ಎರಿಸ್ ಎಂದರೆ...

7

ಎರಿಸ್ ಎಂದರೆ...

Published:
Updated:
ಎರಿಸ್ ಎಂದರೆ...

`ಎರಿಸ್~ ಕಂಡುಹಿಡಿದದ್ದು ಯಾರು?

`ಎರಿಸ್~ ಮೊದಲು ಪತ್ತೆಯಾದದ್ದು 2005ರಲ್ಲಿ. ಅಕ್ಟೋಬರ್ 2003ರಲ್ಲಿ ಮೈಕ್ ಬ್ರೌನ್, ಚಾ ಟ್ರುಜಿಲೊ ಹಾಗೂ ಡೇವಿಡ್ ರಾಬಿನೋವಿಟ್ಜ್ ಅವರನ್ನೊಳಗೊಂಡ ಗಗನಯಾತ್ರಿಗಳ ತಂಡ ಅಮೆರಿಕದ `ಪಾಲೋಮರ್ ಒಬ್ಸರ್ವೇಟರಿ~ಯಲ್ಲಿ ಕೆಲವು ಚಿತ್ರಗಳನ್ನು ತೆಗೆದಿದ್ದರು. ಅವುಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದಾಗ `ಎರಿಸ್~ ಪತ್ತೆಯಾದದ್ದು.

ಅದಕ್ಕೆ `ಎರಿಸ್~ ಎಂಬ ಹೆಸರು ಬರಲು ಕಾರಣವೇನು?

2003ರಲ್ಲಿ ಇನ್ನೊಂದು ಗ್ರಹ ಪತ್ತೆಯಾಗಿದೆಯೆಂದೂ ಅದಕ್ಕೆ `ಯುಬಿ313~ ಎಂದೂ ಹೆಸರು ನೀಡಲಾಗಿತ್ತು. ಆಮೇಲೆ ಅದಕ್ಕೆ ಗ್ರೀಕ್ ಯುದ್ಧದೇವತೆ `ಎರಿಕ್~ ಹೆಸರನ್ನಿಡಬೇಕು ಎಂದು ಚರ್ಚೆ ನಡೆಯಿತು. ಗಾತ್ರದಲ್ಲಿ ಗ್ರಹಗಳಷ್ಟು ದೊಡ್ಡದಾಗಿ ಇಲ್ಲದ ಅದನ್ನು ಇನ್ನೊಂದು ಗ್ರಹವೆಂದು ಕರೆಯಲು ಬಾಹ್ಯಾಕಾಶ ವಿಜ್ಞಾನಿಗಳು ಒಪ್ಪಲಿಲ್ಲ. ಆಮೇಲೆ ಅದನ್ನು ಸಣ್ಣ ಗ್ರಹವಷ್ಟೆ ಎಂದು ಹೇಳಿದರು. ಆದರೂ `ಎರಿಕ್~ ಎಂಬ ಹೆಸರು ಉಳಿಯಿತು.

ಅದು ಎಷ್ಟು ದೊಡ್ಡದು?

ಮೊದಲಿಗೆ ಅದು ಪ್ಲುಟೋಗಿಂತ ದೊಡ್ಡದಾಗಿದೆ ಎಂದು ಭಾವಿಸಲಾಗಿತ್ತು. ಇತ್ತೀಚಿನ ಅಧ್ಯಯನಗಳು ಪ್ಲುಟೋದಷ್ಟೇ ಇದೆ ಅಥವಾ ಅದಕ್ಕಿಂತ ಸಣ್ಣದಾಗಿದೆ ಎಂದು ಹೇಳಿವೆ. ಈ ಗ್ರಹದಲ್ಲಿ `ಡಿಸ್ನೋಮಿಯಾ~ ಎಂಬ ಚಂದ್ರನೂ ಉಂಟು.

ಸೌರಮಂಡಲದಲ್ಲಿ ಇದು ಎಲ್ಲಿದೆ?

ನೆಪ್ಚೂನ್ ಗ್ರಹಕ್ಕಿಂತ ಹಿಂಬದಿಯಲ್ಲಿ ಛಿದ್ರಗೊಂಡ ವೃತ್ತಾಕಾರದ ವಲಯವಿದೆ. ಅಲ್ಲಿ `ಎರಿಸ್~ ಇದೆ. ಸೂರ್ಯನನ್ನು ಸುತ್ತಲು ಇದು 557 ವರ್ಷ ತೆಗೆದುಕೊಳ್ಳುತ್ತದೆ. ಪ್ಲುಟೋದಂತೆಯೇ ಇದು ಕೂಡ ಸೌರಮಂಡಲದಲ್ಲಿ ಸೂರ್ಯನಿಂದ ಅತಿ ದೂರದಲ್ಲಿದೆ.

ಇನ್ಯಾವ ಸಣ್ಣ ಗ್ರಹಗಳು ಇವೆ?

ಪ್ಲುಟೋ, ಹಾಮಿಯಾ, ಮೇಕ್‌ಮೇಕ್ ಹಾಗೂ ಸೆರೆಸ್ (ತುಂಬಾ ಸಣ್ಣದು) ಇತರೆ ಸಣ್ಣ ಗ್ರಹಗಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry