ಮಂಗಳವಾರ, ಜೂನ್ 22, 2021
23 °C

ಕಟ್ಟಡ ಅವಶೇಷ ಸುರಿದರೆ ಕ್ರಿಮಿನಲ್ ಮೊಕದ್ದಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ನಗರ ವ್ಯಾಪ್ತಿಯಲ್ಲಿ ಹಳೆಯ ಕಟ್ಟಡಗಳನ್ನು  ತೆರವುಗೊಳಿಸುತ್ತಿರುವ ಹಾಗೂ ಹೊಸ ಕಟ್ಟಡಗಳನ್ನು ನಿರ್ಮಿಸುತ್ತಿರುವ ಮಾಲೀಕರು ಕಟ್ಟಡಗಳನ್ನು ತೆರವುಗೊಳಿಸಿದ ನಂತರ ಅವಶೇಷಗಳನ್ನು ನಗರದ ರಸ್ತೆ ಬದಿಗಳಲ್ಲಿ, ನಗರದ ಹೊರವಲಯಗಳಲ್ಲಿ (ಗವನಹಳ್ಳಿ ರಸ್ತೆ, ಕೋಟೆಕೆರೆ, ದಂಟರಮಕ್ಕಿ ಕೆರೆ ಏರಿ, ಕಣಿವೆ ಕ್ರಾಸ್) ಹಾಗೂ ಉದ್ಯಾನಗಳಲ್ಲಿ ಸುರಿಯುವುದು ಕಂಡುಬಂದಿದೆ. ಇದರಿಂದ ನಗರದ ಸೌಂದರ್ಯ ಮತ್ತು ಸ್ವಚ್ಛತೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ. ನಗರದಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಸುರಿದರೆ ಕ್ರಮಿನಲ್ ಮೊಕದ್ದಮೆ  ದಾಖಲಿಸಿ ರೂ. 10 ಸಾವಿರ ದಂಡ ವಿಧಿಸಲಾಗುವುದು ಎಂದು ಪೌರಾಯುಕ್ತ ತಿಳಿಸಿದ್ದಾರೆ.ಕಟ್ಟಡ ನಿರ್ಮಿಸುತ್ತಿರುವ ಮಾಲೀಕರು ಕಟ್ಟಡಗಳ ಅವಶೇಷಗಳನ್ನು ಚಿಕ್ಕಮಗಳೂರು ನಗರಸಭೆಯ ಘನತ್ಯಾಜ್ಯವನ್ನು ವಿಲೇವಾರಿ ಮಾಡುತ್ತಿರುವ ಇಂದಾವರ ಗ್ರಾಮದ ನೆಲಭರ್ತಿ ಸ್ಥಳದಲ್ಲಿ(ಲ್ಯಾಂಡ್‌ಫಿಲ್ ಸೈಟ್) ಹಾಗೂ ಗೌರಿಕಾಲುವೆ ಸ.ನಂ.34ರ ಪಕ್ಕದಲ್ಲಿರುವ ಖರಾಬು ಜಾಗದಲ್ಲಿರುವ ಗುಂಡಿಗೆ ಸುರಿಯಬೇಕು. ಈ ಎರಡು ಸ್ಥಳಗಳನ್ನು ಹೊರತುಪಡಿಸಿ ನಗರವ್ಯಾಪ್ತಿಯ ಬೇರೆ ಯಾವುದೇ ಸ್ಥಳದಲ್ಲಿ ಕಟ್ಟಡ ಅವಶೇಷಗಳನ್ನು ಅಥವಾ ಇನ್ನಾವುದೇ ತ್ಯಾಜ್ಯಗಳನ್ನು ಸುರಿಯಬಾರದು.ತ್ಯಾಜ್ಯ ಸುರಿಯುವ ವಾಹನಗಳು ಕಂಡುಬಂದಲ್ಲಿ ವಾಹನ ಸಂಖ್ಯೆಯೊಂದಿಗೆ ದೂರವಾಣಿ 232222 ಗೆ ಕರೆ ಮಾಡಿ ದೂರು ದಾಖಲಿಸಿ ನಗರದ ಸ್ವಚ್ಛತೆಗೆ ಸಹಕರಿಸಬೇಕು ಎಂದು ಪೌರಾಯುಕ್ತ ಎಚ್.ಜಿ.ಪ್ರಭಾಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.