ಕುಡಿಯುವ ನೀರು ಪೂರೈಸಲು ಆಗ್ರಹ

ಶನಿವಾರ, ಮೇ 25, 2019
27 °C

ಕುಡಿಯುವ ನೀರು ಪೂರೈಸಲು ಆಗ್ರಹ

Published:
Updated:

ಮಾಗಡಿ: ತಾಲ್ಲೂಕಿನಲ್ಲಿ ಕಳೆದ 12 ದಿನಗಳಿಂದಲೂ ಸಹ  ಅನಿಯಮಿತ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ವಿದ್ಯುತ್ ಇಲ್ಲದೆ ಕುಡಿಯುವ ನೀರಿಗೆ ಜನತೆ ಪರದಾಡುತ್ತಿದ್ದೇವೆ ಎಂದು ಬಿಳಗುಂಬ ಗ್ರಾಮಸ್ಥರು ತಿಳಿಸಿದ್ದಾರೆ.  ವಿದ್ಯುತ್ ಸಮಸ್ಯೆಯ ಬಗ್ಗೆ ಜನತೆ ಕೇಳಿದರೆ ಗ್ರಾಮ ಪಂಚಾಯಿತಿ ಹಾಗೂ ಬೆಸ್ಕಾಂ ಅಧಿಕಾರಿಗಳನ್ನು ಸ್ಪಂದಿಸುತ್ತಿಲ್ಲ ಎಂದು ಗ್ರಾಮದ ಜನತೆ ದೂರಿದ್ದಾರೆ.ರಾತ್ರಿಯ ವೇಳೆ ಅರ್ಧ ಗಂಟೆಗೊಮ್ಮೆ ವಿದ್ಯುತ್ ಕಣ್ಣಾಮುಚ್ಚಾಲೆ ಹೇಳ ತೀರದು. ಸರ್ಕಾರ ಈ ಸಮಸ್ಯೆ ಬಗೆಹರಿಸಿ ಕುಡಿಯುವ ನೀರಿಗೆ ಅನುಕೂಲ ಮಾಡಿಕೊಡುವಂತೆ ಬಿಳಗುಂಬ ಮತ್ತಿತರೆ ಗ್ರಾಮಸ್ಥರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry