ಶನಿವಾರ, ಜನವರಿ 18, 2020
19 °C

ಕಾವ್ಯ ಅನುಕರಣೆ ಸಲ್ಲ: ಗೋಗೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಹೃದಯ, ಮನಸ್ಸು ತಟ್ಟುವ ವಿಷಯಗಳ ಮೇಲೆ ಸಾಮಾಜಿಕ ಕಳಕಳಿಯ ಚಿಂತನೆಯೊಂದಿಗೆ ಕಾವ್ಯ ಹೊರ ಹೊಮ್ಮಬೇಕು ಎಂದು ಹುಬ್ಬಳ್ಳಿಯ ಹಾಸ್ಯ ಸಾಹಿತಿ ಎಂ.ಡಿ. ಗೋಗೇರಿ ಹೇಳಿದರು.ನಗರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಆಶ್ರಯದಲ್ಲಿ ಆಯೋಜಿಸಲಾಗಿದ್ದ ಶನಿವಾರ ಸಾಹಿತ್ಯ ಸಂಜೆಯ 50 ರ ಸಂಭ್ರಮದಲ್ಲಿ ಮಾತನಾಡಿ, ಜನಪದದ ತಾಯಿಬೇರು ಕಾವ್ಯ. ಮನಸ್ಸಿಗೆ ಹಿತ ಬರುವವರೆಗೆ ಕಾವ್ಯ ಬರೆಯಬೇಕು. ಕಾವ್ಯಗಳನ್ನು ಮತ್ತೆ ಮತ್ತೆ ಓದಬೇಕು. ಓದಿದ ನಂತರ ಅನುಭವಿಸಬೇಕು. ಕಾವ್ಯಗಳಲ್ಲಿ ಸ್ವಂತಿಕೆ ಇರಬೇಕು ಹೊರತು ಅನುಕರುಣೆ ಸಲ್ಲದು ಎಂದು ಅಭಿಪ್ರಾಯಪಟ್ಟರು.ಪ್ರತಿಭೆಗೆ ಕಾವ್ಯ ಬೆಳೆಯಬೇಕಾದರೆ ವಿದ್ಯೆ, ಶಬ್ಧ, ಸಂಪತ್ತು, ಪ್ರಾಸಗಳ ತಿಳಿವಳಿಕೆ ಅಗತ್ಯ. ಶಬ್ದ ಸಂಪತ್ತು ಬೇಳೆಯಬೇಕಾದರೆ ಹಳೆಗನ್ನಡ, ನಡುಗನ್ನಡ, ನವೋದಯ, ನವ್ಯ, ಪ್ರಗತಿಶೀಲ, ದಲಿತ- ಬಂಡಾಯ ಸಾಹಿತ್ಯ ಓದಬೇಕು. ಹಿರಿಯ ಸಾಹಿತಿಗಳ ಓಡನಾಟ, ಸಾಹಿತ್ಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಪ್ರೇರಣೆ ಪಡೆಯಬೇಕು ಎಂದು ನುಡಿದರು.ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಜೇಂದ್ರ ಪ್ರಸಾದ್‌,  ವ್ಯಕ್ತಿಗಳಲ್ಲಿ ಅಭಿವ್ಯಕ್ತಿ, ಸೃಜನಶೀಲತೆ ನಶಿಸುತ್ತಿದೆ. ಇವುಗಳನ್ನು ಬೆಳೆಸುವ ಕಾರ್ಯ ಎಲ್ಲಡೆ ನಡೆಯಬೇಕು ಎಂದರು.ಕಸಾಪ ಅಧ್ಯಕ್ಷ ಡಾ. ಶಿವಪ್ಪ ಕುರಿ ಮಾತನಾಡಿ,  ಒಂದೂವರೆ ವರ್ಷಗಳಿಂದ ಶನಿವಾರ ಸಾಹಿತ್ಯ ಸಂಜೆ, ಪಂಚಾಯಿತಿ ಸಾಂಸ್ಕೃತಿಕ ಸೌರಭ ಆಯೋಜನೆ ಮಾಡಲಾಗಿದೆ ಎಂದರು.ಕವಿಗೋಷ್ಠಿಯಲ್ಲಿ ಡಾ. ಶೇಖರ ಲದ್ವಾ, ಪ್ರೊ. ದೊಡ್ಡಯ್ಯ ಅರವಟಗಿ­ಮಠ,  ಸಿ.ಜಿ.ಬಿ. ಹಿರೇಮಠ, ಶಿವಶಂಕರ ಆರಟ್ಟಿ, ಲಾಡಮಾ ನದಾಫ್‌, ಪ್ರೊ. ಎಸ್.ವಿ. ಸಜ್ಜನಶೆಟ್ಟರ, ವೈ.ವೈ. ಅಂಬಿ­ಗೇರ, ಎಂ.ಡಿ. ನದಾಫ್‌, ಚೇತನ ಸೊಲಗಿ ಹಾಗೂ ಮಲ್ಲಿಕಾರ್ಜುನ ಪೂಜಾರ ಪಾಲ್ಗೊಂಡಿದ್ದರು.ವಿವೇಕಾನಂದಗೌಡ ಪಾಟೀಲ ಉಪನ್ಯಾಸ ನೀಡಿದರು, ಮಂಜುಳಾ ವೆಂಕಟೇಶಯ್ಯ ಕಾವ್ಯವಾಚನ ಮಾಡಿ­ದರು. ನಗರಸಭೆ ಸದಸ್ಯ ಅನಿಲ ಶಿಂಗಟಾಲಕೇರಿ, ಪಿ.ಎಲ್. ಡಿ ಬ್ಯಾಂಕ್‌ ನಿರ್ದೇಶಕ ಆರ್.ಡಿ. ಹೂವಣ್ಣವರ ಮಾತನಾಡಿದರು. ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಡಾ. ಶಿವರಾಜ ಗುರಿಕಾರ, ಎಸ್.ಬಿ. ಹಿರೇಮಠ, ಪಿ.ಸಿ. ಕಲಹಾಳ, ಪ್ರೊ. ಕಿಶೋರಬಾಬು ನಾಗರಕಟ್ಟಿ ಹಾಜರಿದ್ದರು.ಪ್ರೊ. ಕೆ.ಎಚ್. ಬೇಲೂರ, ಪ್ರೊ. ಆರ್.ಎಲ್‌. ಪೊಲೀಸ್‌ ಪಾಟೀಲ, ಅಂದಾನೆಪ್ಪ ವಿಭೂತಿ, ಆರ್.ಎನ್. ಕುಲಕರ್ಣಿ, ಡಿ.ಎಸ್. ತಳವಾರ, ಪ್ರೊ. ಜಿ.ಎಂ. ಹಕಾರಿ, ಡಾ. ರಾಜಶೇಖರ ದಾನ­ರೆಡ್ಡಿ, ಡಾ. ಶರಣಬಸವ ವೆಂಕಟಾ­ಪೂರ, ಡಾ. ಎಸ್.ಎಫ್. ಜಕಬಾಳ, ಶಿವಾನಂದ ಗಿಡ್ನಂದಿ, ಕವಿತಾ ದಂಡಿನ, ಪ್ರಾಚಾರ್ಯ ಬಿ.ಜಿ. ಹಿರೇಮಠ ಪ್ರೊ. ಬಿ.ಎನ್. ತಾರಾ ಅ.ದ. ಕಟ್ಟಿಮನಿ, ಪ್ರಾ.ಎಂ.ಸಿ. ಕಟ್ಟಿಮನಿ ಇದ್ದರು.ನಾಗಪ್ಪ ಶಿರೋಳ ಅವರ ಸಂಗೀತ ತಂಡ ಹಾಗೂ ಯಲ್ಲಪ್ಪ ಡಂಕೆಣ್ಣವರ ಅವರಿಂದ ಸುಡಗಾಡ ಸಿದ್ಧರ ಆಟ ಜನರ ಮನಸ್ಸನ್ನು ಸೂರೆಗೊಳಿಸಿತು. ಹೇಮಾ ನಾಯಕ ಪ್ರಾರ್ಥಿಸಿದರು.   ಮಲ್ಲೇಶ ಡಿ.ಎಚ್. ಸ್ವಾಗತಿಸಿದರು. ಶರಣು ಗೋಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಬಾಹುಬಲಿ ಜೈನರ ನಿರೂಪಿಸಿದರು. ಡಾ. ಸಂಗಮೇಶ ತಮ್ಮನಗೌಡ್ರ ವಂದಿಸಿದರು.

ಪ್ರತಿಕ್ರಿಯಿಸಿ (+)