ಗುರುವಾರ , ಮೇ 19, 2022
23 °C

ಕೊಡುಗೆ ಕೊಡಿ ಪ್ಲೀಸ್..!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಡುಗೆ ಕೊಡಿ ಪ್ಲೀಸ್..!

`ಹುಟ್ಟುಹಬ್ಬಕ್ಕೆ ಉಡುಗೊರೆ ಕೊಡಿ, ಧಾರಾಳವಾಗಿ ದೇಣಿಗೆ ನೀಡಿ, ಶನಿವಾರ ನನ್ನ ಹುಟ್ಟುಹಬ್ಬಪ್ಲೀಸ್...~ ಅಂತ ಸೋನಂ ಕಪೂರ್ ಟ್ವೀಟಿಸಿದ್ದಾರೆ.ಕಾರಣ ಇಷ್ಟೆ, ಅವರು ಓಗಾನ್ ಕ್ಯಾನ್ಸರ್ ಫೌಂಡೇಶನ್ ಜೊತೆಗೆ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಕೈಜೋಡಿಸಿದ್ದಾರೆ.`ನಮ್ಮಲ್ಲಿ ಯಾರೊಬ್ಬರಾದರೂ ಈ ಕ್ಯಾನ್ಸರ್‌ಗೆ ಬಲಿಯಾದವರು ಇರಬಹುದು. ಸ್ತನ ಕ್ಯಾನ್ಸರ್‌ನಿಂದಾಗಿಯೇ ನನ್ನ ಆಂಟಿಯನ್ನು ಕಳೆದುಕೊಂಡೆ. ಹೀಗೆ ನಮ್ಮಲ್ಲಿ ನಾವು ಯಾರನ್ನಾದರೂ ಕಳೆದುಕೊಳ್ಳುವ ಆತಂಕ ಇದ್ದೇ ಇರುತ್ತದೆ. ಆಗನ್ ಸಂಸ್ಥೆಯು ಸ್ತನ ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸಲು ಹೋರಾಡುತ್ತಿದೆ. ನೀವೆಲ್ಲ ಕೊಡುಗೈದಾನಿಗಳಾದರೆ ಈ ಸಂಸ್ಥೆಗೆ ಅನುಕೂಲವಾಗುತ್ತದೆ. ನನ್ನ ಹುಟ್ಟುಹಬ್ಬಕ್ಕೆ ಇಷ್ಟೂ ಕೊಡುಗೆ ಕೊಡಲಾರಿರಾ?~ ಎಂದೆಲ್ಲ ಸೋನಂ ಕೇಳಿದ್ದಾರೆ.ಅಂದಹಾಗೆ, ಸೋನಂ ಕಪೂರ್‌ಗೆ ಜೂನ್ 9ರಂದು 27 ವರ್ಷ ತುಂಬಿತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.