ಗುರುವಾರ , ಮೇ 6, 2021
21 °C

ಅಮರೇಶ್ವರನ ಕೃಪೆಯಿಂದ ಮುನಿಸು ತೊರೆವನೆ ಮೇಘರಾಜ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

``ನೀ ಪಾದವನಿಟ್ಟ ನೆಲವೇ ಸುಕ್ಷೇತ್ರ

  ಜಲವೇ ಪಾವನ ತೀರ್ಥ

  ನಡೆದಾಡಿದ್ದೇ ಕೈಲಾಸ

  ನುಡಿದುದೆಲ್ಲ ಮಹಾಮಂತ್ರ

  ಶಿಲೆಗಳಿಲ್ಲವಿಲ್ಲಿ ಇರುವುದೆಲ್ಲ ಇಷ್ಟಲಿಂಗ

  ತರುಗಳಿಲ್ಲವಿಲ್ಲಿ ಇರುವುದೆಲ್ಲ ಬಿಲ್ವಪತ್ರೆ

  ಹಸುಗಳಿಲ್ಲವಿಲ್ಲಿ ಇವುಗಳೆಲ್ಲ ಕಾಮಧೇನುಈ ಭಾಗದಲ್ಲಿ ಮೇಘರಾಜ ಮುನಿಸಿಕೊಂಡು ವರುಣನ ಆಗಮನಕ್ಕೆ ತಡೆ ನೀಡಿದಾಗ, ಇಲ್ಲಿನ ಜನರು ``ಅಮರೇಶ್ವರ'' ಕ್ಷೇತ್ರಕ್ಕೆಭಕ್ತಿಯಿಂದ ಭಜನೆ, ಮಂಗಳವಾದ್ಯಗಳೊಂದಿಗೆ ಕಾಲ್ನಡಿಗೆಯಲ್ಲಿ ಪ್ರಯಾಣ ಬೆಳೆಸಿ ಅಭಿಷೇಕ, ವಿಶೇಷ ಪೂಜೆ ಪುನಸ್ಕಾರಗಳ ಬಳಿಕಜೋಳದ ನುಚ್ಚನ್ನು ನೈವೇದ್ಯ ಮಾಡಿ ಸಾಮೂಹಿಕ ಭೋಜನ ಮಾಡಿ ಕರೆ ಕಂಬಳಿಯನ್ನು ಬೀಸುತ್ತ ಪಡೆಯಿಂದ ಇಳಿದು ತಮ್ಮ-ತಮ್ಮಗ್ರಾಮಗಳನ್ನು ತಲುಪುವುದರೊಳಗಾಗಿ ವರುಣನ ಕೃಪೆಯಿಂದ ಮಳೆ ಬರುವುದೆಂಬ ವಾಡಿಕೆ ಇಲ್ಲಿ ಇಂದಿಗೂ ಜೀವಂತವಾಗಿದೆ.ಹೀಗಾಗಿ ತಾಲ್ಲೂಕಿನ ರೈತರು ವರುಣ ದೇವನನ್ನು ಒಲಿಸಿಕೊಳ್ಳುವುದಕ್ಕಾಗಿ ಭಜನೆಯೊಂದಿಗೆ ಶ್ರೀ ಕ್ಷೇತ್ರದತ್ತ ಮುಖ ಮಾಡಿದ್ದಾರೆ.ದಕ್ಷಿಣ ಕಾಶಿ ಪ್ರಸಿದ್ಧಿಯ ಕಾಲಕಾಲೇಶ್ವರ ಕ್ಷೇತ್ರದಿಂದ ಪಶ್ಚಿಮ ಭಾಗಕ್ಕೆ ಒಂದು ಕಿ.ಮೀ ಅಂತರದಲ್ಲಿ ಅಮರೇಶ್ವರ ಕೊಳ್ಳವಿದೆ. ಕಡಿದಾದ ಈ ಪಡೆಯಲ್ಲಿ ಪಾನ ಬಟ್ಟಲಯುಕ್ತ ಒಂದು ಲಿಂಗವಿದ್ದು, ಮುಂದೆ ನಂದಿಯ ಮೂರ್ತಿ ಇದೆ. ಪಡೆಯೊಳಗಿನ ನೀರು ಆಕಳ ಬಾಯಿಯಿಂದ ಹಾಯ್ದು, ಶಿವಲಿಂಗದ ಮೇಲೆ ವರ್ಷವೆಲ್ಲ ಬೀಳುತ್ತಿರುತ್ತದೆ. ಆ ಅಮರ ಗಂಗೆಯುಸದಾ ಶಿವಲಿಂಗದ ಮೇಲೆ ಹರಿಯುವುದರಿಂದ ಅನಂತ ಕಾಲದಿಂದಲೂ ಆ ಲಿಂಗವು `ಅಮರೇಶ್ವರ' ಲಿಂಗವೆಂದು ಪ್ರಸಿದ್ಧಿ ಪಡೆದಿದೆ.ಪ್ರಾಚೀನ ಕಾಲದಿಂದಲೂ ಅಮರೇಶ್ವರ ಲಿಂಗವನ್ನು ಪವಾಡ ಮೂರ್ತಿ ಎಂದೇ ಪರಿಗಣಿಸಲ್ಪಟ್ಟಿದೆ.ಆಗಸಕ್ಕೆ ಮುತ್ತಿಕ್ಕುವ ಪರ್ವತ ಜುಳು ಹರಿಯುವ ಅಮೃತದ ಬಟ್ಟಲಿನ ಜರಿ, ಲತ ಕೋಮಲಾಂಗಿಯರಿಗೆ ಬೆರಗುಗೊಳಿಸುವಪುಷ್ಪಗಳು, ಧಾರಾಕಾರವಾಗಿ ಮಳೆಯಂತೆ ಸುರಿದು ಮುಖಕ್ಕೆ ಮುತ್ತಿಕ್ಕುವಂಥ ಪಡೆಯಿಂದ ಬೀಳುವ ನೀರಿನ ಹನಿಗಳು.ಇಂಥ ಸುಂದರ ಪ್ರಕೃತಿ ಮಡಿಲೊಳಗೆ ಅಡಗಿ ನೋಡುಗರನ್ನು ಭವದಿಂದ ಆಚೆಗೆ ಕರೆದು ಭಕ್ತಿಯ ಸಿಂಚನದೊಂದಿಗೆ ಮುಕ್ತಿಯ ಮೇಟಿಯಾಗಿಸುವ ``ಅಮರೇಶ್ವರ'' ಕ್ಷೇತ್ರ ಸರ್ವರನ್ನೂ ಕೈ ಬೀಸಿ ಕರೆಯುವಂತಿದೆ.ಕಾಮಧೇನುವಿನ ಅವತಾರ ಶ್ರೀ ಕ್ಷೇತ್ರ ಹಿಂದೆ ಈ ಕ್ಷೇತ್ರದಲ್ಲಿ ಅನೇಕ ಋಷಿಗಳು, ಸಿದ್ಧರು, ಯೋಗಿಗಳು ವಾಸವಾಗಿ ಅನುಷ್ಠಾನ ಗೈಯುತ್ತಿದ್ದರಂತೆ. ರೈತ ಸಮುದಾಯ ತಮ್ಮ ಹೊಲಕ್ಕೆ ಬಿತ್ತನೆ ಕಾರ್ಯ ಪ್ರಾರಂಭಿಸುವ ಪೂರ್ವದಲ್ಲಿ ಅಮರೇಶ್ವರನಿಗೆ ಪೂಜೆ ಮಾಡಿಸಿ,ಧಾನ್ಯಗಳ ನಿಧಿ ಹೊಯ್ದು ನೈವೇದ್ಯ ಸಮರ್ಪಿಸುತ್ತಾರೆ. ಸುಂದರ ಪ್ರಕೃತಿಯ ಮಡಿಲೊಳಗೆ ಉಡಿಬಿಚ್ಚಿ ನಿಂತ ಬೆಟ್ಟ, ಅದರೊಳಗೆಇದ್ದ ಕೊಳ್ಳದ ಅಮರ ಗಂಗೆಯು ಆಕಳ ಬಾಯಿಯಿಂದ ಹರಿದು ಶಿವಲಿಂಗವಾಗಿರುವ ಅಮರೇಶ್ವರನ ಮೇಲೆ ಬೀಳುವುದು ಕಾಮಧೇನುವಿನಅವತಾರ ಎಂಬಂತೆ ಗೋಚರಿಸುತ್ತದೆ.ದಿವ್ಯ ಔಷಧಿಗಳ ಆಗರ

ಪ್ರಕೃತಿ ಸಹಜ ಸೃಷ್ಟಿಯಾದ ಅಮರೇಶ್ವರ ಕ್ಷೇತ್ರ ದಿವ್ಯ ಔಷಧಿಗಳ ಆಗರ. ಇಲ್ಲಿನ ತಪ್ಪಲುಗಳು ನಾನಾರೀತಿಯ ಗಿಡ ಮೂಲಿಕೆಗಳ ಆಗರವಾಗಿ ಬೆಳೆದು ನಿಂತಿವೆ. ಇಲ್ಲಿನ ಇಳಿಜಾರು ಪ್ರದೇಶದಲ್ಲಿ ದಟ್ಟವಾಗಿ ಬೆಳೆದ ಸಸ್ಯಗಳನ್ನು ಆಯುರ್ವೇದದ ಪಂಡಿತರು ಬಳಸಿ ಔಷಧಿಯನ್ನು ತಯಾರಿಸುತ್ತಾರೆ. ದನ-ಕರುಗಳಿಗೆ ಯಾವುದಾದರೂ ರೋಗ ಬಂದರೆ ತಪ್ಪಲಿನ ಯಾವುದೇ ಬಳ್ಳಿಯನ್ನು ಮೂರು ದಿನ ಹೊಗೆ ಹಾಕಿದರೆ ಅದಕ್ಕೆ ಬಂದಿರುವ ರೋಗ ವಾಸಿಯಾಗುತ್ತದೆ. ಅದಕ್ಕೆಂದೇ ಈ ಭಾಗದ ರೈತರುಪ್ರತಿ ಅಮವಾಸ್ಯೆಗೆ ಎತ್ತು, ಆಕಳುಗಳನ್ನು ಎಲ್ಲ ಪಾವಟಿಗೆ ಹತ್ತಿಸಿ, ಆಕಳ ಬಾಯಿಯಿಂದ ಹರಿಯುವ ಅಮರ ಗಂಗೆಯ ತೀರ್ಥ, ಆಧಾರವನ್ನುಹಚ್ಚಿ, ಕೈಗೆ ಸಿಕ್ಕ ತಪ್ಪಲುಗಳನ್ನು ಹರಿದೊಯ್ಯಲು ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಈ ಗಿಡ ಮೂಲಿಕೆಯ ಸಸ್ಯಗಳು ಅನೇಕರೋಗ-ರುಜಿನಗಳಿಗೆ ಉಪಕಾರಿಯಾಗಿದೆ ಎನ್ನುತ್ತಾರೆ ಪ್ರಗತಿಪರ ಚಿಂತಕ ಶಶಿಧರ ಹೂಗಾರ.ಸುಗಂಧದ ಸುಂದರ ತಾಣವು ಹೌದು!

ಪಂಚಭೂತಗಳು ಪರಮಾತ್ಮನ ಅಸ್ತಿತ್ವವನ್ನು ಸೂಸುವ ಸುಗಂಧದ ಸುಂದರ ತಾಣವಾದ ಈಅಮರೇಶ್ವರ ಕ್ಷೇತ್ರ ಆಧಾರ ಶಕ್ತಿಯನ್ನು ತೋರ್ಪಡಿಸಿದರೆ, ಆತನ ಶುಚಿತ್ವ ಹಾಗೂ ಪರಿಶುದ್ಧತೆಯ ಪ್ರತೀಕ ಜಲವಾಗಿದೆ. ಪರಂಜ್ಯೋತಿಯಪ್ರಭೆಯಾಗಿ `ಅಗ್ನಿ'ಯು ಹೊರ ಸೂಸಿದರೆ, 'ವಾಯು' ಆತನ ಸರ್ವಶಕ್ತಿಯ ಸೌರಭವನ್ನೇ ಸೂಸುವುದರೊಂದಿಗೆ `ಆಗಸ'ವು ಆತನ ವಿಶ್ವಾತ್ಮನೆಂಬಅಂಶವನ್ನು ಬಿಂಬಿಸುವುದಕ್ಕೆಂದೇ ಜೀವಕೋಟಿಯ ಉದ್ಧಾರಕ್ಕಾಗಿ ಸ್ವಯಂ ಭೂ ಲಿಂಗವಾಗಿ ಉದ್ಭವಿಸಲು ಸಕಲ ಗಣಂಗಳ ಮಾತಿಗೆ ಒಪ್ಪಿಅಣಿಯಾದನು.ಸಕಲ ಜೀವಕೋಟಿಯ ಸಂರಕ್ಷಣೆಗಾಗಿ ಆದಿ ಕಾಲದಿಂದಲೂ ಆದಿ ಜಗದ್ಗುರುಗಳಿಂದಲೂ ತಪೋನಿಷ್ಠ ಮಹರ್ಷಿಗಳಿಂದಲೂ,ವಿದ್ವಾಂಸರುಗಳಿಂದಲೂ, ವೇದ-ಬ್ರಹ್ಮರಿಂದಲೂ ಪುರಾಣಂ ತರ್ಗತವಾಗಿ ಹೇಳಲ್ಪಟ್ಟ ಶಿವನಾಮ ಮಹಿಮಾ ಕಥೆಗಳಂತೆ ಅಮರೇಶ್ವರ ಮಹಾತ್ಮೆ ಕೂಡಾ ಭಕ್ತಿಯ ಮಹಾಸಾಗರವಿದ್ದಂತೆ ಇದರ ದರ್ಶನ ಪಡೆದು ಇದರೋಳ್ ಮಿಂದವರು ವಿರಜರುಧನ್ಯತೆಯ ಭಾವ ಹೊಂದುವರು. ಗಂಗೆ-ಯಮುನೆಯರು ಹೊನ್ನ ಹರಿವಾಣ ಹಿಡಿದು ಹೊಂಬೆಳಕು ಚೆಲ್ಲುತಿಹರು.ಕಳಸ-ಕನ್ನಡಿ ಹಿಡಿದ ಅಷ್ಟ ಮುತ್ತೈದೆಯರು ಆರತಿಯ ನೆತ್ತುತಲಿಹರು. ಇಂದ್ರಾದಿ-ದೇವತೆಗಳು ಭಕ್ತಿಯ ಮಂದಾರ-ಮಲ್ಲಿಗೆಯ ನಡೆ-ನುಡಿ ಹಾಸುತಿಹರು. ಸಂತಸದಿ ಸಪ್ತಋಷಿಗಳು ವೇದ-ಮಂತ್ರ ಜಯಘೋಷ ಪಟಿಸುತಿಹರು ಎಂಬ ವಾತಾವರಣ ಅಮರೇಶ್ವರ ಕ್ಷೇತ್ರ ದರ್ಶನದ ವೇಳೆ ಭಾಸವಾಗುವುದು ಕ್ಷೇತ್ರದಮಹಿಮೆಯನ್ನು ಸಾರವನ್ನು ವಿವರಿಸುವಂತಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.