ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ರಸ್ತೆ ಅಭಿವೃದ್ಧಿಗೆ ವೆಚ್ಚ ಮಾಡಿರುವ ಹಣ ಎಷ್ಟು ಗೊತ್ತೆ? ಬರೋಬ್ಬರಿ 2,500 ಕೋಟಿ ರೂಪಾಯಿ. ಹಾಗಿದ್ದರೂ ಪ್ರಸ್ತುತ ನಗರದ ಬಹುಪಾಲು ಪ್ರಮುಖ ರಸ್ತೆಗಳು ಹಾಳಾಗಿದ್ದು, ಜನತೆ ತೊಂದರೆ ಅನುಭವಿಸುವುದು ಮಾತ್ರ ತಪ್ಪಿಲ್ಲ.

ಹಾಗಾಗಿ, ಕಾಮಗಾರಿಯ ಗುಣಮಟ್ಟ ಹಾಗೂ ಹಣ ವಿನಿಯೋಗಿ ಸಿರುವ ಬಗ್ಗೆಯೇ ಅನುಮಾನ ಮೂಡಲಾರಂಭಿಸಿದೆ.ಮೂರು ವರ್ಷಗಳ ಅವಧಿಯಲ್ಲಿ 923 ಕಿ.ಮೀ. ಉದ್ದದ ಆರ್ಟಿರಿಯಲ್ ರಸ್ತೆಗಳು ಹಾಗೂ 1,017 ಕಿ.ಮೀ. ಉದ್ದದ ಸಬ್ ಆರ್ಟಿರಿಯಲ್ ರಸ್ತೆಗಳ ಅಭಿವೃದ್ಧಿಗೆ 2,500 ಕೋಟಿ ರೂಪಾಯಿ ವೆಚ್ಚ ಮಾಡಿರುವುದಾಗಿ ಪಾಲಿಕೆ ಮೂಲಗಳು ದೃಢಪಡಿಸಿವೆ.

ಅಲ್ಲದೇ, ಇನ್ನಷ್ಟು ರಸ್ತೆಗಳಿಗೆ ಡಾಂಬರೀಕರಣ ಮತ್ತು ರಸ್ತೆ ನಿರ್ವಹಣಾ ಕಾಮಗಾರಿಗಳನ್ನು ಮುಂದು ವರಿದ ಕಾಮಗಾರಿಗಳ ಹೆಸರಿನಲ್ಲಿ 2011-12ನೇ ಸಾಲಿನ ಬಜೆಟ್ನಲ್ಲಿ ಸೇರಿಸಲಾಗಿದೆ. ಪರಿಣಾಮವಾಗಿ ರಸ್ತೆ ಅಭಿವೃದ್ಧಿ, ಗ್ರೇಡ್ ಸೆಪರೇಟರ್ಗಳ ನಿರ್ಮಾಣ, ಮಳೆ ನೀರು ಕಾಲುವೆಗಳ ಅಭಿವೃದ್ಧಿ ಸೇರಿದಂತೆ ಮುಂದುವರಿದ ಕಾಮಗಾರಿಗಳಿಗೆ ಸುಮಾರು 4,561 ಕೋಟಿ ರೂಪಾಯಿ ವೆಚ್ಚ ಮಾಡಬೇಕಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

`2010-11ನೇ ಸಾಲಿನ ಆಯವ್ಯಯ ಮಂಡನೆ ವಿಳಂಬವಾಗಿದ್ದರಿಂದ ಮುಂದುವರಿದ ಕಾಮಗಾರಿಗಳ ಹೆಚ್ಚಳಕ್ಕೆ ಕಾರಣವಾಗಿದೆ. ಆರು ತಿಂಗಳು ತಡವಾಗಿ ಬಜೆಟ್ ಮಂಡನೆಯಾಗಿದ್ದರಿಂದ ಟೆಂಡರ್ ಆಹ್ವಾನಿಸುವುದು, ಜಾಬ್ ಕೋಡ್ ಪಡೆಯುವುದು ವಿಳಂಬವಾಯಿತು. ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಯಿತು~ ಎಂದು ಪಾಲಿಕೆ ಮೂಲಗಳು ತಿಳಿಸಿವೆ.

ಬಿಬಿಎಂಪಿ ವೈಫಲ್ಯ:`ನಗರದ ರಸ್ತೆಗಳ ಸದ್ಯದ ಸ್ಥಿತಿಯನ್ನು ಗಮನಿಸಿದರೆ ರಸ್ತೆಗಳ ಗುಣಮಟ್ಟ ಕಾಪಾಡುವಲ್ಲಿ ಮತ್ತು ನಿರ್ವಹಣೆ ಮಾಡುವಲ್ಲಿ ಪಾಲಿಕೆ ವಿಫಲವಾಗಿರುವುದು ಸಾಬೀತಾಗುತ್ತದೆ. ಟೆಂಡರ್ ನೀಡಿಕೆಯಲ್ಲಿನ ಅವ್ಯವಹಾರ ಹಾಗೂ ಕಳಪೆ ನಿರ್ವಹಣೆಯಿಂದಾಗಿ ರಸ್ತೆಗಳು ಹಾಳಾಗಿವೆ~ ಎಂದು ಇಂಡಿಯನ್ ರೋಡ್ ಕಾಂಗ್ರೆಸ್ನ (ಐಆರ್ಸಿ) ಸದಸ್ಯ ಎಂ.ಎನ್. ಶ್ರೀಹರಿ ದೂರಿದರು.

ಒಂದು ಕಿ.ಮೀ. ಉದ್ದದ ರಸ್ತೆಯ ಅಭಿವೃದ್ಧಿಗೆ 60ರಿಂದ 80 ಲಕ್ಷ ರೂಪಾಯಿ ವೆಚ್ಚವಾಗುತ್ತದೆ ಎಂದು ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ. ಆದರೆ ಒಂದು ಕೋಟಿ ರೂಪಾಯಿ ವೆಚ್ಚ ಮಾಡಿದರೆ ಒಂದು ಕಿ.ಮೀ. ಉದ್ದದ ಹೊಸ ರಸ್ತೆಯನ್ನೇ ನಿರ್ಮಾಣ ಮಾಡಬಹುದು ಎಂದು ಐಆರ್ಸಿ ಮೂಲಗಳು ತಿಳಿಸಿವೆ.

2011-12ನೇ ಸಾಲಿನಲ್ಲಿ ಬಜೆಟ್ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟು 4,500 ಕೋಟಿ ರೂಪಾಯಿ ಹಣ ಕಾಯ್ದಿರಿಸಲಾಗಿದೆ. ಅಲ್ಲದೇ ವಾರ್ಡ್ ಅಭಿವೃದ್ಧಿಗಾಗಿ ಪ್ರತಿ ವಾರ್ಡ್ಗಳಿಗೆ ನೀಡಲಾಗಿರುವ 20 ಲಕ್ಷ ರೂಪಾಯಿ ಅನುದಾನವನ್ನು ರಸ್ತೆಗಳ ನಿರ್ವಹಣೆಗೆ ವೆಚ್ಚ ಮಾಡಲು ಬಳಸಬಹುದಾಗಿದೆ. ಇಷ್ಟೆಲ್ಲಾ ಹಣ ಸಮರ್ಪಕವಾಗಿ ಬಳಕೆಯಾದರೆ ನಗರದ ರಸ್ತೆಗಳ ಸ್ವರೂಪವೇ ಬದಲಾಗಿದೆ. ಆದರೆ ಹಣ ಸೂಕ್ತವಾಗಿ ಬಳಕೆಯಾಗುವುದಿಲ್ಲ ಎಂಬುದನ್ನು ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.