ನವದೆಹಲಿ: ದಕ್ಷಿಣ ಕರ್ನಾಟಕದಲ್ಲಿ `ಆಲಂಕಾರಿಕ ಮೀನಿನ~ ಹೊಸ ಪ್ರಭೇದವೊಂದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಇದರಿಂದ ಪಶ್ಚಿಮ ಘಟ್ಟದಲ್ಲಿ ಇನ್ನೂ ಅನೇಕ ಜಾತಿಯ ಮೀನುಗಳು ಇರುವ ಸಾಧ್ಯತೆ ಹೆಚ್ಚಳವಾಗಿದೆ.

ಈ ಹೊಸ ಬಗೆಯ ಮೀನು ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ನದಿಯಲ್ಲಿ ಗೋಚರಿಸಿದೆ. ನದಿಯ ಮರಳ ದಂಡೆ ಮೇಲಿದ್ದ ಇದನ್ನು ಭಾರತ- ಬ್ರಿಟನ್ ಸಂಶೋಧನಾ ತಂಡ ಪತ್ತೆ ಹಚ್ಚಿದ್ದು, ಮೀನು 25-30 ಎಂ.ಎಂ. ಉದ್ದವಿದೆ.

ಸಿಹಿ ನೀರಿನಲ್ಲಿ ವಾಸಿಸುವ ಹಾವುಮೀನಿನ (ಈಲ್ ಲೋಚ್) ಪ್ರಭೇದಕ್ಕೆ ಸೇರಿದ ಈ ಮೀನನ್ನು `ಪ್ಯಾಂಗಿಯೊ ಆ್ಯಮಾಫಿಲ~ ಎಂದು ಹೆಸರಿಸಲಾಗಿದೆ. ಈ ಮೀನಿನ ಪ್ರಭೇದ ಪತ್ತೆಯಾಗಿರುವ ವಿಷಯ `ಸಿಹಿನೀರಿನ ಮತ್ಸ್ಯಶಾಸ್ತ್ರ ಅಧ್ಯಯನ ಮತ್ತು ಅನ್ವೇಷಣೆ~ (ಫ್ರೆಷ್ ವಾಟರ್ ಇಕ್ಥಿಯೊಲಜಿಕಲ್ ಎಕ್ಸ್ಪ್ಲೊರೇಷನ್ಸ್) ನಿಯತಕಾಲಿಕೆಯಲ್ಲಿ ಭಾನುವಾರ ವರದಿಯಾಗಿದೆ.

ಭಾರತದಲ್ಲಿ ಪತ್ತೆಯಾಗಿರುವ `ಪ್ಯಾಂಗಿಯೊ~ದ ನಾಲ್ಕನೇ ಪ್ರಭೇದ ಇದಾಗಿದ್ದು, ಈ ನಾಲ್ಕರಲ್ಲಿ ಎರಡು ಪ್ರಬೇಧಗಳು ಪಶ್ಚಿಮ ಘಟದಲ್ಲೇ ಗೋಚರಿಸಿವೆ. ಇನ್ನೆರಡು ಪ್ರಭೇದಗಳು ಈಶಾನ್ಯ ರಾಜ್ಯದಲ್ಲಿ ಪತ್ತೆಯಾಗಿವೆ.
`ಕೇರಳ ಮತ್ತು ತಮಿಳುನಾಡುಗಳಿಗೆ ಹೋಲಿಸಿದರೆ ಕರ್ನಾಟಕದ ಘಟ್ಟ ಶ್ರೇಣಿಯಲ್ಲಿ ಹೆಚ್ಚಿನ ಸಂಶೋಧನಾ ಕಾರ್ಯಗಳು ನಡೆದಿಲ್ಲ.

ಆದರೆ, ಈ ಮೀನು ಕರ್ನಾಟಕದಲ್ಲೇ ಪತ್ತೆಯಾಗಿದೆ. ಅದೂ ಸಂರಕ್ಷಿತ ಪ್ರದೇಶದಿಂದ ಹೊರಗೆ. ಇದರಿಂದ ಸಂರಕ್ಷಿತ ಪ್ರದೇಶಗಳ ವ್ಯಾಪ್ತಿಯಲ್ಲಿ ಮಾತ್ರವಲ್ಲದೆ, ಈ ಪ್ರದೇಶಗಳ ಹೊರಗೂ ಸಂಶೋಧನಾ ಕಾರ್ಯ ನಡೆಸುವ ಅಗತ್ಯವಿದೆ~ ಎಂದು ಈ ಸಂಶೋಧನೆ ನಡೆಸಿದ ಕೊಚ್ಚಿ ಸೇಂಟ್ ಆಲ್ಬರ್ಟ್ ಕಾಲೇಜು ತಂಡದ ಸದಸ್ಯ ರಾಜೀವ್ ರಾಘವನ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ಈ ತಂಡದಲ್ಲಿ ಲಂಡನ್ನಿನ `ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ~ ಮತ್ತು `ಕೆಂಟ್~ ವಿಶ್ವವಿದ್ಯಾಲಯದ ವಿಜ್ಞಾನಿಗಳೂ ಇದ್ದಾರೆ. ಈ ಮೀನು ಪತ್ತೆಯಾದ ಪ್ರದೇಶವನ್ನು ಬೆಂಗಳೂರು ಮೂಲದ ಮೂವರು ಹವ್ಯಾಸಿ ಆಲಂಕಾರಿಕ ಮೀನು ಸಂಗ್ರಹಕಾರರು ಪರಿಶೋಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.