ಕ್ರಿಕೆಟ್: ಇಲೆವೆನ್ ಸಾಧಾರಣ ಮೊತ್ತ

ಬೆಂಗಳೂರು: ಅಶೋಕ್ ದಿಂಡಾ (41ಕ್ಕೆ3) ಮತ್ತು ಇಶಾನ್ ಪೊರೆಲ್ (23ಕ್ಕೆ3) ಅವರ ದಾಳಿಗೆ ಕಂಗೆಟ್ಟ ಕೆಎಸ್ಸಿಎ ಇಲೆವೆನ್ ತಂಡ ರಾಜ್ಯ ಕ್ರಿಕೆಟ್ ಸಂಸ್ಥೆ ಆಶ್ರಯದ ತಿಮ್ಮಪ್ಪಯ್ಯ ಸ್ಮಾರಕ ಆಹ್ವಾನಿತ ಕ್ರಿಕೆಟ್ ಟೂರ್ನಿಯ ಬಂಗಾಳ ಕ್ರಿಕೆಟ್ ಸಂಸ್ಥೆ ವಿರುದ್ಧದ ಫೈನಲ್ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ಕುಸಿದಿದೆ.
ಆಲೂರಿನ ಒಂದನೇ ಮೈದಾನದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಎಸ್ಸಿಎ ಇಲೆವೆನ್ ಮೊದಲ ಇನಿಂಗ್ಸ್ನಲ್ಲಿ 130ರನ್ಗಳಿಗೆ ಆಲೌಟ್ ಆಯಿತು.
ಪ್ರಥಮ ಇನಿಂಗ್ಸ್ ಆರಂಭಿಸಿರುವ ಬಂಗಾಳ ಕ್ರಿಕೆಟ್ ಸಂಸ್ಥೆ ದಿನದಾಟದ ಅಂತ್ಯಕ್ಕೆ 30 ಓವರ್ಗಳಲ್ಲಿ 1 ವಿಕೆಟ್ಗೆ 93ರನ್ ಗಳಿಸಿದೆ.
ಸ್ಕೋರ್: ಕೆಎಸ್ಸಿಎ ಇಲೆವೆನ್: ಮೊದಲ ಇನಿಂಗ್ಸ್: ಓವರ್ಗಳಲ್ಲಿ 130 (ಮಯಂಕ್ ಅಗರವಾಲ್ 26, ಅಬ್ರಾರ್ ಖಾಜಿ 27, ಡೇವಿಡ್ ಮಥಿಯಾಸ್ 22; ಅಶೋಕ್ ದಿಂಡಾ 41ಕ್ಕೆ3, ಇಶಾನ್ ಪೊರೆಲ್ 23ಕ್ಕೆ3, ಪ್ರಗ್ಯಾನ್ ಓಜಾ 37ಕ್ಕೆ2). ಬಂಗಾಳ ಕ್ರಿಕೆಟ್ ಸಂಸ್ಥೆ: ಪ್ರಥಮ ಇನಿಂಗ್ಸ್: 30 ಓವರ್ಗಳಲ್ಲಿ 1 ವಿಕೆಟ್ಗೆ 93 (ಪ್ರಸೆನ್ಜಿತ್ ದಾಸ್ ಬ್ಯಾಟಿಂಗ್ 51, ಸುದೀಪ್ ಚಟರ್ಜಿ ಬ್ಯಾಟಿಂಗ್ 12; ಕೆ. ಗೌಥಮ್ 16ಕ್ಕೆ1).
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.