ಬುಧವಾರ, ಜೂನ್ 23, 2021
28 °C

ಕಲ್ಲಿದ್ದಲು ಹಗರಣ: ಇಂದು ವಸ್ತುಸ್ಥಿತಿ ವರದಿ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕಲ್ಲಿದ್ದಲು ಹಗರಣದ ತನಿ­ಖೆಯ ವಸ್ತುಸ್ಥಿತಿ ವರದಿಯನ್ನು ಸಿಬಿಐ  ಸುಪ್ರೀಂ­ಕೋರ್ಟ್‌ಗೆ ಸೋಮವಾರ ಸಲ್ಲಿಸಲಿದೆ. 2012ರಲ್ಲಿ ಸಿಬಿಐ ದಾಖಲಿಸಿದ್ದ ಪ್ರಕರಣವೊಂದರ ಆರೋಪ­ಪಟ್ಟಿ­ಯನ್ನೂ ಇದೇ ವೇಳೆ ಸಲ್ಲಿಸಲಿದೆ. ಫೆ.11 ರಂದು ನಡೆದಿದ್ದ ವಿಚಾರಣೆಯಲ್ಲಿ ಕಲ್ಲಿದ್ದಲು ಹಗರಣದ ತನಿಖೆಯಲ್ಲಾದ ಪ್ರಗತಿಯ ಕುರಿತು ವಸ್ತುಸ್ಥಿತಿ ವರದಿ ಹಾಗೂ  ಆರು ಪ್ರಕರಣಗಳ ಆರೋಪ ಪಟ್ಟಿಯನ್ನೂ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿತ್ತು. ಜಿಂದಾಲ್‌ ಸ್ಟೀಲ್‌ ಮತ್ತು ಪವರ್, ಹಿಂಡಾಲ್ಕೊ, ಯಾವತ್ಮಲ್‌ ಎನರ್ಜಿ ಸೇರಿದಂತೆ 16 ಕಂಪೆನಿಗಳ ವಿರುದ್ಧ ಸಿಬಿಐ, ಎಫ್‌ಐಆರ್‌ ದಾಖಲಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.