ಬಾಗಲಕೋಟೆ: ರಾಜ್ಯದಲ್ಲಿ ಗುಟ್ಕಾ ಮಾರಾಟ ನಿಷೇಧದ ಜಾರಿಯಾದ ಬಳಿಕ ಗುಟ್ಕಾ ಕಂಪೆನಿಗಳು ತಮ್ಮ ವ್ಯಾಪಾರ ವೃದ್ಧಿಗಾಗಿ ಕಳ್ಳ ಮಾರ್ಗ ಕಂಡುಕೊಂಡಿವೆ.

ಗುಟ್ಕಾ ಪ್ರಿಯ ಗ್ರಾಹಕರ ಬಾಯಿ ಚಪಲ ನೀಗಿಸಲು ಪ್ರಮುಖ ಗುಟ್ಕಾ ಕಂಪೆನಿಗಳು ವಿಶೇಷವಾದ ಪಾನ್ ಮಸಾಲ ಪ್ಯಾಕೆಟ್ ಮತ್ತು ತಂಬಾಕಿನ ಪ್ರತ್ಯೇಕ ಪ್ಯಾಕೆಟ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ.

ಈ ಎರಡೂ ಪ್ಯಾಕೆಟ್ಗಳನ್ನು ಕೂಡಿಸಿದರೆ(ಮಿಶ್ರ) ಗುಟ್ಕಾ ಆಗುತ್ತದೆ!

ಹೌದು, ಸರ್ಕಾರ ಚಾಪೆ ಕೆಳಗೆ ನುಸುಳಿದರೆ ಗುಟ್ಕಾ ಕಂಪೆನಿಗಳು ರಂಗೋಲಿ ಕೆಳಗೆ ನುಸುಳುವ ಜಾಣ್ಮೆ ಇದೀಗ ಬಟಾಬಯಲಾಗಿದೆ.

ಬಾಗಲಕೋಟೆ ನಗರ ಮತ್ತು ಜಿಲ್ಲೆಯಾದ್ಯಂತ ಬುಧವಾರದಿಂದ ಎಲ್ಲ ಅಂಗಡಿಗಳಲ್ಲಿ, ಪಾನ್ಶಾಪ್, ಗೂಡಂಗಡಿಗಳಲ್ಲಿ ಈ ಹೊಸ ಪಾನ್ಮಸಾಲ ಮತ್ತು ತಂಬಾಕು ಪ್ಯಾಕೆಟ್ಗಳು ರಾರಾಜಿಸುತ್ತಿವೆ.

`ಸುಪ್ರೀಂಕೋರ್ಟ್ ಆದೇಶದನ್ವಯ ರಾಜ್ಯ ಸರ್ಕಾರ ಗುಟ್ಕಾ ನಿಷೇಧವನ್ನು ಜೂನ್ 1ರಿಂದ ಜಾರಿಗೊಳಿಸುವ ಮುನ್ನ ಮೇ 30ರಂದು ಗುಟ್ಕಾ ಕಂಪೆನಿಗಳಿಗೆ ಪಾನ್ ಮಸಾಲ ಪ್ಯಾಕೆಟ್ ಮಾರಾಟಕ್ಕೆ ಅನುಮತಿ ನೀಡಿದೆ' ಎಂದು `ಸ್ಟಾರ್' ಗುಟ್ಕಾ ತಯಾರಿಕಾ ಕಂಪೆನಿ ಹೇಳಿಕೊಂಡಿದೆ.

`ತಂಬಾಕು ರಹಿತ ಮತ್ತು ನಿಕೊಟಿನ್ ರಹಿತ ಪಾನ್ ಮಸಾಲ ಮಾರಾಟಕ್ಕೆ ಮತ್ತು ಸಂಗ್ರಹಕ್ಕೆ ರಾಜ್ಯದಲ್ಲಿ ಅವಕಾಶ ಕಲ್ಪಿಸಿದೆ' ಎಂದು `ಸ್ಟಾರ್' ಗುಟ್ಕಾ ತಯಾರಿಕಾ ಕಂಪೆನಿಯು ಪ್ರಕಟಣೆಯಲ್ಲಿ ಹೇಳಿಕೊಂಡಿದ್ದು, ತನ್ನ ಎಲ್ಲ ವ್ಯಾಪಾರಸ್ಥರ ಕೈಗೆ ರಾಜ್ಯ ಸರ್ಕಾರದ ಆದೇಶ ಪ್ರತಿಯನ್ನು ನೀಡಿದ್ದೆ. ಒಂದು ವೇಳೆ ಪೊಲೀಸ್ ಅಥವಾ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರೆ ಆ ಸಂದರ್ಭದಲ್ಲಿ ಸರ್ಕಾರದ ಆದೇಶ ಪ್ರತಿ ತೋರಿಸಿ ಎಂದು ತಿಳಿಸಿದೆ.

ಈಗಾಗಲೇ ಗುಟ್ಕಾ ನಿಷೇಧವಿರುವ ನೆರೆಯ ಮಹಾರಾಷ್ಟ್ರದಲ್ಲಿ ಈ ನೂತನ ಪಾನ್ಮಸಾಲ ಮತ್ತು ತಂಬಾಕು ಪ್ಯಾಕೆಟ್ ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತಿದ್ದು, ಹೆಚ್ಚು ಜನಪ್ರಿಯವಾಗಿದೆ. ಅದೇ ತಂತ್ರವನ್ನು ರಾಜ್ಯದಲ್ಲೂ ಗುಟ್ಕಾ ಕಂಪೆನಿಗಳು ಅನುಸರಿಸತೊಡಗಿವೆ.
`ಸ್ಟಾರ್' ಗುಟ್ಕಾ ತಯಾರಿಕಾ ಕಂಪೆನಿಯು ಈ ವಿಶೇಷವಾದ ಪಾನ್ಮಸಾಲ ಮತ್ತು ತಂಬಾಕು ಪ್ಯಾಕೆಟ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಗುಟ್ಕಾ ಪ್ರಿಯರು ಇದೀಗ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಿ ಮಿಶ್ರ ಮಾಡಿ ತಿನ್ನತೊಡಗಿದ್ದಾರೆ.

ಈ ಕುರಿತು `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಬಾಗಲಕೋಟೆಯ ಪಾನ್ಶಾಪ್ ಮಾಲೀಕ ಸತೀಶ ಶೆಟ್ಟಿ, `ಗುಟ್ಕಾ ನಿಷೇಧವಾದ ಬಳಿಕ ಪಾನ್ಬೀಡಾ, ಎಲೆ ಅಡಿಕೆಗೆ ಬೇಡಿಕೆ ಹೆಚ್ಚಿತ್ತು. ಇದೀಗ `ಸ್ಟಾರ್' ಪಾನ್ ಮಸಾಲ ಮತ್ತು ತಂಬಾಕು ಪ್ಯಾಕೆಟ್ಗಳನ್ನು ಪೂರೈಕೆ ಮಾಡುತ್ತಿರುವುದರಿಂದ ಎರಡು ದಿನಗಳಿಂದ ಈ ಪ್ಯಾಕೆಟ್ಗೆ ಗುಟ್ಕಾ ಸೇವಿಸುವವರಿಂದ ಬೇಡಿಕೆ ಹೆಚ್ಚಿದೆ' ಎಂದರು.

ಸೂಕ್ತ ಕ್ರಮ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಿ.ಡಿ. ಕಿತ್ತೂರ `ಪ್ರಜಾವಾಣಿ'ಯೊಂದಿಗೆ ಮಾತನಾಡಿ, `ಗುಟ್ಕಾ ಕಂಪೆನಿಗಳು ಕಾನೂನನ್ನು ತಮಗೆ ಬೇಕಾದಂತೆ ತಿರುಚಿ ಗುಟ್ಕಾವನ್ನು ಪರೋಕ್ಷವಾಗಿ ಮಾರಾಟ ಮಾಡಲು ಬಿಡುವುದಿಲ್ಲ. ಗುಟ್ಕಾ ಹೋಲುವ ಎಲ್ಲ ಬಗೆಯ ಪಾನ್ಮಸಾಲಾವನ್ನು ನಿಷೇಧಿಸಲಾಗುವುದು, ಗುಟ್ಕಾ ಕಂಪೆನಿಗಳು ಮಾರಾಟ ಮಾಡುತ್ತಿರುವ ಪಾನ್ ಮಸಾಲ ಮತ್ತು ತಂಬಾಕು ಪ್ಯಾಕೆಟ್ ಎರಡನ್ನೂ ಸಂಗ್ರಹಿಸಿ ಬೆಳಗಾವಿಯಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಲಿದ್ದೇವೆ. ಅಲ್ಲಿಂದ ವರದಿ ಬಂದ ಬಳಿಕ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತೇವೆ' ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.