ಭಾನುವಾರ, ಏಪ್ರಿಲ್ 18, 2021
32 °C

ಕ್ವಾರ್ಟರ್ ಫೈನಲ್‌ಗೆ ಭೂಪತಿ-ಬೋಪಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿನ್ಸಿನಾಟಿ (ಐಎಎನ್‌ಎಸ್): ಮಹೇಶ್ ಭೂಪತಿ ಹಾಗೂ ರೋಹನ್ ಬೋಪಣ್ಣ ಇಲ್ಲಿ ನಡೆಯುತ್ತಿರುವ ಸಿನ್ಸಿನಾಟಿ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಡಬಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.ಹಾಲೆಂಡ್‌ನ ರಾಬಿನ್ ಹಾಸ್ ಹಾಗೂ ಜುವಾನ್ ಮೊನಾಕೊ ಕಣಕ್ಕಿಳಿಯದ ಕಾರಣ ಭೂಪತಿ ಹಾಗೂ ಬೋಪಣ್ಣ ಅವರಿಗೆ ವಾಕ್‌ಓವರ್ ಲಭಿಸಿತು. ಭಾರತದ ಈ ಆಟಗಾರರು ಮುಂದಿನ ಸುತ್ತಿನಲ್ಲಿ ಪೋಲೆಂಡ್‌ನ ಮಾರಿಸ್ ಫಿರ್ಸ್ಟೆಬರ್ಗ್ ಹಾಗೂ ಮಾರ್ಸಿನ್ ಮಟ್ಕೊವಸ್ಕಿ ಎದುರು ಆಡಲಿದ್ದಾರೆ.ಇದಕ್ಕೂ ಮುನ್ನ ಲಿಯಾಂಡರ್ ಪೇಸ್ ಹಾಗೂ ಅವರ ಜೊತೆಗಾರ ಜೆಕ್ ಗಣರಾಜ್ಯದ ರಾಡೆಕ್ ಸ್ಟೆಪಾನೆಕ್ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ 3-6, 6-4, 5-10ರಲ್ಲಿ ಕ್ರೊವೇಷ್ಯಾದ ಇವಾನ್ ಡೊಡಿಗ್ ಹಾಗೂ ಬ್ರೆಜಿಲ್‌ನ ಮಾರ್ಸೆಲ್ ಮೆಲೊ ಎದುರು ಸೋಲುಕಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.