ಸೋಮವಾರ, ಮೇ 23, 2022
20 °C

ಇಂದು ಮಹಿಳಾ ಜಾಗೃತಿ ಸಮಾವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಪುರ: ಕನಕಾಂಬರಿ ಮಹಿಳಾ ಒಕ್ಕೂಟ ಹಾಗೂ ಕೆನರಾ ಬ್ಯಾಂಕ್ ಸಹಯೋಗದಲ್ಲಿ ಶುಕ್ರವಾರದಂದು `ಮಹಿಳಾ ಜಾಗೃತಿ ಸಮಾವೇಶವನ್ನು~ ಬೆಳಿಗ್ಗೆ 11 ಗಂಟೆಗೆ ಬೂದಿಕೆರೆ ರಸ್ತೆಯಲ್ಲಿನ ಶ್ರಿಕೃಷ್ಣ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ.ಪ್ರಗತಿಪರ ಕೃಷಿಕ ಹೆಚ್.ಕೆ.ಶ್ರಿಕಂಠು ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದಾರೆ. ಕೆನರಾ ಬ್ಯಾಂಕ್ ಉಪ ಮಹಾಪ್ರಭಂದಕ ರವೀಂದ್ರ ಭಂಡಾರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕೆನರಾಬ್ಯಾಂಕ್ ಹಿರಿಯ ಶಾಖಾ ವ್ಯವಸ್ಥಾಪಕ ಎಂ.ಜಿ. ಪಂಡಿತ್, ಶಾಖಾ ವ್ಯವಸ್ಥಾಪಕ ನಾಗೇಂದ್ರಕುಮಾರ್, ಎಂ. ಕನಕಾಂಬರಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಪವಿತ್ರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.  ಒಕ್ಕೂಟದ ಹೆಚ್ಚಿನ ಸದಸ್ಯರು ಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ಸದುಪಯೋಗ ಪಡಿಸಿಕೊಳ್ಳುವಂತೆ ಅವರು ಮನವಿ ಮಾಡಿದ್ಧಾರೆ.ಯುವತಿ ನಾಪತ್ತೆ

ಚನ್ನಪಟ್ಟಣ: ತಾಲ್ಲೂಕಿನ ಬೈರಾಪಟ್ಟಣದ ಗ್ರಾಮದ ಯುವತಿಯೊಬ್ಬಳು ಕಳೆದ ನಾಲ್ಕು ತಿಂಗಳುಗಳಿಂದ ನಾಪತ್ತೆಯಾಗಿರುವುದಾಗಿ ಆಕೆಯ ತಂದೆ ರಾಮಯ್ಯ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ.ಸೌಮ್ಯ(19) ಕಾಣೆಯಾದ ಯುವತಿ. ಜುಲೈ 1ರಂು ಮನೆಯಿಂದ ಹೊರ ಹೋದವಳು, ಇನ್ನೂ ಹಿಂತಿರುಗಿ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಗೋಧಿ ಮೈಬಣ್ಣ, ದುಂಡು ಮುಖ, 4.5ಅಡಿ ಎತ್ತರವಿದ್ದು, ಕೆಂಪು ಬಣ್ಣದ ಸೀರೆ ಹಾಗೂ ರವಿಕೆ ಧರಿಸಿರುತ್ತಾಳೆ. ಕನ್ನಡ ಚೆನ್ನಾಗಿ ಮಾತನಾಡುತ್ತಾಳೆ, ಈ ಚಹರೆಯುಳ್ಳ ಯುವತಿ ಪತ್ತೆಯಾದಲ್ಲಿ ಗ್ರಾಮಾಂತರ ವೃತ್ತ ನೀರಿಕ್ಷರು ದೂ.ಸಂ. 9480802857 ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.