ರಾಯಚೂರು: ತಮ್ಮ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನರರೋಗ ತಜ್ಞ ಶಸ್ತ್ರಚಿಕಿತ್ಸಕ ಡಾ. ಬಾಲಾಜಿ ಶ್ರೀನಿವಾಸ ಅವರ ಮೇಲೆ ಇಪ್ಪತ್ತು ಜನರ ಗುಂಪು ಮಂಗಳವಾರ ಬೆಳಿಗ್ಗೆ ಹಲ್ಲೆ ನಡೆಸಿದ್ದು, ಸಂಬಂಧಪಟ್ಟವರ ವಿರುದ್ಧ ಕ್ರಮಕ್ಕೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಇಲ್ಲಿನ ಓಪೆಕ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ವಿಂಗ್ ಕಮಾಂಡರ್ ಎಂ.ಕೆ ಬೋಸ್ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಓಪೆಕ್ ಆಸ್ಪತ್ರೆಯನ್ನು ಪ್ರತಿಷ್ಠಿತ ಅಪೊಲೋ ಸಂಸ್ಥೆ ನಿರ್ವಹಿಸುತ್ತಿದೆ. ಆದರೆ, ಆಸ್ಪತ್ರೆಯ ವೈದ್ಯರ ಮೇಲೆ ಸದಾ ಈ ರೀತಿಯ ಹಲ್ಲೆ ಪ್ರಕರಣ ಮುಂದುವರಿದಿವೆ. ಈ ಬಗ್ಗೆ ಅನೇಕ ಬಾರಿ ಪೊಲೀಸ್ ಅಧಿಕಾರಿಗಳು, ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಆದರೆ ಘಟನೆಗಳು ಮರುಕಳಿಸುತ್ತಲೇ ಇವೆ ಎಂದು ವಿಷಾದಿಸಿದರು.

ಯಾದಗಿರಿ ಜಿಲ್ಲೆ ಕಡೇಚೂರು ಗ್ರಾಮದ ಖಾಜಿ ಅಬ್ದುಲ್ ಅಲೀಮ್ ಎಂಬ 55 ವರ್ಷದ ವ್ಯಕ್ತಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ. ಮಾರ್ಚ್ 30ರಂದು ತುರ್ತು ಚಿಕಿತ್ಸಾ ವಿಭಾಗದಲ್ಲಿ ನರರೋಗ ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ.ಬಾಲಾಜಿ ಶ್ರೀನಿವಾಸ ಅವರು ಚಿಕಿತ್ಸೆ ನೀಡಿದ್ದರು. ಶಸ್ತ್ರ ಚಿಕಿತ್ಸೆಗೂ ಮುನ್ನ ರೋಗಿಯ ಉಪಚಾರಕರಿಗೆ ಶಸ್ತ್ರಚಿಕಿತ್ಸೆಯ ಆಗು ಹೋಗುಗಳ ಬಗ್ಗೆ, ಸಮಸ್ಯೆಯ ಬಗ್ಗೆ ಡಾ ಬಾಲಾಜಿ ಹೇಳಿದ್ದಾರೆ. ಇದಕ್ಕೆ ಉಪಚಾರಕರು ಒಪ್ಪಿದ ಬಳಿಕವೇ ವೈದ್ಯರು ಶಸ್ತ್ರ ಚಿಕಿತ್ಸೆ ನೆರವೇರಿಸಿದ್ದಾರೆ. ಶಸ್ತ್ರ ಚಿಕಿತ್ಸೆಯ ಬಳಿಕ ತೀವ್ರ ನಿಗಾ ಘಟಕದಲ್ಲಿ ಏಪ್ರಿಲ್ 4ರಂದು ರಾತ್ರಿ ಅಸುನೀಗಿದ್ದರು ಎಂದು ಹೇಳಿದರು.

ಆಸ್ಪತ್ರೆಯ ಬಿಲ್ ಮೊತ್ತ 60,120 ರೂಗಳಾಗಿದ್ದು, ಇದರಲ್ಲಿ ಕೇವಲ 15 ಸಾವಿರ ರೂಗಳನ್ನು ಶಸ್ತ್ರಚಿಕಿತ್ಸೆಗೂ ಮುನ್ನ ತುಂಬಲಾಗಿತ್ತು. ಅಲ್ಲದೇ ಬಿಲ್ ಮೊತ್ತದಲ್ಲಿ ರಿಯಾಯಿತಿಗೆ ಕೋರಿದ್ದರು. ಶಾಸಕ ಸಯ್ಯದ್ ಯಾಸಿನ್ ಅವರೂ ರಿಯಾಯಿತಿ ಕೊಡಲು ದೂರವಾಣಿ ಮೂಲಕ ಹೇಳಿದ್ದರು. ಶಾಸಕರ ಮನವಿ ಮತ್ತು ಮಾನವೀಯತೆ ಆಧಾರದ ಮೇಲೆ 15 ಸಾವಿರ ರಿಯಾಯಿತಿ ನೀಡಲಾಗಿತ್ತು ಎಂದು ವಿವರಿಸಿದರು.

ಆದರೆ, ಏಪ್ರಿಲ್ 5ರಂದು ಬೆಳಿಗ್ಗೆ 20 ಜನರ ಗುಂಪು ಶಸ್ತ್ರ ಚಿಕಿತ್ಸಾ ಕೊಠಡಿಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಡಾ.ಬಾಲಾಜಿ ಶ್ರೀನಿವಾಸ್ ಮತ್ತು ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಮನವರಿಕೆ ಮಾಡಿಕೊಡಲು ಯತ್ನಿಸಿದರೂ ಅವರಿಗೆ ನಿಂದಿಸಿದ್ದಾರೆ. ಅಸಭ್ಯ ರೀತಿ ವರ್ತಿಸಿ ಅಸ್ಪತ್ರೆಯ ಆಸ್ತಿ ಹಾಳು ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಡಿಎಸ್ಪಿ ಶ್ರೀಧರ ಅವರ ಗಮನಕ್ಕೆ ತಂದ ಬಳಿಕ ಗ್ರಾಮೀಣ ಠಾಣೆ ಪಿಎಸ್ಐ, ಪೊಲೀಸರು ಬಂದು ಪರಿಶೀಲನೆ ನಡೆಸಿ ಕರೆದೊಯ್ದರು ಎಂದು ಘಟನೆ ಬಗ್ಗೆ ವಿವರಣೆ ನೀಡಿದರು.

ಈ ಭಾಗದಲ್ಲಿ ಸುಸಜ್ಜಿತ ಸುಪರ್ ಸ್ಪೆಷಾಲಿಟಿ ಆಸ್ಪತ್ರೆ ಇದೊಂದೇ. ರೋಗಿಗಳಿಗೆ ಸಾಧ್ಯವಾದ ಎಲ್ಲ ರೀತಿಯ ಚಿಕಿತ್ಸೆ ನೀಡಿ ಗುಣಪಡಿಸಲು ಆಸ್ಪತ್ರೆಯ ತಜ್ಞ ವೈದ್ಯಕೀಯ ಸಿಬ್ಬಂದಿ ಶ್ರಮವಹಿಸುತ್ತ ಬಂದಿದ್ದಾರೆ. ಆದರೆ, ಸಾರ್ವಜನಿಕರು ವೈದ್ಯರ ಮೇಲೆ ಹಲ್ಲೆ ನಡೆಸಲು ಮುಂದಾಗುವ ಘಟನಾವಳಿಗಳಿಂದ ಆಸ್ಪತ್ರೆ ವೈದ್ಯರು, ಸಿಬ್ಬಂದಿ ವರ್ಗಕ್ಕೆ ಆಘಾತ ತಂದಿದೆ. ಇದರಿಂದ ಅನೇಕ ತಜ್ಞ ವೈದ್ಯರು ಈ ಆಸ್ಪತ್ರೆಗೆ ಬಂದು ಕರ್ತವ್ಯ ನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಿದರು.

ಆಸ್ಪತ್ರೆ ಸೂಪರ್ ಸ್ಪೆಷಾಲಿಟಿ ಆದರೂ ಈಗಿನ ಸಂದರ್ಭದಲ್ಲಿ ತಜ್ಞ ವೈದ್ಯರನ್ನು ಕರೆ ತರುವುದು ಕಷ್ಟಕರ ಸಂಗತಿ. ಅದರಲ್ಲೂ ಈ ಊರಿಗೆ ತಜ್ಞ ವೈದ್ಯರು ಆಗಮಿಸಲು ಇಷ್ಟಪಡುವುದಿಲ್ಲ. ಸಾಕಷ್ಟು ಮನವರಿಕೆ ಮಾಡಿಕೊಟ್ಟ ಬಳಿಕ ಆಗಮಿಸುತ್ತಾರೆ ಈ ಸ್ಥಿತಿಯಲ್ಲಿ ಅಂಥ ವೈದ್ಯರ ಮೇಲೆ ಜನತೆ ಗುಂಪಾಗಿ ಬಂದು ಹಲ್ಲೆ ನಡೆಸುವಂಥ ಕೃತ್ಯಕ್ಕಿಳಿಯುವುದು ಆಸ್ಪತ್ರೆ ಸಮೂಹ ಖಂಡಿಸುತ್ತದೆ ಎಂದು ತಿಳಿಸಿದರು.ಆಸ್ಪತ್ರೆಯ ಬಿಗಿ ಭದ್ರತೆಗೆ ಕನಿಷ್ಠ ಒಂದಿಬ್ಬರು ಪೊಲೀಸ್ರನ್ನು ಪಹರೆಗೆ ಹಾಕಲು ಕೋರಲಾಗಿತ್ತು. ಈ ರೀತಿ ಪೊಲೀಸರು ಸಂಚರಿಸುತ್ತಿದ್ದರೆ ವೈದ್ಯರ ಮೇಲೆ ಹಲ್ಲೆ ನಡೆಸುವ ಘಟನೆ ತಡೆಯಬಹುದು. ಆದರೆ ಪೊಲೀಸ್ ಭದ್ರತೆ ಒದಗಿಸಿಲ್ಲ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.