ಭಾನುವಾರ, ಜನವರಿ 26, 2020
28 °C
ಭಾರತ–ಪಾಕ್‌ ಬಿಕ್ಕಟ್ಟಿಗೆ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಲಯ ತೀರ್ಪು

ಕಿಶನ್‌ಗಂಗಾ ಅಣೆಕಟ್ಟೆಗೆ ಹಸಿರು ನಿಶಾನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್‌ (ಪಿಟಿಐ): ಭಾರತವು ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಮಿ­ಸುತ್ತಿ­ರುವ ಕಿಶನ್‌ಗಂಗಾ ಅಣೆಕಟ್ಟೆ ಕಾಮ­ಗಾರಿ ಮುಂದುವ­ರಿಸಲು ಅಂತರ­­ರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾ­ಲಯ ಭಾರತಕ್ಕೆ ಸಮ್ಮತಿ ನೀಡಿ ಅಂತಿಮ ಆದೇಶ ಹೊರಡಿಸಿದೆ.ಈ ಅಣೆಕಟ್ಟೆ ನಿರ್ಮಾಣಕ್ಕೆ ಪಾಕಿ­ಸ್ತಾನ ತಕಾರರು ಸಲ್ಲಿಸಿತ್ತು.ಮಧ್ಯಸ್ಥಿಕೆ ನ್ಯಾಯಾಲಯ ಫೆಬ್ರುವರಿ­ಯಲ್ಲಿ ಹೊರಡಿಸಿದ ಆದೇಶಕ್ಕೆ ಸಂಬಂಧಿ­ಸಿದಂತೆ ಭಾರತ ಸ್ಪಷ್ಟೀಕರಣ ಕೇಳಿದ ನಂತರ ಶುಕ್ರವಾರ ರಾತ್ರಿ ನ್ಯಾಯಾಲಯ ಆದೇಶ ಹೊರಡಿಸಿದೆ.ಪಶ್ಚಿಮದ ನದಿಗಳಿಂದ ಜಲ ವಿದ್ಯುತ್‌ ಉತ್ಪಾದನೆಗೆ ನೀರು ಪಡೆ­ಯುವ ಹಕ್ಕು ಇದೆ ಎನ್ನುವ ಭಾರತದ ವಾದ­­ವನ್ನು ಫೆಬ್ರುವರಿಯಲ್ಲಿ ಹೊರ­ಡಿಸಿದ್ದ ಮಧ್ಯಂತರ ಆದೇಶದಲ್ಲಿ ನ್ಯಾಯಾ­­­­ಲಯ ಎತ್ತಿ ಹಿಡಿದಿತ್ತು.1960ರ ‘ಇಂಡಸ್‌’ ಜಲ ಒಪ್ಪಂದದ ಪ್ರಕಾರ ಪಶ್ಚಿಮದ ನದಿಗಳ ನೀರು ಪಾಕಿ­ಸ್ತಾನಕ್ಕೆ ಮೀಸಲಿವೆ.‘ಪರಿಸರ ನಿರ್ವಹಣೆಗೆ ಸಂಬಂಧಿ­ಸಿ­ದಂತೆ ಎಲ್ಲ ಸಂದರ್ಭ­ದಲ್ಲಿ ಕಿಶನ್‌­ಗಂಗಾ ನದಿಯಲ್ಲಿ ಒಂಬತ್ತು ಕ್ಯೂಬಿಕ್‌ ಮೀಟರ್‌ ನೀರಿನ ನೈಸರ್ಗಿಕ ಹರಿವು ಇರಬೇಕು’ ಎಂದು ನ್ಯಾಯಾಲಯ ಆದೇಶ­ದಲ್ಲಿ ತಿಳಿಸಿರುವುದಾಗಿ ಭಾರತೀಯ ರಾಯ­ಭಾರ ಕಚೇರಿಯ ಪ್ರಕಟಣೆ ಹೇಳಿದೆ.ಕಿಶನ್‌ಗಂಗಾ ಜಲವಿದ್ಯುತ್‌ ಯೋಜನೆಗೆ ಪರ್ಯಾಯ ತಂತ್ರಜ್ಞಾನ­ವನ್ನು ಅಳವ­ಡಿಸಿ­ಕೊಳ್ಳು­ವುದರ ಜೊತೆಗೆ ಪಶ್ಚಿಮ ದಿಕ್ಕಿಗೆ ಹರಿಯುವ ಎಲ್ಲ ನದಿ­ಗಳಿಗೆ ಇದೇ ತಂತ್ರಜ್ಞಾನ ಅಳವಡಿ­ಸಿ­ಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.‘ಅಂತರರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾ­­ಲಯದಲ್ಲಿ ಪಾಕಿ­ಸ್ತಾನ ದೊಡ್ಡ ವಿಜಯ ಸಾಧಿಸಿದೆ. ನೀರಿನ ಹಂಚಿಕೆಗೆ ಸಂಬಂಧಿಸಿ­ದಂತೆ ಪಾಕಿಸ್ತಾನ ಕಿಶನ್‌­ಗಂಗಾ ನದಿ ತೀರದ ದೇಶ ಎಂದು ನ್ಯಾಯಾಲಯ ಪರಿಗಣಿ­ಸಿದೆ. ಝೇಲಮ್‌ ಮತ್ತು ಚಿನಾಬ್‌ ನದಿ ನೀರಿನ ಮೇಲೂ ಪಾಕ್‌ ತನ್ನ ಹಕ್ಕು ಸಾಧಿಸಿದೆ’ ಎಂದು ಪಾಕಿ­ಸ್ತಾನದ ಜಲಸಂಪನ್ಮೂಲ ಸಚಿವ ಖ್ವಾಜಾ ಆಸೀಫ್‌ ಹೇಳಿದ್ದಾರೆ.‘ಈ ಆದೇಶ ನೀರಿನ ಹಕ್ಕಿಗೆ ಸಂಬಂಧಿಸಿ­ದಂತೆ ಭವಿಷ್ಯದಲ್ಲೂ ರಕ್ಷಣೆಗೆ ಸಹಕಾರಿ­ಯಾಗಲಿದೆ’ ಎಂದು ಅವರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)