ಭಾನುವಾರ, ಮಾರ್ಚ್ 7, 2021
22 °C
ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನೆ

ಎಸ್‌ಬಿಎಂ, ನಬಾರ್ಡ್‌ಗೆ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಸ್‌ಬಿಎಂ, ನಬಾರ್ಡ್‌ಗೆ ಭೇಟಿ

ಬೆಂಗಳೂರು: ಕೆ.ಜಿ.ರಸ್ತೆಯಲ್ಲಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು (ಎಸ್‌ಬಿಎಂ) ಪ್ರಧಾನ ಕಚೇರಿ ಹಾಗೂ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾ ಭಿವೃದ್ಧಿ ಬ್ಯಾಂಕ್‌ (ನಬಾರ್ಡ್‌) ಪ್ರಾದೇ ಶಿಕ ಕಚೇರಿಗೆ  ಸೋಮವಾರ ಭೇಟಿ ನೀಡಿದ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಲ್. ಹನುಮಂತಯ್ಯ ಅವರು ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲಿಸಿದರು.ಎಸ್‌ಬಿಎಂನಲ್ಲಿ ಕನ್ನಡ ಅನುಷ್ಠಾನ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಹನುಮಂತಯ್ಯ ಅವರು, ‘ಮುಂದಿನ ದಿನಗಳಲ್ಲಿ ಡಿಮ್ಯಾಂಡ್ ಡ್ರಾಫ್ಟ್‌ನಲ್ಲಿ (ಡಿ.ಡಿ) ಕನ್ನಡ ಬಳಕೆ ಮಾಡಲು ಕ್ರಮ ಕೈಗೊಳ್ಳಬೇಕು.  ಕನ್ನಡ ತಂತ್ರಾಂಶವನ್ನು ಎಲ್ಲ ವ್ಯವಹಾರಗಳಲ್ಲಿ ಬಳಸುವ ಆಯ್ಕೆ ಬರಬೇಕು. ವಾರ್ಷಿಕ ವರದಿ, ಆದೇಶ ಮತ್ತು ಸುತ್ತೋಲೆಗಳು ಕನ್ನಡದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಹೊರ ರಾಜ್ಯದ ಅಧಿಕಾರಿಗಳಿಗೆ ಕನ್ನಡ ಕಲಿಸಲು ಕ್ರಮಕೈಗೊಳ್ಳಬೇಕು’ ಎಂದು ಬ್ಯಾಂಕಿನ ಅಧಿಕಾರಿಗಳಿಗೆ ಸೂಚಿಸಿದರು.‘ನೇಮಕಾತಿ ಜಾಹೀರಾತುಗಳನ್ನು ಕಡ್ಡಾಯವಾಗಿ ಕನ್ನಡ ದಿನಪತ್ರಿಕೆಗಳಲ್ಲಿ ಪ್ರಕಟಿಸಬೇಕು. ಬ್ಯಾಂಕಿಂಗ್‌ ಪರೀಕ್ಷೆಗಳ ಕುರಿತು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ತರಬೇತಿ ಕಾರ್ಯಾಗಾರ ನಡೆಸಬೇಕು. ಮೌಖಿಕ ಸಂದರ್ಶನದಲ್ಲಿ ಕನ್ನಡಕ್ಕೆ ನೀಡುವ ಕೃಪಾಂಕವನ್ನು 3 ರಿಂದ 15ಕ್ಕೆ ಏರಿಕೆ ಮಾಡಬೇಕು’ ಎಂದು ತಿಳಿಸಿದರು.‘ಇಂದು ನಡೆಯುತ್ತಿರುವ ಅಖಿಲ ಭಾರತ ಮಟ್ಟದ ನೇಮಕಾತಿ ಪ್ರಕ್ರಿ ಯೆಯನ್ನು ಕೈಬಿಟ್ಟು ಈ ಹಿಂದೆ ಇದ್ದ ವಲಯವಾರು ನೇಮಕಾತಿ ಪ್ರಕ್ರಿಯೆ ಆರಂಭಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರದ ಮಟ್ಟದಲ್ಲಿ ಒತ್ತಡ ತರಬೇಕು. ತುಂಬಾ ಕಠಿಣವಾಗಿರುವ ಅಧೀನ ಸಿಬ್ಬಂದಿ ಬಡ್ತಿ ಪರೀಕ್ಷೆಗಳನ್ನು ಸರಳವಾಗಿರುವಂತೆ ಮಾರ್ಪಡಿಸಲು  ಕ್ರಮತೆಗೆದುಕೊಳ್ಳಬೇಕು’ ಎಂದು ಹೇಳಿದರು.ನಬಾರ್ಡ್‌ ಕಚೇರಿಗೆ ಭೇಟಿ ಅಧಿಕಾ ರಿಗಳೊಂದಿಗೆ ಸಭೆ ನಡೆಸಿದ ಹನುಮಂತಯ್ಯ ಅವರು, ‘ನಬಾರ್ಡ್‌ ಹೆಚ್ಚಾಗಿ ಗ್ರಾಮೀಣಾಭಿವೃದ್ಧಿ ಚಟುವ ಟಿಕೆಗಳಲ್ಲಿ ತೋಡಗಿಸಿಕೊಂಡು, ಗ್ರಾಮೀಣ ಪ್ರದೇಶಗಳ ಜನಸಾ ಮಾನ್ಯರು ಮತ್ತು ಬ್ಯಾಂಕ್‌ಗಳೊಂದಿಗೆ ವ್ಯವಹರಿ ಸುವುದರಿಂದ ನಿಮ್ಮ ಎಲ್ಲ ವ್ಯವಹಾ ರದಲ್ಲಿ ಕನ್ನಡ ಇರಬೇ ಕಾದದ್ದು ಅಪೇಕ್ಷಣೀಯ’ ಎಂದು ತಿಳಿಸಿದರು.‘ಕಚೇರಿಯಲ್ಲಿ ಕನ್ನಡ ಘಟಕ ಸ್ಥಾಪಿಸಿ ಅದಕ್ಕೆ ಅಧಿಕಾರಿಗಳನ್ನು ನಿಯೋಜಿಸಿ, ಕನ್ನಡವನ್ನು ಸಬಲೀಕರಣಗೊಳಿಸುವ ಕೆಲಸ ಮಾಡಬೇಕು. ನಿಮ್ಮ ನಿತ್ಯ ವ್ಯವಹಾರದ ಪರಿಕರಗಳಲ್ಲಿ ತ್ರಿಭಾಷಾ ಸೂತ್ರ ಪಾಲಿಸುತ್ತಿಲ್ಲ. ಅದನ್ನು ಕಡ್ಡಾಯ ವಾಗಿ ಪಾಲಿಸಬೇಕು. ವೆಬ್‌ಸೈಟ್‌, ಸುತ್ತೋಲೆ, ಆದೇಶಗಳು, ಹಣ ಬಿಡು ಗಡೆ ಆದೇಶ ಸೇರಿದಂತೆ ನಿತ್ಯದ ವಹಿ ವಾಟು ಕನ್ನಡದಲ್ಲಿರುವಂತೆ ನೋಡಿಕೊ ಳ್ಳಬೇಕು’ ಎಂದು ಸೂಚಿಸಿದರು.ನಂತರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು ‘ರಾಜ್ಯದಲ್ಲಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಇಲಾಖೆಗಳು ತಮ್ಮ ನಿತ್ಯ ವ್ಯವಹಾ ರದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು. ಬಳಸದವರೊಂದಿಗೆ ವ್ಯವ ಹಾರ ಸ್ಥಗಿತಗೊಳಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುತ್ತದೆ’ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.