ಬುಧವಾರ, ಜೂನ್ 23, 2021
24 °C

ಕಲ್ಲಡ್ಕ ಗಲಭೆ: ಮೂವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಟ್ವಾಳ: ತಾಲ್ಲೂಕಿನ ಕಲ್ಲಡ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಿ ಶನಿವಾರ ಸಂಜೆ ಕಾಂಗ್ರೆಸ್ ಸಾಮರಸ್ಯ ಸಮಾ­ವೇಶದ ವೇಳೆ ಉಂಟಾದ ಗುಂಪು ಘರ್ಷಣೆ ಮತ್ತು ಕಲ್ಲು ತೂರಾಟಕ್ಕೆ ಸಂಬಂಧಿ­ಸಿ­ದಂತೆ ಮೂವರು ಆರೋಪಿ­ಗಳನ್ನು ಪೊಲೀಸರು ಬಂಧಿಸಿದ್ದಾರೆ.ಇವರನ್ನು ಭಾನುವಾರ  ಹಿರಿಯ ಸಿವಿಲ್ ನ್ಯಾಯಾಧೀಶರ ಮನೆಗೆ ಹಾಜರು­ಪಡಿಸಲಾಯಿತು. ಬಂಧಿತರನ್ನು ಕಲ್ಲಡ್ಕ ಸಮೀಪದ ಅಮ್ಟೂರು

ನಿವಾಸಿ ಪೂವಪ್ಪ ಟೈಲರ್, ನೆಟ್ಲ ನಿವಾಸಿಗಳಾದ ಗುರುವಪ್ಪ ಮತ್ತು ಕೇಶವ ಎಂದು ಗುರುತಿಸಲಾಗಿದೆ. ಇವರ ವಿರುದ್ಧ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಮತ್ತು ನಗರ ಠಾಣಾಧಿಕಾರಿ ಕೊಲೆಗೆ ಯತ್ನಿ­­ಸಿ­ದ್ದಾರೆ ಎಂದು ಆರೋಪಿಸಿ ಪ್ರಕ­ರಣ ದಾಖ­ಲಿಸ­ಲಾಗಿದೆ.ಬಂಧಿತರಿಗೆ 15 ದಿನ ನ್ಯಾಯಾಂಗ ಬಂಧನ ವಿಧಿಸ­ಲಾಗಿದೆ.ನಗರ ಠಾಣಾಧಿಕಾರಿ ಸಂಜಯ ಕುಮಾರ್ ಕಲ್ಲೂರ ಮಾತ್ರವಲ್ಲದೆ ಗಾಯಾಳು ಪೊಲೀಸ್ ಸಿಬ್ಬಂದಿ ಮುರು­ಗೇಶ, ಲೋಕೇಶ ಮತ್ತು ರಮೇಶ

ಮಂಗ­ಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚೇತರಿಸಿ­ಕೊಂಡಿದ್ದಾರೆ.ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ. ಆದರೂ, 144 ಸೆಕ್ಷನ್‌ನಡಿ ಶನಿವಾರ ಜಾರಿಗೊಳಿಸಿದ್ದ ಮೂರು ದಿನಗಳ ನಿಷೇಧಾಜ್ಞೆ ಜಾರಿಯಲ್ಲಿ

ಇರು­­­­ತ್ತದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.