ಬೆಂಗಳೂರು: `ಮುಂದಿನ ಸಂಸತ್ ಅಧಿವೇಶನದಲ್ಲಿ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಮಸೂದೆ ಮಂಡನೆಗೆ ಒತ್ತಾಯಿಸಿ ಏಪ್ರಿಲ್ 21 ರಂದು ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಲಾಗುವುದು~ ಎಂದು ಅಖಿಲ ಭಾರತ ಪರಿಶಿಷ್ಟ ಜಾತಿ/ ಪಂಗಡದ ಸಂಘ ಸಂಸ್ಥೆಗಳ ಒಕ್ಕೂಟ (ಎಐಸಿಎಸ್ಒ) ರಾಜ್ಯ ಘಟಕದ ಸಂಚಾಲಕ ಜೆ. ಶ್ರೀನಿವಾಸ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, `ದೇಶದಲ್ಲಿ ಎಲ್ಲ ಸೇವೆಗಳು ಜಾಗತಿಕ ವ್ಯವಸ್ಥೆಗೆ ಪಲ್ಲಟಗೊಂಡು ಖಾಸಗಿ ಮತ್ತು ಅರೆಸರ್ಕಾರಿ ವ್ಯವಸ್ಥೆ ಜಾರಿಗೆ ಬಂದಿದೆ. ಇಂತಹ ಸಂದರ್ಭದಲ್ಲಿ ಸಮಾಜದಲ್ಲಿ ಸಮಾನ ಅವಕಾಶ ಕಲ್ಪಿಸುವ ದೃಷ್ಟಿಯಿಂದ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಒಳಿತಿಗಾಗಿ ನಮ್ಮ ಸಂಘಟನೆ ದುಡಿಯುತ್ತಿದೆ~ಎಂದರು.

`ಎಸ್ಡಬ್ಲುಎ, ಎಸ್ಎಸ್ಡಿ, ಎಸ್ಬಿಐ ಮತ್ತು ಸೇವಾಸ್ಫೆಡ್~ ಅಧ್ಯಕ್ಷ ಎಂ.ವೆಂಕಟಸ್ವಾಮಿ ಕೆನರಾ ಬ್ಯಾಂಕ್ ಎಸ್ಸಿ/ಎಸ್ಟಿ ನೌಕರರ ಕಲ್ಯಾಣ ಸಂಘದ ಅಧ್ಯಕ್ಷ ಪುರುಷೋತ್ತಮ ದಾಸ್, ಕರ್ನಾಟಕ ದಲಿತ ನೌಕರರ ಒಕ್ಕೂಟದ ಅಧ್ಯಕ್ಷ ಹೆಣ್ಣೂರು ಶ್ರೀನಿವಾಸ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.