಅಳುವವರಿದ್ದೂ ಅಳು ಸತ್ತವರ ಅಳುವಿಗಾಗಿ

 

ಗಂಗೆ ಕೂಗಿ ಕೂಗಿ ಕರೆಯುತ್ತಿದ್ದಾಳೆ

ತನ್ನೆದೆಯಲ್ಲಿ ಆಗ ಹರಿಯುತ್ತಿದ್ದ

ಕೊಳೆ ತೊಳೆಯಲು ಬಂದವರನ್ನು

ಈಗ ಹೆಣಗಳ ಬಣವೆ ಮಾಡಿದ್ದಕ್ಕೆ ತನ್ನೆದೆಗೂಡನ್ನು

ಉಪಸಂಹಾರ

???

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು