ಶುಕ್ರವಾರ, ಜೂನ್ 18, 2021
27 °C

ಕರ್ನಾಟಕ ದರ್ಶನ ಪ್ರವಾಸ: 820 ವಿದ್ಯಾರ್ಥಿಗಳ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ:- ಕರ್ನಾಟಕ ದರ್ಶನ ಯೋಜನೆ­­ಯಡಿ ಮಾ.10ರಿಂದ ನಡೆ­ಯುವ ನಾಲ್ಕು ದಿನಗಳ ಪ್ರವಾಸ ಕಾರ್ಯಕ್ರಮಕ್ಕೆ ಆಯ್ಕೆಯಾಗುವ ಜಿಲ್ಲೆಯ ಪ್ರೌಢಶಾಲೆಗಳ 820 ವಿದ್ಯಾರ್ಥಿಗಳಿಗೆ ಯಾವ ಕೊರತೆಯೂ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್‌.ವಿನೋತ್ ಪ್ರಿಯಾ ಸೂಚಿಸಿದರು.ನಗರದ ಜಿಲ್ಲಾ ಪಂಚಾಯತಿ ಕಚೇರಿ­ಯಲ್ಲಿ ಶನಿವಾರ ನಡೆದ ಕರ್ನಾಟಕ ದರ್ಶನದ ಜಿಲ್ಲಾ ಸಮನ್ವಯ ಸಮಿತಿ ಪೂರ್ವಭಾವಿ ಸಭೆಯಲ್ಲಿ ಮಾತ­ನಾಡಿದ ಅವರು, ಆಯ್ಕೆ ಪಾರ­ದರ್ಶಕ­ವಾಗಿದ್ದು ಯಾವುದೇ ಆರೋಪಗಳಿಗೆ ಎಡೆ ಮಾಡಿಕೊಡಬಾರದು ಎಂದರು.ಜಿಲ್ಲೆಯ ಎಲ್ಲಾ ಸರ್ಕಾರಿ ಪ್ರೌಢ­ಶಾಲೆಗಳಿಂದ ತಲಾ ಇಬ್ಬರು ಪ್ರವಾಸ ಕೈಗೊಳ್ಳಲು ಅವಕಾಶವಿದ್ದು, ಒಟ್ಟಾರೆ­ಯಾಗಿ ಪರಿಶಿಷ್ಟ ಜಾತಿಯ 268, ಪರಿಶಿಷ್ಟ ವರ್ಗದ 102 ಹಾಗೂ ಹಿಂದುಳಿದ, ಅಲ್ಪಸಂಖ್ಯಾತರು, ಸಾಮಾನ್ಯ ವರ್ಗದ 450 ಮಕ್ಕಳನ್ನು ಉತ್ತರ ಕರ್ನಾಟಕ ಪ್ರವಾಸಕ್ಕೆ ಆಯ್ಕೆ ಮಾಡಬೇಕಿದೆ.  ಹೆಚ್ಚಿನ ವಿದ್ಯಾರ್ಥಿಗಳು ಆಸಕ್ತಿ ತೋರಿದರೆ ಬಾಲಕ–- ಬಾಲಕಿ­ಯರನ್ನು ಪ್ರತ್ಯೇಕವಾಗಿ ಲಾಟರಿ ಮೂಲಕ ಆಯ್ಕೆ ಮಾಡಬೇಕು ಎಂದರು.ತಲಾ ₨3500: ಪ್ರತಿ ವಿದ್ಯಾರ್ಥಿಗೆ ತಲಾ ₨3,500 ವಿನಿಯೋಗಿಸಬಹುದು. 200 ಪುಟಗಳ ನೋಟ್ ಪುಸ್ತಕ, ಪೆನ್, ಕಲರ್ ಪೆನ್ಸಿಲ್, ಡ್ರಾಯಿಂಗ್ ಬುಕ್, ಟೂರ್ ಕಿಟ್, ಸರ್ಕಾರದ ಲೋಗೋ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಕೋಲಾರ ಎಂದು ಮುದ್ರಿಸಿದ ಒಂದು ಟೀ ಶರ್ಟ್್, ಗುರುತಿನ ಚೀಟಿ ನೀಡ­ಲಾಗುವುದು ಎಂದರು.ವಿದ್ಯಾರ್ಥಿಗಳೊಂದಿಗೆ ಪ್ರತಿ ಬಸ್‌ ನಲ್ಲಿ ಇಬ್ಬರು ಕ್ರಿಯಾಶೀಲ ಶಿಕ್ಷಕರು ಪ್ರವಾಸ ಹೋಗಲಿದ್ದು, ಅವರಲ್ಲಿ ಒಬ್ಬರು ಶಿಕ್ಷಕಿ ಇರಬೇಕು ಎಂದರು.ಸಾರ್ವಜನಿಕ ಶಿಕ್ಷಣ ಇಲಾಖೆ ಉಪ­ನಿರ್ದೇಶಕ ಎಸ್.ವಿ.ಪದ್ಮನಾಭ, ಶಿಕ್ಷಣಾ­ಧಿಕಾರಿ ಎ.ಎನ್.ನಾಗೇಂದ್ರ ಪ್ರಸಾದ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೋಲಾ­ರದ ಬಿ.ಜಗದೀಶ್, ಮಾಲೂರಿನ ಸುಬ್ರಹ್ಮಣ್ಯಂ, ಮುಳಬಾಗಲುವಿನ ದೇವ­ರಾಜ್, ಕೆಜಿಎಫ್‌ನ ಕೃಷ್ಣಮೂರ್ತಿ, ಬಂಗಾರಪೇಟೆ ಬಿಆರ್‌ಸಿ ಯುವ-ರಾಜ್, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪ್ರಾಂಶುಪಾಲ ಆಂಜಿನಪ್ಪ, ಉಪ ಸಮನ್ವಯಾಧಿಕಾರಿ ಸಿದ್ದಗಂಗಯ್ಯ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿ­ಯಾನದ ಅಧಿಕಾರಿ ಮಾಧವರೆಡ್ಡಿ, ವಿಷಯ ಪರೀಕ್ಷಕ ವೆಂಕಟಸ್ವಾಮಿ ಮತ್ತಿತರರು ಪೂರ್ವಭಾವಿ ಸಭೆಯಲ್ಲಿ ಉಪ­ಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.