ಅಸ್ಸಾಂನಲ್ಲಿ ಸ್ಫೋಟ: ಇಬ್ಬರಿಗೆ ಗಾಯ

7

ಅಸ್ಸಾಂನಲ್ಲಿ ಸ್ಫೋಟ: ಇಬ್ಬರಿಗೆ ಗಾಯ

Published:
Updated:

ಗುವಾಹಟಿ, (ಐಎಎನ್‌ಎಸ್): ಪ್ರಬಲ ಸ್ಫೋಟದಿಂದ ಇಬ್ಬರು ಗಾಯಗೊಂಡ ಘಟನೆ ಅಸ್ಸಾಂನ ಲಖಿಂಪುರ ಜಿಲ್ಲೆಯ ಸರ್‌ಮೋತಿ ಎಂಬಲ್ಲಿ ಶುಕ್ರವಾರ ನಡೆದಿದೆ.ಗ್ರಾಮದ ಮನೆಯೊಂದರ ಕಾಂಪೌಂಡಿನಲ್ಲಿ ಬೆಳಿಗ್ಗೆ 8.30ರ ಸುಮಾರಿಗೆ ಈ ಬಾಂಬ್ ಸ್ಫೋಟಿಸಿದೆ.

`ಇದೊಂದು ಸುಧಾರಿತ ಸ್ಫೋಟಕ ಸಾಧನ (ಐಇಡಿ) ವಾಗಿದೆ. ಘಟನಾ ಸ್ಥಳದಲ್ಲಿ ಹೆಚ್ಚು ಜನರಿರಲಿಲ್ಲ. ಹೀಗಾಗಿ ಹೆಚ್ಚಿನ ಅನಾಹುತ ತಪ್ಪಿದೆ~ ಎಂದು ಅಧಿಕಾರಿಗಳು ತಿಳಿಸಿದ್ದಾರೆ.`ಚಿಂದಿ ಆಯುವ ಬಾಲಕನೊಬ್ಬ ಮಾರುಕಟ್ಟೆ ಪ್ರದೇಶದಲ್ಲಿದ್ದ ಈ ಐಇಡಿಯನ್ನು ಅರಿಯದೇ ತಂದು ತನ್ನ ಮನೆಯ ಹೊರಭಾಗದಲ್ಲಿ ಇಟ್ಟಿದ್ದ. ಜನದಟ್ಟಣೆ ವೇಳೆ ಸಿಡಿಯುವಂತೆ ಉಗ್ರರು ಸಮಯ ಅಳವಡಿಸಿದ್ದುದು  ತನಿಖೆಯಿಂದ ತಿಳಿದುಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry