ಬೆಂಗಳೂರು: ರಾಜ್ಯದಲ್ಲಿ ಗುರುವಾರ ಮಳೆ ತುಂಬ ಕಡಿಮೆ ಆಗಿದ್ದರೂ, ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಕೆಲವು ದಿನಗಳಿಂದ ಅಬ್ಬರದಿಂದ ಸುರಿದ ಮಳೆಯಿಂದ ಆಸ್ತಿಪಾಸ್ತಿ ನಷ್ಟದ ವರದಿಗಳು ಬರತೊಡಗಿವೆ.

ಮಹಾರಾಷ್ಟ್ರದಲ್ಲಿ ಭಾರಿ ಮಳೆಯಿಂದಾಗಿ ಆಲಮಟ್ಟಿ ಜಲಾಶಯ ಬಹುತೇಕ ಭರ್ತಿಯಾಗಿದೆ. ಗುರುವಾರ ಸಂಜೆ ಐದು ಗೇಟ್ ಮೂಲಕ 10,000 ಕ್ಯೂಸೆಕ್ ಮತ್ತು ವಿದ್ಯುತ್ ಉತ್ಪಾದನೆಗೆ 43,000 ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ.

ಆಲಮಟ್ಟಿ: ಜಲಾಶಯದ ಗರಿಷ್ಠ ಎತ್ತರ 519.6 ಮೀಟರ್ ಇದ್ದು ಗುರುವಾರ 519 ಮೀಟರ್ವರೆಗೆ ನೀರು ಸಂಗ್ರಹವಾಗಿದೆ. ಮುಂಜಾಗ್ರತಾ ಕ್ರಮವಾಗಿ ನೀರನ್ನು ನದಿಗೆ ಬಿಡಲು ಕೃಷ್ಣಾ ಭಾಗ್ಯಜಲ ನಿಗಮದ ಅಧಿಕಾರಿಗಳು ನಿರ್ಧರಿಸಿದರು. ಒಳಹರಿವು 75,550 ಕ್ಯೂಸೆಕ್ ಇದ್ದು ಜಲಾಶಯದಲ್ಲಿ 123 ಟಿಎಂಸಿ ನೀರು ಸಂಗ್ರಹವಾಗಿದೆ.

ಹೆಚ್ಚಿದ ವಿದ್ಯುತ್ ಉತ್ಪಾದನೆ: ಆಲಮಟ್ಟಿ ಜಲಾಶಯದಲ್ಲಿರುವ ಎಲ್ಲ ಆರು ಘಟಕಗಳಿಂದ ಒಟ್ಟು 283 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಇದೇ ಭಾನುವಾರ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕೃಷ್ಣೆಗೆ ಬಾಗಿನ ಅರ್ಪಿಸುವರು.

ಚಿಕ್ಕೋಡಿ: ತಾಲ್ಲೂಕಿನಲ್ಲಿ ಗುರುವಾರ ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಯಥಾಸ್ಥಿತಿಯಲ್ಲಿದ್ದರೆ ಉಪನದಿಗಳಾದ ದೂಧಗಂಗಾ, ವೇದಗಂಗಾಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ.

ತಾಲ್ಲೂಕಿನ ಕಲ್ಲೋಳ ಮತ್ತು ಯಡೂರ ಗ್ರಾಮಗಳ ಮಧ್ಯದ ಸೇತುವೆ ಮಾತ್ರ ಒಂದು ವಾರದಿಂದಲೂ ಮುಳುಗಡೆ ಸ್ಥಿತಿಯಲ್ಲಿಯೇ ಇದೆ. ಮುಳುಗಡೆಯಾಗಿದ್ದ ಇತರೆ ಆರು ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ.

ಗುರುವಾರ ಬೆಳಿಗ್ಗೆ 8.30ಕ್ಕೆ ಅಂತ್ಯಗೊಂಡ 24 ಗಂಟೆ ಅವಧಿಯಲ್ಲಿ ಮಹಾರಾಷ್ಟ್ರದ ಸಹ್ಯಾದ್ರಿ ಪರ್ವತ ಶ್ರೇಣಿಗಳಲ್ಲಿ ಮಳೆಯ ಅಬ್ಬರ ತಗ್ಗಿದೆ. ಕೊಯ್ನಾದಲ್ಲಿ 4.4 ಸೆಂ.ಮೀ, ನವಜಾ-10.1 ಸೆಂ.ಮೀ, ಮಹಾಬಳೇಶ್ವರ- 9.3 ಸೆಂ.ಮೀ, ವಾರಣಾ- 3.5 ಸೆಂ.ಮೀ ಮಳೆ ದಾಖಲಾಗಿದೆ.

ಹಾವೇರಿ: ಜಿಲ್ಲೆಯಲ್ಲಿ ವಾಡಿಕೆಯಷ್ಟೂ ಮಳೆಯಾಗದಿದ್ದರೂ ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ನದಿಗಳು ತುಂಬಿ ಹರಿಯುತ್ತಿವೆ.

ಹಾವೇರಿ ತಾಲ್ಲೂಕಿನ ಕರ್ಜಗಿ ಗ್ರಾಮದ ಬಳಿ ಸೇತುವೆ ಮೇಲೆ ವರದಾ ನದಿ ನೀರು ಹರಿಯುತ್ತಿದೆ. ಅದೇ ರೀತಿ ಹಾನಗಲ್ ತಾಲ್ಲೂಕಿನ ಮಲಗುಂದ ಹಾಗೂ ಕುಸನೂರು ನಡುವೆ ಇರುವ ಬಾಂದಾರ ಕೂಡಾ ಮುಳುಗಡೆಯಾಗಿದೆ.

ಶಿವಮೊಗ್ಗ : ಜಿಲ್ಲೆಯಲ್ಲಿ ಹೊಸನಗರ ಬಿಟ್ಟು ಉಳಿಧೆಡೆ ಮಳೆ ಕಡಿಮೆಯಾಗಿದೆ. ಶರಾವತಿ, ತುಂಗಾ, ಭದ್ರಾ ನದಿಗಳಲ್ಲಿ ಪ್ರವಾಹ ತಗ್ಗಿದ್ದು, ಲಿಂಗನಮಕ್ಕಿ, ತುಂಗಾ ಹಾಗೂ ಭದ್ರಾ ಜಲಾಶಯಗಳಲ್ಲಿನ ಒಳಹರಿವು ದಿಢೀರ್ ಕಡಿಮೆಯಾಗಿದೆ.

ಲಿಂಗನಮಕ್ಕಿ ಜಲಾಶಯದ ಒಳಹರಿವು 49,873 ಕ್ಯೂಸೆಕ್ಗೆ ಕುಸಿದಿದೆ. ನೀರಿನಮಟ್ಟ 1,788.40 ಅಡಿಗೆ (ಗರಿಷ್ಠ 1,819 ಅಡಿ) ಏರಿದೆ. ಭದ್ರಾ ಜಲಾಶಯದ ನೀರಿನಮಟ್ಟ 158.1 ಅಡಿಗೆ ಏರಿದೆ (ಗರಿಷ್ಠ 186 ಅಡಿ). ಒಳಹರಿವು 16,953 ಕ್ಯೂಸೆಕ್ಗೆ ಕುಸಿದಿದೆ. ಹೊರಹರಿವನ್ನು 2,995 ಕ್ಯೂಸೆಕ್ಗೆ ಸೀಮಿತಗೊಳಿಸಲಾಗಿದೆ. 1ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ಇದ್ದ ತುಂಗಾ ಜಲಾಶಯದ ಒಳಹರಿವು 70,756 ಕ್ಯೂಸೆಕ್ಗೆ ಇಳಿದಿದೆ.

ಹೊಸನಗರ ತಾಲ್ಲೂಕಿನ ಯಡೂರು ಗ್ರಾಮದಲ್ಲಿ ಗುರುವಾರ ಮುಂಜಾನೆ ಶಿವಮೊಗ್ಗ-ತೀರ್ಥಹಳ್ಳಿ-ಹುಲಿಕಲ್-ಕುಂದಾಪುರ ಸಂಪರ್ಕದ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಯ ಮಧ್ಯದಲ್ಲಿ ನೀರು ಹೊರ ಬಂದಿರುವುದರಿಂದ ರಸ್ತೆಯಲ್ಲೇ ಕುಸಿತ ಉಂಟಾಗಿ ರಾಜಹಂಸ ಬಸ್ನ ನಾಲ್ಕು ಚಕ್ರಗಳು ಹುಗಿದು ಹೋಗಿದ್ದವು.

ಅದರಿಂದ ಕೆಲ ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಮಳೆ ತಗ್ಗಿದ ಹಿನ್ನೆಲೆಯಲ್ಲಿ ಮಳೆಯಿಂದ ಸಂಭವಿಸಿರುವ ಅವಘಡ, ನಷ್ಟ, ಬೆಳೆ, ಆಸ್ತಿ ಮತ್ತು ವಸ್ತುಹಾನಿಗಳ ಪರಿಶೀಲನೆಗೆ ಜಿಲ್ಲಾಡಳಿತ ಮುಂದಾಗಿದೆ.

ಮಂಗಳೂರು: ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಗುರುವಾರ ಮಳೆಯ ಪ್ರಮಾಣ ಮತ್ತಷ್ಟು ಕಡಿಮೆಯಾಗಿದ್ದರೂ, ಮಳೆಯಿಂದ ಮನೆಗಳಿಗೆ ಹಾನಿ ಸಂಭವಿಸಿದ ವರದಿಗಳು ಬರತೊಡಗಿವೆ. ಉಳ್ಳಾಲ ಭಾಗದಲ್ಲಿ ಕಡಲ್ಕೊರೆತ ಹೆಚ್ಚಾಗಿದೆ. ಮುಕ್ಕಚ್ಚೇರಿಯಲ್ಲಿ ಮೀನುಗಾರರ ಮೂರು ಮನೆಗಳು ಯಾವುದೇ ಕ್ಷಣದಲ್ಲಿ ಸಮುದ್ರ ಪಾಲಾಗುವ ಸಾಧ್ಯತೆ ಇದೆ.

ನೇತ್ರಾವತಿ, ಕುಮಾರಧಾರಾ ನದಿಗಳು ಸದ್ಯ ಎಲ್ಲೂ ಅಪಾಯ ಮಟ್ಟ ಮೀರಿ ಹರಿಯುತ್ತಿಲ್ಲ. ಇತರ ನದಿಗಳಲ್ಲಿ ಸಹ ನೀರಿನ ಮಟ್ಟ ಇಳಿದಿದೆ.

ಬಂಟ್ವಾಳ ತಾಲ್ಲೂಕಿನ ವಾಮದಪದವು ಸಮೀಪದ ಕುಡಂಬೆಟ್ಟು ಪ್ರೇಮ ಮುದರ, ವಿಟ್ಲ ಸಮೀಪದ ಪೆರುವಾಯಿ ವೆಂಕಪ್ಪ ನಾಯ್ಕ, ವಿಟ್ಲ ಅರಮನೆ ಸಮೀಪದ ಪದ್ಮಾ ಎಂಬವರ ಮನೆಗಳಿಗೆ ಮಳೆಯಿಂದ ಹಾನಿಯಾಗಿದೆ.

ಉಡುಪಿ: ಜಿಲ್ಲೆಯಾದ್ಯಂತ ಗುರುವಾರವೂ ಧಾರಾಕಾರ ಮಳೆಯಾಗಿದ್ದು, ಕಾರ್ಕಳದಲ್ಲಿ ಅತಿ ಹೆಚ್ಚು ಅಂದರೆ 130.8 ಮಿ.ಮೀ. ಮಳೆ ಸುರಿದಿದೆ. ಸತತ ಐದು ದಿನಗಳಿಂದ ಉಡುಪಿಯಲ್ಲಿ ಬೆಳಗಿನ ಜಾವದಿಂದಲೇ ಮಳೆ ಸುರಿಯುತ್ತಿದೆ.
ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಗುರುವಾರ ಮಳೆ ಪ್ರಮಾಣದಲ್ಲಿ ಇಳಿಕೆಯಾಗಿದೆ. ಮೂಡಿಗೆರೆ ತಾಲ್ಲೂಕಿನ ಅಲ್ಲಲ್ಲಿ ಭಾರಿ ಮಳೆ ಸುರಿದಿದೆ. ಭದ್ರಾ ಮತ್ತು ತುಂಗಾ ನದಿ ನೀರಿನ ಹರಿವು ತುಸುಕಡಿಮೆಯಾಗಿದೆ.

ಬಾಳೆಹೊನ್ನೂರು ಭದ್ರಾ ಎಸ್ಟೇಟ್ ಬಳಿ ಮಳೆಯಿಂದ ಭಾರಿ ಮರವೊಂದು ಮುಂಜಾನೆ ರಸ್ತೆ ಮೇಲೆ ಬಿದ್ದ ಕಾರಣ ಸಂಚಾರ ಎರಡು ಗಂಟೆಗೂ ಹೆಚ್ಚು ಕಾಲ ಅಸ್ತವ್ಯಸ್ತಗೊಂಡಿತ್ತು.

ಮಡಿಕೇರಿ: ಕೊಡಗಿನಲ್ಲಿ ಗುರುವಾರ ಸಾಧಾರಣ ಮಳೆಯಾಗಿದೆ. ಜಿಲ್ಲೆಯ ನಾಪೋಕ್ಲು, ಸಂಪಾಜೆ, ಭಾಗಮಂಡಲ, ವಿರಾಜಪೇಟೆ ಕಸಬಾ, ಶ್ರಿಮಂಗಲ ಸೇರಿದಂತೆ ಇತರೆಡೆ ಉತ್ತಮ ಮಳೆಯಾಗಿದೆ.

ಜಿಲ್ಲೆಯ ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗರಕೇರಿ, ಪರಕಟಗೇರಿ, ಬಿರುನಾಣಿ, ಪರಾಲು ಮತ್ತಿತರ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಕೆಲ ಭಾಗಗಳಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ.

ಗೋಣಿಕೊಪ್ಪಲು: ದಕ್ಷಿಣ ಕೊಡಗಿನಾದ್ಯಂತ ಬಿದ್ದ ಭಾರಿ ಮಳೆಗೆ ಬಹಳಷ್ಟು ನಷ್ಟ ಸಂಭವಿಸಿದೆ. ಶ್ರೀಮಂಗಲ ಸಮೀಪದ ಬೀರುಗ, ಪರಕಟಗೇರಿ, ಕುರ್ಚಿ ಮುಂತಾದ ಗ್ರಾಮಗಳಲ್ಲಿ ಹಲವು ಮನೆ ಕುಸಿದಿದ್ದು, ಕೆಲವು ಕಡೆ ಬರೆ ಕುಸಿದು ಕಾಫಿ ತೋಟ ಹಾಗೂ ಬತ್ತದ ಗದ್ದೆಗೆ ಅಪಾರ ಮಣ್ಣು ತುಂಬಿದೆ.

ಪೊನ್ನಂಪೇಟೆ ಸಮೀಪದ ಬಲ್ಯಮಂಡೂರು ಹಾಗೂ ಹರಿಹರ ನಡುವಿನ ಡಾಂಬರ್ ರಸ್ತೆ ಲಕ್ಷ್ಮಣತೀರ್ಥ ನದಿ ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ಗದ್ದೆ ಆವರಿಸಿ ಹರಿದ ಭಾರಿ ನೀರು ರಸ್ತೆಗೆ ತೀವ್ರ ಹಾನಿಮಾಡಿದೆ. 10 ಅಡಿ ಅಗಲ ಹಾಗೂ 5ಅಡಿ ಆಳದಲ್ಲಿ ನೀರು ಹರಿಯುತ್ತಿದ್ದು, ಸಂಪರ್ಕಕಕ್ಕೆ ಬೇರೆ ದಾರಿಯೇ ಇಲ್ಲವಾಗಿದೆ. ಈ ಭಾಗದ ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಗುರುವಾರ ಪರಿಶೀಲನೆ ನಡೆಸಿದ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್.ಕುಶಾಲಪ್ಪ, ಆದಷ್ಟು ಬೇಗನೆ ರಸ್ತೆ ದುರಸ್ತಿ ಮಾಡಬೇಕು ಎಂದು ಸಣ್ಣನೀರಾವರಿ ಇಲಾಖೆ ನಿರೀಕ್ಷಕ ಬಿ.ಕೆ. ಗಣಪತಿಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.