ಅಫ್ಗಾನಿಸ್ತಾನ ಆಲ್ರೌಂಡರ್ ಹಾಗೂ ಐಪಿಎಲ್ನಲ್ಲಿ ಗುಜರಾತ್ ಟೈಟನ್ಸ್ ತಂಡದ ಆಟಗಾರ ರಶೀದ್ ಖಾನ್ ಎರಡನೇ ಮದುವೆಯಾಗಿದ್ದಾರೆ. ಮೊದಲ ಮದುವೆಯಾದ 10 ತಿಂಗಳ ಅಂತರದಲ್ಲಿ ಈಗ ಎರಡನೇ ಮದುವೆ ಆಗಿರುವ ಕುರಿತು ರಶೀದ್, ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
.ರಶೀದ್ ಖಾನ್ ಮೋಡಿ: ಬಾಂಗ್ಲಾದೇಶದ ವಿರುದ್ಧ ಅಫ್ಗಾನಿಸ್ತಾನಕ್ಕೆ ಜಯ.ಏಷ್ಯಾ ಕಪ್ಗೆ ಅಫ್ಗಾನಿಸ್ತಾನ ತಂಡ ಪ್ರಕಟ: ರಶೀದ್ ಖಾನ್ ನಾಯಕ.
ಹಾಲೆಂಡ್ನ ಕಾರ್ಯಕ್ರಮವೊಂದರಲ್ಲಿ ರಶೀದ್ ಖಾನ್ ಸಾಂಪ್ರದಾಯಿಕ ಅಫ್ಗಾನಿಸ್ತಾನದ ಉಡುಪಿನಲ್ಲಿ ಮಹಿಳೆಯ ಪಕ್ಕದಲ್ಲಿ ಕುಳಿತಿದ್ದರು. ಆ ಚಿತ್ರವನ್ನು ನೋಡಿದ ನೆಟ್ಟಿಗರು ರಶೀದ್ ಖಾನ್ ಎರಡನೇ ವಿವಾಹವಾಗಿದ್ದಾರೆ ಎಂಬ ವದಂತಿ ಹಬ್ಬಿಸಿದ್ದರು. ಇದೀಗ ಈ ಬಗ್ಗೆ ರಶೀದ್ ಖಾನ್ ಅವರೇ ಸ್ಪಷ್ಟನೆ ನೀಡಿದ್ದಾರೆ.

‘ಆಗಸ್ಟ್ 2, 2025ರಂದು, ನಾನು ನನ್ನ ಜೀವನದ ಹೊಸ ಮತ್ತು ಅರ್ಥಪೂರ್ಣ ಅಧ್ಯಾಯವನ್ನು ಪ್ರಾರಂಭಿಸಿದೆ. ನನ್ನ ‘ನಿಕಾಹ್’ ಅನ್ನು ಮುಗಿಸಿದೆ. (ನಿಕಾಹ್ ಎಂದರೆ ಇಸ್ಲಾಮಿಕ್ ಧರ್ಮದ ಪ್ರಕಾರ ಮದುವೆಯಾಗುವ ಒಪ್ಪಂದವಾಗಿದೆ). ನಾನು ಯಾವಾಗಲೂ ಪ್ರೀತಿ, ಶಾಂತಿ, ಸುಖ ಮತ್ತು ದುಖಃವನ್ನು ಹಂಚಿಕೊಳ್ಳುವ ಮಹಿಳೆಯನ್ನು ವರಿಸಿದ್ದೇನೆ.’

‘ನಾನು ಇತ್ತೀಚೆಗೆ ನನ್ನ ಹೆಂಡತಿಯನ್ನು ದತ್ತಿ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಿದ್ದೆ. ಅಲ್ಲಿ ತುಂಬಾ ಸರಳವಾದ ವಿಷಯದಿಂದ ಊಹೆ ಮಾಡುವುದನ್ನು ನೋಡುವುದು ದುರದೃಷ್ಟಕರ. ಸತ್ಯವು ದಿಟ್ಟವಾಗಿರುತ್ತದೆ. ಅವಳು ನನ್ನ ಹೆಂಡತಿ. ನಾನು ಏನನ್ನೂ ಮುಚ್ಚಿಡಲು ಆಗುವುದಿಲ್ಲ. ಎಲ್ಲದಕ್ಕೂ ಒಟ್ಟಿಗೆ ನಿಲ್ಲುತ್ತೇವೆ.’ ಎಂದು ರಶೀದ್ ಖಾನ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.