ಗುರುವಾರ , ಏಪ್ರಿಲ್ 22, 2021
28 °C

ಕನ್ನಡ ಸಂಘ ಬಹ್ರೇನ್‌ನಲ್ಲಿ ಸಂಗೀತ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡ ಸಂಘ ಬಹ್ರೇನ್‌ನಲ್ಲಿ ಸಂಗೀತ ಸ್ಪರ್ಧೆ

ಮನಾಮಾ (ಬಹ್ರೇನ್): ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ `ಕನ್ನಡ ಸಂಘ ಬಹ್ರೇನ್~, ಇತ್ತೀಚೆಗೆ ಸಂಘದ ಸಭಾಂಗಣದಲ್ಲಿ ಸಂಗೀತ ಸ್ಪರ್ಧೆ `ಹಾಡಿಗೊಂದು ಹಾಡು-2012~  ಏರ್ಪಡಿಸಿತ್ತು. ಜುಲೈನಲ್ಲಿ ಜನಿಸಿದ ಮಕ್ಕಳ ಹುಟ್ಟು ಹಬ್ಬವನ್ನೂ ಆಚರಿಸಲಾಯಿತು.

ಸಂಘದ ಅಧ್ಯಕ್ಷ ರಾಜ್ ಕುಮಾರ್ ಮಕ್ಕಳಿಗೆ ಉಡುಗೊರೆ ವಿತರಿಸಿದರೆ, ಮಾಜಿ ಅಧ್ಯಕ್ಷ ಆಸ್ಟಿನ್ ಸಂತೋಷ್, ಹೇಮಲತಾ ಮತ್ತು ಶಿವಕುಮಾರ್ ವಿಜೇತರಿಗೆ ಬಹುಮಾನ ವಿತರಿಸಿದರು.

ಮನರಂಜನಾ ಕಾರ್ಯದರ್ಶಿ ನವೀನ ಶೆಟ್ಟಿ, ಲೋಲಾಕ್ಷಿ ರಾಜಾರಾಂ, ಪೂರ್ಣಿಮಾ ಜಗದೀಶ್, ಸುಜ್ಯೋತಿ ಶೆಟ್ಟಿ, ರೇಖಾ ಶ್ರೀನಿವಾಸ್, ಉಪ ಕಾರ್ಯದರ್ಶಿ ವರುಣ್ ಹೆಗ್ಡೆ ಇದ್ದರು. ಸಂಧ್ಯಾ ಪೈ ಕಾರ್ಯಕ್ರಮ ನಿರೂಪಿಸಿದರು.

ಬಹುಮಾನಿತರು

(4ರಿಂದ 8 ವರ್ಷ)- ಪ್ರಥಮ: ಎಂ.ಪ್ರಕಾಶ್, ದ್ವಿತೀಯ: ಶ್ರೀರಾಂ ಶ್ರೀನಿವಾಸ್. ತೃತೀಯ: ಪ್ರಜ್ಞಾ ಜಗದೀಶ್ ಮತ್ತು ಶ್ರೀರಕ್ಷಾ. (8ರಿಂದ 12ವರ್ಷ) ಪ್ರಥಮ: ಶ್ರೇಯಸ್ ಹೆಗ್ಡೆ, ದ್ವಿತೀಯ: ಅಮೃತ್ ಸತೀಶ್, ತೃತೀಯ: ಸಹನಾ ಕೊಪ್ಪದ್. (12ರಿಂದ 18ವರ್ಷ): ಪ್ರಥಮ: ದಿವ್ಯಾ ದಾಮೋದರ್, ದ್ವಿತೀಯ: ಶ್ರುತಿ ಹೆಗ್ಡೆ, ತೃತೀಯ: ಸಮೀಕ್ಷಾ ಶೆಟ್ಟಿ. (18 ವರ್ಷಕ್ಕಿಂತ ಮೇಲ್ಪಟ್ಟು) ಪ್ರಥಮ: ಬಿ.ಕೆ.ಶೆಟ್ಟಿ, ದ್ವಿತೀಯ: ಶೇಖರ್ ಕೊಪ್ಪದ್, ತೃತೀಯ: ರೇಖಾ ಶ್ರೀನಿವಾಸ್.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.