ಸೋಮವಾರ, ಮೇ 17, 2021
25 °C

ಎಸ್.ತಿಪ್ಪೇಸ್ವಾಮಿ ಅವರಿಗೆ ಅಂತರರಾಷ್ಟ್ರೀಯ ಮನ್ನಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಹೆಸರಾಂತ ಛಾಯಾಗ್ರಾಹಕ ಎಸ್.ತಿಪ್ಪೇಸ್ವಾಮಿ ಅವರಿಗೆ ಫೋಟೋಗ್ರಫಿ  ಸೊಸೈಟಿ ಆಫ್ ಅಮೆರಿಕ ನೀಡುವ ಅಂತರರಾಷ್ಟ್ರೀಯ  ಮಟ್ಟದ ಎಫ್‌ಪಿಎಸ್‌ಎ (ಫೆಲೋಶಿಪ್) ದೊರೆತಿದೆ. ಈ ಮನ್ನಣೆಯು ವನ್ಯಜೀವಿ ವಿಭಾಗಕ್ಕೆ ಲಭಿಸಿದೆ.ತಿಪ್ಪೇಸ್ವಾಮಿ ಅವರು ಛಾಯಾಗ್ರಾಹಕ, ಉಪನ್ಯಾಸಕ ಹಾಗೂ ವಿವಿಧ ಛಾಯಾಚಿತ್ರ ಪ್ರದರ್ಶನಗಳ ತೀರ್ಪುಗಾರರಾಗಿ ಕೆಲಸ ಮಾಡಿದ್ದಾರೆ. ಇವರು ಛಾಯಾಗ್ರಾಹಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಸೇವೆಗೆ ಈ ಮನ್ನಣೆ ಲಭಿಸಿದೆ. ಇವರಿಗೆ ಶೇ 75ರಷ್ಟು ಮತಗಳು ದೊರೆತು, ಅತ್ಯುನ್ನತ ಗೌರವಕ್ಕೆ ಪಾತ್ರರಾಗಿದ್ದಾರೆ. ತಿಪ್ಪೇಸ್ವಾಮಿ ಸೆ.24ರಂದು ಅಮೆರಿಕದ ಕೊಲರಾಡೊ ಸ್ಪ್ರಿಂಗ್ಸ್‌ನಲ್ಲಿ ಫೆಲೋಶಿಪ್ ಸ್ವೀಕರಿಸಲಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.