ಹೊರಗಡೆ ಸುಡುವ ಬಿಸಿಲಿದ್ದರೂ ಒಳಗಡೆ ತುಂಬಿತುಳುಕುತ್ತಿರುವ ಜನರ ಮೊಗದಲ್ಲಿ ಕಾತರ. ಅಲ್ಲಿ ಕೊಂಬು ಕಹಳೆಗಳಿರಲಿಲ್ಲ. ಆದರೆ ಅಭಿಮಾನಿಗಳು ತಮ್ಮ ನೆಚ್ಚಿನ ವೈದ್ಯನಿಗೆ ದನಿಯ ಮೂಲಕ ಕೊಂಬು ಕಹಳೆಯ ಸ್ವರ ಹೊರಡಿಸಿ ಅಲ್ಲಿ ಸ್ವಾಗತಿಸಿದರು.

ಅದು ಹೋಟೆಲ್ ಕೆನೊಪಿಯಲ್ಲಿ ಸಮಿ ಡೈರೆಕ್ಟ್ ಅವರ ಮೊದಲ `ಪ್ರೋಟೀನ್ ಶೇಕ್-ಲೀನ್ಗಾರ್ಡ್~ ಬಿಡುಗಡೆ ಸಮಾರಂಭ. ಅದರ ಉದ್ಘಾಟನಾ ಶೈಲಿಯೇ ಭಿನ್ನವಾಗಿತ್ತು. ವಿಜ್ಞಾನಿ ಡಾ.ಮೊಹಮ್ಮದ್ ಮಜೀದ್, ನಟಿ ಐಂದ್ರಿತಾ ರೇ ಸ್ಕ್ರೀನ್ ಮುಟ್ಟುತ್ತಿದ್ದಂತೆಯೇ ಹಿಂದಿನಿಂದ ಮಾವಿನ ಹಣ್ಣು, ವೆನಿಲ್ಲಾ ಸ್ವಾದದ ಎರಡು ದೊಡ್ಡ ಡಬ್ಬಿಗಳು ನಿಧಾನವಾಗಿ ಮುಂದೆ ಬಂದವು. ಸೇರಿದ್ದವರು ಕಣ್ಣು ಬಾಯಿ ಬಿಟ್ಟು ನೋಡುತ್ತಿದ್ದರು.

ಅಷ್ಟು ಹೊತ್ತು ಕುಳಿತಿದ್ದ ಜನರಲ್ಲಿ ಸಂಚಲನ ಮೂಡಿಸಿದ್ದು ಮಾತ್ರ ದೇಶಭಕ್ತಿಯ ಕಂಪು. ಎಲ್ಲರೂ ಎದ್ದು ನಿಂತು ಗೌರವ ತೋರಿಸಿದ ರೀತಿ ಅದ್ಭುತವಾಗಿತ್ತು.

ಪೋಷಕಾಂಶಗಳ ಕೊರತೆಯಿಂದ ಬರುವ ರೋಗಗಳನ್ನು ತಡೆಗಟ್ಟಲು ಹಾಗೂ ತಮ್ಮ ಆರೋಗ್ಯವನ್ನು ಇನ್ನಷ್ಟು ಸ್ಥಿರವಾಗಿಸಿಕೊಳ್ಳಲು ಜನರಿಗೆ ಸಹಾಯಕವಾಗಲಿದೆ ಎಂದು ನ್ಯೂಟ್ರಾಕ್ಯೂಟಿಕಲ್ಸ್ ಕಂಪೆನಿ ಪ್ರೋಟಿನ್ ಡ್ರಿಂಕ್ಸ್ನ ಮಿಶ್ರಣ ಲೀನ್ಗಾರ್ಡನ್ನು ಬಿಡುಗಡೆ ಮಾಡಿದೆ.

ಇಂದಿನ ಬಿಡುವಿಲ್ಲದ ಜೀವನದ ಜಿದ್ದಿಗೆ ಬಿದ್ದ ಮನುಷ್ಯನಿಗೆ ಸರಿಯಾಗಿ ಊಟ ಮಾಡಲು ಸಮಯವಿಲ್ಲ. ದೇಹಕ್ಕೆ ಬೇಕಾದ ಸರಿಯಾದ ಪ್ರೋಟಿನ್ ಕೊರತೆಯಿಂದ ರಕ್ತದೊತ್ತಡ, ಸಕ್ಕರೆ ಖಾಯಿಲೆಯಿಂದ ಬಳಲುತ್ತಾರೆ. ಹಾಗಾಗಿ ಇದು ಊಟದ ಬದಲಿ ಉತ್ಪನ್ನವಾಗಿದೆ.

ಇದು ತಿಂದರೆ ಎಲ್ಲಿ ದಪ್ಪಗಾಗಿ ಇಷ್ಟು ದಿನ ಕಾಪಾಡಿಕೊಂಡು ಬಂದ ತನ್ನ ಸೌಂದರ್ಯ ಎಲ್ಲಿ ಹಾಳಾಗುತ್ತದೆ ಎಂಬ ಭಯ ಬೇಡ ಇದು ದೇಹದಲ್ಲಿರುವ ಅನಗತ್ಯ ಕೊಬ್ಬಿನಂಶ ತೆಗೆದು ಹಾಕಿ ಅಗತ್ಯವಿರುವ ವಿಟಮಿನ್ಸ್ ಕೊಡುವುದು ಎಂದು ಸಿಇಓ ರಾಜೇಶ್ ಕುಮಾರ್ ಭರವಸೆ ನೀಡಿದರು.

ಸಿನಿಮಾದಲ್ಲಿ ಫಿಟ್ನೆಸ್ ಮುಖ್ಯ. ಹಾಗಾಗಿ ನಾನೂ ಈ ಉತ್ಪನ್ನವನ್ನು ಉಪಯೋಗಿಸುತ್ತೇನೆ ಎಂದು ಬಳಕುತ್ತಾ ಉಲಿದರು ಐಂದ್ರಿತಾ ರೇ. ಈಗಾಗಲೇ ಕಾಲಿಟ್ಟ ಬೇಸಿಗೆಯ ಬೇಗೆಗೆ ತಾನು ಇಷ್ಟಪಡುವುದು ತಣ್ಣಗಿನ ಹತ್ತಿಬಟ್ಟೆಗಳನ್ನು. ಅದರಲ್ಲೂ ನನಗೆ ಗುಲಾಬಿ ಬಣ್ಣವೆಂದರೆ ತುಂಬಾನೇ ಮೆಚ್ಚು ಎಂದು ಕಣ್ಣು ಮಿಟುಕಿಸಿದರು.

ಮಹಿಳಾ ದಿನಾಚರಣೆಗೆ ಎಲ್ಲರಿಗೂ ಶುಭಾಶಯ ಹೇಳಿ ಇಂದು ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ಮುಂದಿದ್ದಾಳೆ. ಪುರುಷನಷ್ಟೇ ಸಮಾನಳು. ನಮಗೆ ಕೊಟ್ಟಿರುವ ಹಕ್ಕನ್ನು ವಿವೇಚನೆಯಿಂದ ಉಪಯೋಗಿಸಿಕೊಳ್ಳಬೇಕು ಎಂಬ ಸಲಹೆ ನೀಡಿದರು.

ತಮ್ಮ ಮುಂದಿನ ಸಿನಿಮಾ `ರಜನಿಕಾಂತ~ದಲ್ಲಿ ಬ್ಯುಸಿಯಾಗಿದ್ದೇನೆ. ಇದು ನಾನು ಮತ್ತು ದುನಿಯಾ ವಿಜಿ ಎರಡನೇ ಬಾರಿ ತೆರೆಯ ಮೇಲೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವುದು ಎಂದು ನಗುತ್ತಾ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.