ನವದೆಹಲಿ (ಪಿಟಿಐ): ರಿಯೊ ಒಲಿಂ ಪಿಕ್ಸ್ ಉದ್ಘಾಟನೆಗೆ ಇನ್ನೊಂದು ದಿನ ಮಾತ್ರ ಬಾಕಿ ಉಳಿದಿದೆ. ಇದೇ ಸಂದರ್ಭ ದಲ್ಲಿ ಭಾರತದ ಕ್ರೀಡಾ ಪ್ರೇಮಿಗಳಿಗೆ ಮತ್ತೊಂದು ಆಘಾತದ ಸುದ್ದಿ ಹೊರಬಿದ್ದಿದೆ.

ಪುರುಷರ 200 ಮೀಟರ್ಸ್ ಓಟ ದಲ್ಲಿ ಸ್ಪರ್ಧಿಸಲಿರುವ ಧರಮ್ ವೀರ್ ಸಿಂಗ್ ಅವರು ಉದ್ದೀಪನ ಮದ್ದು ಸೇವನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಅವರು ‘ಎ’ ಮಾದರಿ ಪರೀಕ್ಷೆ ಯಲ್ಲಿ ನಿಷೇಧಿತ ಅನಾಬೊಲಿಕ್ ಸ್ಟೆರಾಯ್ಡ್ ಸೇವನೆ ಮಾಡಿರುವುದು ಖಚಿತವಾಗಿದೆ. 36 ವರ್ಷಗಳ ನಂತರ 200 ಮೀಟರ್ಸ್ ಓಟದಲ್ಲಿ ಸ್ಪರ್ಧಿಸಲು ಆಯ್ಕೆಯಾದ ಅಥ್ಲೀಟ್ ಅವರಾಗಿದ್ದಾರೆ.

ಜುಲೈ 11ರಂದು ಬೆಂಗಳೂರಿನಲ್ಲಿ ನಡೆದಿದ್ದ ಇಂಡಿಯನ್ ಗ್ರ್ಯಾನ್ ಪ್ರಿ ಕೂಟದಲ್ಲಿ ಅವರಿಂದ ನಾಡಾ ಮಾದರಿ ಸಂಗ್ರಹಿಸಿತ್ತು. ಆದರೆ, ಇದುವರೆಗೂ ನಾಡಾ ಅಥವಾ ಭಾರತ ಅಥ್ಲೆಟಿಕ್ ಫೆಡ ರೇಷನ್ ಪ್ರಕರಣವನ್ನು ಖಚಿತಪಡಿಸಿಲ್ಲ. ‘ಧರಮ್ವೀರ್ ಅವರು ಬಿ ಮಾದರಿ ಪರೀಕ್ಷೆಗಾಗಿ ಮನವಿ ಸಲ್ಲಿಸಲು ನಾಡಾ ಅವಕಾಶ ನೀಡಿದೆ. ಅವರಿಗೆ ಈ ಪ್ರಕ್ರಿಯೆಗಾಗಿ ಏಳು ದಿನಗಳ ಅವಕಾಶ ಇದೆ’ ಎಂದು ಮೂಲಗಳು ತಿಳಿಸಿವೆ.

ಹರಿಯಾಣದ ಧರಮ್ವೀರ್ ಮದ್ದು ಸೇವನೆ ಪ್ರಕರಣದಲ್ಲಿಸಿಕ್ಕಿ ಬಿದ್ದಿರು ವುದು ಇದೇ ಮೊದಲ ಬಾರಿಯಲ್ಲ. 2012ರಲ್ಲಿ ಅವರು ರಾಷ್ಟ್ರೀಯ ಅಥ್ಲೆ ಟಿಕ್ ಚಾಂಪಿಯನ್ಷಿಪ್ನಲ್ಲಿ 100 ಮೀಟರ್ಸ್ ಓಟದಲ್ಲಿ ಭಾಗವಹಿಸಿದ್ದ ಅವರು ಮದ್ದು ಸೇವನೆ ಪರೀಕ್ಷೆಯನ್ನು ತಪ್ಪಿಸಿಕೊಂಡಿದ್ದರು. ಆದ್ದರಿಂದ ಈ ಬಾರಿ ಅವರೆನಾದರೂ ಮದ್ದು ಸೇವನೆ ಮಾಡಿರುವುದು ಸಾಬೀತಾಗಿಬಿಟ್ಟರೆ ಎಂಟು ವರ್ಷಗಳ ನಿಷೇಧ ಶಿಕ್ಷೆ ಅನು ಭವಿಸುವುದು ಖಚಿತ. ಇದ ರಿಂದಾಗಿ ಅವರ ಕ್ರೀಡಾ ಜೀವನಕ್ಕೆ ತೆರೆ ಬೀಳಲಿದೆ.

ಹೋದ ತಿಂಗಳು ಬೆಂಗಳೂರಿನಲ್ಲಿ ನಡೆದಿದ್ದ ಕೂಟದಲ್ಲಿ ಅವರು 20.45 ಸೆಕೆಂಡುಗಳಲ್ಲಿ 200 ಮೀಟರ್ಸ್ ಓಟದಲ್ಲಿ ಗುರಿ ತಲುಪಿ ರಿಯೊಗೆ ಅರ್ಹತೆ ಪಡೆದಿದ್ದರು. ಅವರು ರಾಷ್ಟ್ರೀಯ ಶಿಬಿರದಲ್ಲಿ ತರಬೇತಿ ಪಡೆಯುತ್ತಿರಲಿಲ್ಲ. ರೋಹತಕ್ ನಲ್ಲಿ ಅವರು ಖಾಸಗಿ ಕೋಚ್ ಮೂಲಕ ತರಬೇತಿ ಪಡೆಯುತ್ತಿದ್ದರು.

ಶಾಟ್ಪಟ್ ಅಥ್ಲೀಟ್ ಇಂದರ್ ಜೀತ್ ಸಿಂಗ್ ಅವರು ಉದ್ದೀಪನ ಮದ್ದು ಸೇವನೆ ಮಾಡಿದ್ದು ಮಂಗಳವಾರ ಬಿ ಪರೀಕ್ಷೆಯಲ್ಲಿ ಸಾಬೀತಾಗಿತ್ತು. ಕಳೆದ ತಿಂಗಳು ಉದ್ದೀಪನ ಮದ್ದು ಸೇವನೆ ಆರೋಪದಲ್ಲಿ ಸಿಲುಕಿದ್ದ ಕುಸ್ತಿಪಟು ನರಸಿಂಗ್ ಯಾದವ್ ಅವರನ್ನು ಸೋಮವಾರ ನಾಡಾ ನಿರ್ದೋಷಿ ಎಂದು ಘೋಷಿಸಿತ್ತು.

ನರಸಿಂಗ್ಗೆ ಯುಡಬ್ಲ್ಯುಡಬ್ಲ್ಯು ಹಸಿರು ನಿಶಾನೆ
ನವದೆಹಲಿ (ಪಿಟಿಐ): ರಿಯೊ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಲು ಕುಸ್ತಿಪಟು ನರಸಿಂಗ್ ಯಾದವ್ ಅವರಿಗೆ ಸಂಯುಕ್ತ ವಿಶ್ವ ಕುಸ್ತಿ (ಯುಡಬ್ಲ್ಯುಡಬ್ಲ್ಯು) ಸಂಸ್ಥೆಯು ಹಸಿರು ನಿಶಾನೆ ತೋರಿಸಿದೆ.

ನರಸಿಂಗ್ ಅವರನ್ನು ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ನಿರ್ದೋಷಿಯೆಂದು ನಾಡಾ ಘೋಷಿಸಿತ್ತು. ಇದೀಗ ವಾಡಾ (ವಿಶ್ವ ಉದ್ದೀಪನ ಮದ್ದು ತಡೆ ಸಂಸ್ಥೆ) ಅನು ಮತಿಗಾಗಿ ಅವರು ಕಾಯುತ್ತಿದ್ದಾರೆ. ನಾಡಾ ನೀಡಿರುವ ತೀರ್ಪನ್ನು ವಾಡಾ ಮರುಪರಿಶೀಲನೆ ನಡೆಸಲಿದೆ.
ನರಸಿಂಗ್ ಅವರು ಕೆಲವು ತಿಂಗಳುಗಳ ಹಿಂದೆ ವಿಶ್ವ ಕುಸ್ತಿ ಚಾಂಪಿಯನ್ಷಿಪ್ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಆ ಮೂಲಕ ರಿಯೊ ಒಲಿಂಪಿಕ್ಸ್ನಲ್ಲಿ 74 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸಲು ಆಯ್ಕೆಯಾಗಿದ್ದಾರೆ.

ಕಳೆದ ಎರಡು ಒಲಿಂಪಿಕ್ಸ್ಗಳಲ್ಲಿ ಪದಕವಿಜೇತ ಸುಶೀಲ್ ಕುಮಾರ್ ಅವರ ಬದಲಿಗೆ ಅವರು ವಿಶ್ವ ಟೂರ್ನಿಯಲ್ಲಿ ಭಾಗವಹಿಸಿದ್ದರು.
‘ನಾಡಾದಿಂದ ಕ್ಲೀನ್ಚಿಟ್ ಪಡೆದ ತಕ್ಷಣವೇ ನರಸಿಂಗ್ ಅವರು ಯುಡಬ್ಲ್ಯುಡಬ್ಲ್ಯುಗೆ ಪತ್ರ ಬರೆದಿದ್ದರು. ಅವರ ಮನವಿಗೆ ಸ್ಪಂದಿಸಿರುವ ಯುಡಬ್ಲ್ಯುಡಬ್ಲ್ಯು ಅನುಮತಿ ನೀಡಿದೆ’ ಎಂದು ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಹೇಳಿದ್ದಾರೆ.

ಆದರೆ 26 ವರ್ಷದ ಯಾದವ್ ಈಗಲೇ ರಿಯೊ ವಿಮಾನ ಹತ್ತುವಂತಿಲ್ಲ. ನಾಡಾ ತನ್ನ ತೀರ್ಪಿನ ಎಲ್ಲ ದಾಖಲೆಪತ್ರಗಳನ್ನು ವಾಡಾಗೆ ಕಳುಹಿಸಿದೆ. ಒಂದೊಮ್ಮೆ ವಾಡಾ ಈ ತೀರ್ಪಿನ ಕುರಿತು ಅತೃಪ್ತಿ ವ್ಯಕ್ತಪಡಿಸಿದರೆ ಕ್ರೀಡಾ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಬಹುದು. 21 ದಿನಗಳೊಳಗೆ ಮೊಕದ್ದಮೆ ಹಾಕಲು ಕಾಲಾವಕಾಶ ಇರುತ್ತದೆ. ನಂತರ ನ್ಯಾಯಾಲಯವು ನೀಡುವ ತೀರ್ಪಿನವರೆಗೂ ಕಾಯಬೇಕಾಗಬಹುದು.
ಹೋದ ತಿಂಗಳು ಅವರ ಮೂತ್ರ ಮತ್ತು ರಕ್ತದ ಮಾದರಿಗಳ ಪರೀಕ್ಷೆ ಯಲ್ಲಿ ನಿಷೇಧಿತ ಉದ್ದೀಪನ ಮದ್ದು ಸೇವಿಸಿದ್ದು ಪತ್ತೆಯಾಗಿತ್ತು. ಅವರ ಮೇಲೆ ತಾತ್ಕಾಲಿಕ ಅಮಾನತು ಶಿಕ್ಷೆ ಕೂಡ ವಿಧಿಸಲಾಗಿತ್ತು.

‘ನನ್ನ ವಿರುದ್ಧ ಪಿತೂರಿ ಮಾಡಲಾಗಿದೆ. ನನ್ನ ಆಹಾರದಲ್ಲಿ ಮದ್ದು ಬೆರೆಸಲಾಗಿದೆ’ ಎಂದು ನರಸಿಂಗ್ ಅವರು ತಮ್ಮ ವಸತಿನಿಲಯದಲ್ಲಿದ್ದ ಇಬ್ಬರು ಜೂನಿಯರ್ ಕುಸ್ತಿಪಟುಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ನಂತರ ವಿಚಾರಣೆ ನಡೆಸಿದ ನಾಡಾ ನರಸಿಂಗ್ ಅವರು ‘ಬಲಿಪಶು’ವಾಗಿದ್ದಾರೆ ಎಂದು ತೀರ್ಪು ನೀಡಿತ್ತು. ಅವರನ್ನು ನಿರ್ದೋಷಿ ಎಂದೂ ಘೋಷಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.