ಮಂಗಳವಾರ, ಏಪ್ರಿಲ್ 13, 2021
25 °C

ಅಡಿಕೆ ಬೆಳೆಗಾರರ ಸಂಕಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

“ಅಡಿಕೆಗೇಕೆ ಪರಿಹಾರ”? ಎಂಬ ಶೀರ್ಷಿಕೆಯಡಿಯಲ್ಲಿ ಬರೆದ ಪತ್ರ ಓದಿದೆ. ಅಡಿಕೆ ಬೆಳೆಗಾರರೆಲ್ಲರೂ ಶ್ರೀಮಂತರು, ರಾಜಕಾರಣಿಗಳು ಎಂದು ಅವರು ಬರೆದಿದ್ದಾರೆ. ನಿಜಕ್ಕೂ ಅಡಿಕೆ ಬೆಳೆಗಾರರ ಬಡತನ ಎಂತದ್ದು ಎನ್ನುವುದನ್ನು ಮಲೆನಾಡಿನ ಕೊಪ್ಪ, ಶೃಂಗೇರಿ, ತೀರ್ಥಹಳ್ಳಿ ಮುಂತಾದ ತಾಲ್ಲೂಕುಗಳ ಕುಗ್ರಾಮಗಳಿಗೆ ಹೋಗಿ ತಿಳಿಯಬೇಕು.ಮಲೆನಾಡಿನ ಹಳ್ಳಿಗಳಲ್ಲಿ ವಾಸವಾಗಿರುವ ಅಡಿಕೆ ಬೆಳೆಗಾರರಲ್ಲಿ ಬಹುತೇಕರು ಒಂದೋ ಎರಡೋ ಎಕರೆ ತೋಟವುಳ್ಳಂಥವರು. ಅಡಿಕೆಯೇ ಅವರಿಗೆ ಜೀವನಾಧಾರ. ಅಲ್ಲಿನ ಅಡಿಕೆ ತೋಟಗಳಿಗೆ ಹಳದಿ ಎಲೆರೋಗ, ಬೇರು ಹುಳಗಳ ಬಾಧೆ, ತುಂಡೆರೋಗ ಮುಂತಾದವು ದಿನೇ ದಿನೇ ವ್ಯಾಪಕವಾಗಿ ಹಬ್ಬುತ್ತಾ ನೂರಾರು ಎಕರೆ ಅಡಿಕೆ ತೋಟಗಳು ನಾಶವಾಗುತ್ತಿವೆ. ಇದರ ಜೊತೆಗೆ ಕೂಲಿಕಾರರ ಸಮಸ್ಯೆ, ಗುಟ್ಕಾ ನಿಷೇಧ, ಮಧ್ಯವರ್ತಿಗಳ ಶೋಷಣೆ, ಸಾಲಬಾಧೆ ಇವೆಲ್ಲವುಗಳಿಂದ ಅಡಿಕೆ ಬೆಳೆಗಾರ ಇಂದು ಕಂಗಾಲಾಗಿದ್ದಾನೆ.ಆಗಿನ ತೋಟಗಾರಿಕಾ ಆಯುಕ್ತರಾಗಿದ್ದ ಗೋರಖ್‌ಸಿಂಗ್‌ರವರು ಇಲ್ಲಿ ಬಂದು ಸಮೀಕ್ಷೆ ನಡೆಸಿ ಅಡಿಕೆ ಬೆಳೆಗಾರರ ಸಂಕಷ್ಟಗಳನ್ನು ಕಣ್ಣಾರೆ ಕಂಡುಕೊಂಡೇ ವಸ್ತುನಿಷ್ಠವಾದ ವರದಿ ಸಲ್ಲಿಸಿದ್ದಾರೆ. ಈ ವರದಿ ಜಾರಿಗೆ ಬರದೇ, ಅಡಿಕೆ ಬೆಳೆಗಾರರಿಗೆ ಸೂಕ್ತ ಪರಿಹಾರ ಸಿಗದಿದ್ದರೆ ಮುಂದೊಂದು ದಿನ ಅಡಿಕೆ ಬೆಳೆಗಾರರು ಸಾಮೂಹಿಕ ಆತ್ಮಹತ್ಯೆಯತ್ತ ಸಾಗಿದರೆ ಅಚ್ಚರಿ ಏನಿಲ್ಲ!

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.