ಎಲ್‌ಐಸಿ ಪ್ರತಿನಿಧಿಗಳ ಬೈಕ್ ರ‌್ಯಾಲಿ

ಗುರುವಾರ , ಮೇ 23, 2019
29 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಎಲ್‌ಐಸಿ ಪ್ರತಿನಿಧಿಗಳ ಬೈಕ್ ರ‌್ಯಾಲಿ

Published:
Updated:

ಹಾನಗಲ್ಲ: ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳ ದಿನಾಚರಣೆಯ ಅಂಗವಾಗಿ ಸೋಮವಾರ ಹಾನಗಲ್ಲಿನಲ್ಲಿ ಸಾರ್ವಜನಿಕರಿಗೆ ವಿಮಾ ಪಾಲಿಸಿಗಳ ಮಾಹಿತಿಯ ಪ್ರಚಾರ ಮಾಡ ಲಾಯಿತು. ಇದಕ್ಕಾಗಿ ಪಟ್ಟಣದಲ್ಲಿ ಪ್ರತಿನಿಧಿಗಳು ಬೈಕ್ ರ‌್ಯಾಲಿ ನಡೆಸಿದರು.ಇಲ್ಲಿನ ಶಾಖಾ ಕಚೇರಿಯಿಂದ ಹೊರಟ ಬೈಕ್ ರ‌್ಯಾಲಿ ತಡಸ-ಗೊಂದಿ ರಸ್ತೆಯ ಮೂಲಕ ಸಾಗಿ ನಿರೀಕ್ಷಣಾ ಮಂದಿರಕ್ಕೆ ತೆರಳಿ ರಂಜನಿ ಟಾಕೀಸಿನ ಬಳಿಯ ಸಿ.ಎಂ.ಉದಾಸಿ ಮುಖ್ಯ ರಸ್ತೆ ಮೂಲಕ ಪ್ರಮುಖ ಬೀದಿಗಳಲ್ಲಿ ಸಾಗಿತು. ನಂತರ ಶಾಖಾ ಕಚೇರಿಯಲ್ಲಿ ನಡೆದ ಸಮಾ ರಂಭದಲ್ಲಿ 25 ವರ್ಷ ಪ್ರತಿನಿಧಿಯಾಗಿ ಸೇವೆಗೈದ ಪರಮೇಶ್ವರಪ್ಪ ಬೆಲ್ಲದ, ಆರ್.ಕೆ.ಶಾಂತಪೂರ ಮಠ, ಎಲ್.ಎಸ್.ಶಿವಣ್ಣನವರ, ಪಿ.ಕೆ.ಬಾಬಜಿ, ಎಸ್.ಎಸ್.ಎರಿಮನಿ ಅವರನ್ನು ಶಾಖಾ ಕಚೇರಿ ಪರವಾಗಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಶಾಖಾಧಿಕಾರಿ ಬಿ.ತುಳಸಿ ರಾಮ್ ಮಾತನಾಡಿ,  ಭಾರತೀಯ ಜೀವ ವಿಮಾ ನಿಗಮವು ಕಳೆದ 55 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಇದುವರೆಗೂ 30 ಕೋಟಿ ಪಾಲಿಸಿ ದಾರರನ್ನು ಹೊಂದಿ ಜನರ ವಿಶ್ವಾಸ ಗಳಿಸಿದೆ ಎಂದರು.ದೇಶದ ವಿಮಾ ರಂಗದಲ್ಲಿ ಎಲ್‌ಐಸಿ ಪ್ರಥಮ ಸ್ಥಾನ ಪಡೆದಿದೆ. ಈ ನಿಟ್ಟಿನಲ್ಲಿ ಎಲ್ಲೈಸಿ ಪ್ರತಿನಿಧಿ ಗಳು ಪಾಲಿಸಿದಾರರಿಗೆ ಉತ್ತಮ ಸೇವೆ ನೀಡು ವತ್ತ ಗಮನ ಹರಿಸಬೇಕು. ಗ್ರಾಹಕರಿಗೆ ಪಾಲಿ ಸಿಗಳ ಸಮಗ್ರ ವಿವರವನ್ನು ನೀಡಬೇಕು ಎಂದು ಹೇಳಿದರು.ಬೈಕ್ ರ‌್ಯಾಲಿಯಲ್ಲಿ ಅಭಿವೃದ್ಧಿ ಅಧಿಕಾರಿ ಗಳಾದ ಎಸ್.ಎನ್.ಮುಕ್ರಿ, ಪಿ.ಎಸ್.ಸಾಂಬ್ರಾಣಿ, ಎಸ್.ಕೆ.ಖೇಣಿಕರ, ಎ.ಎ.ಲಾಲಮಿಯ್ಯಾನವರ, ಪ್ರತಿನಿಧಿ ಗಳಾದ ಪ್ರಕಾಶ ಜಂಗಲಿ, ಐ.ವಿ.ಮುದಿ ಗೌಡ್ರ, ಆರ್.ಕೆ.ಶಾಂತಪೂರಮಠ, ಪರಮೇಶ್ವ ರಪ್ಪ ಬೆಲ್ಲದ, ಜಿ ಎನ್ ಮೇಗಳಮನಿ, ಎಸ್ ಎಂ ಮಲಿಲ್ಲಿಗಾರ, ಜಿ.ಎಚ್.ಪಾಟೀಲ ಮುಂತಾದವರು ಪಾಲ್ಗೊಂಡಿದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry